ಕಠ್ಮಂಡು, ಆ 21 ಭಾರತ-ನೇಪಾಳದ ಐದನೇ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಕಠ್ಮಂಡು ತಲುಪಿದ್ದು, ನೇಪಾಳದ ವಿದೇಶಾಂಗ ಕಾರ್ಯದಶರ್ಿ ಶಂಕರ್ ದಾಸ್ ಬೈರಾಗಿ ಮತ್ತು ನೇಪಾಳದಲ್ಲಿನ ಭಾರತದ ರಾಯಭಾರಿ ನೀಲಾಂಬರ್ ಆಚಾರ್ಯ ಬರಮಾಡಿಕೊಂಡರು. ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗಯಾವಲಿ ಮತ್ತು ಡಾ.ಜೈಶಂಕರ್ ಅವರು ಸಭೆಯ ಸಹ -ಅಧ್ಯಕ್ಷತೆ ವಹಿಸಲಿದ್ದು, ದ್ವಿಪಕ್ಷೀಯ ಸಂಬಂಧದ ಕುರಿತು ಉಭಯ ಮುಖಂಡರೂ ಚರ್ಚಿಸಲಿದ್ದಾರೆ ಎಂದು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಭಾರತ-ನೇಪಾಳ ಆಯೋಗ 1987ರ ಜೂನ್ ತಿಂಗಳಲ್ಲಿ ಸ್ಥಾಪನೆಯಾಯಿತು. ಇದರ ಸಭೆಗಳು ಒಮ್ಮೆ ಭಾರತದಲ್ಲಿ ಹಾಗೂ ಮತ್ತೊಮ್ಮೆ ನೇಪಾಳದಲ್ಲಿ ನಡೆಯುತ್ತದೆ ಕಳೆದ ಸಭೆಯನ್ನು 2016ರ ಅಕ್ಟೋಬರ್ ನಲ್ಲಿ ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಭಾರತ-ನೇಪಾಳ ಆಯೋಗದ ಸಭೆಯ ನಡುವೆ ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಮತ್ತು ಪ್ರಧಾನಿ ಕೆ ಪಿ ಶರ್ಮಾ ಒಲಿಯವರನ್ನು ಎಸ್ ಜೈಶಂಕರ್ ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.