ಹೈದರಾಬಾದ್, ಜೂನ್ ೮, ಭಾರತ ಸೇನಾ ಪ್ರತಿನಿಧಿಗಳು, ಚೈನಾ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆಯಲ್ಲಿ ಏನು ಚರ್ಚೆ ನಡೆದಿದೆ ಎಂಬುದನ್ನು ದೇಶದ ಜನರು ತಿಳಿದುಕೊಳ್ಳಲು ಅದನ್ನು ಬಹಿರಂಗಪಡಿಸಬೇಕು ಎಂದು ಸಂಸದ, ಎಂ ಐ ಎಂ ಅಧ್ಯಕ್ಷ ಅಸದುದ್ದೀನ್ ಒವೈಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ವಿಷಯದಲ್ಲಿ ಕೇಂದ್ರ ಸರ್ಕಾರ ಏಕೆ ? ಮೌನವಾಗಿದೆ ಎಂಬುದನ್ನೂ ಸಹ ದೇಶದ ಜನರಿಗೆ ತಿಳಿಸಬೇಕು ಎಂದು ಅವರು ಹೇಳಿದ್ದಾರೆ. ಲಡಾಖ್ ನಲ್ಲಿ ಭಾರತದ ಭೂ ಭಾಗವನ್ನು ಚೈನಾ ಸೇನೆ ಅತಿಕ್ರಮಿಸಿದೆಯೋ, ಇಲ್ಲವೋ ಎಂಬುದನ್ನು ಕೇಂದ್ರ ಸರ್ಕಾರ ಮೊದಲು ಸ್ಪಷ್ಟಪಡಿಸಬೇಕು ಎಂದು ಒವೈಸಿ ಒತ್ತಾಯಿಸಿದ್ದಾರೆ.ಲಡಾಖ್ ಗಡಿಯಲ್ಲಿರುವ ನಿಯಂತ್ರಣ ರೇಖೆ ಬಳಿ ಭಾರತ, ಚೈನಾ ಗಡಿ ವಿವಾದ ಸೃಷ್ಟಿಯಾಗಿದೆ, ವಿವಾದ ಪರಿಹರಿಸಲು ಉಭಯ ದೇಶಗಳ ಸೇನಾ ಮಟ್ಟದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.