ಶೃಂಗಸಭೆಯಿಂದ ಭಾರತ-ಚೀನಾ ಸಂಬಂಧವೃದ್ಧಿ: ಪ್ರಧಾನಿ ಮೋದಿ

ಚೆನ್ನೈ, ಅ 11:  ಚೀನಾ ಹಾಗೂ ಭಾರತದ ನಡುವಿನ ಎರಡು ದಿನಗಳ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚೆನ್ನೈಗೆ ಆಗಮಿಸಿದರು.  

ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಶೃಂಗಸಭೆಯು ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲಿದೆ.  ಚೀನಾ ಅಧ್ಯಕ್ಷರ ಆತಿಥ್ಯವನ್ನು ತಮಿಳುನಾಡು ವಹಿಸಿಕೊಂಡಿರುವುದು ಸಂತೋಷ ಎಂದರು.  

ಚೆನ್ನೈನಿಂದ ಸುಮಾರು 55 ಕಿಮೀ ದೂರದಲ್ಲಿರುವ ಮಹಾಬಲಿಪುರಂನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ ಭಾಗವಹಿಸಲಿದ್ದಾರೆ.  

ಚೆನ್ನೈಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸ್ವಾಗತಿಸಿದರು.  ಈ ವೇಳೆ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಉಪಮುಖ್ಯಮಂತ್ರಿಒ ಪನ್ನೀರ್ಸೆಲ್ವಂ, ಮಂತ್ರಿಗಳಾದ ಪಿ.ತಂಗಮಣಿ ಮತ್ತಿತರರು ಹಾಜರಿದ್ದರು. 

ಆನಂತರ ಹೆಲಿಕಾಪ್ಟರ್ ಮೂಲಕ ತಿರುವಿತಾಂತೈಗೆ ತಲುಪಿದ ಪ್ರಧಾನಿ, ಮಹಾಬಲಿಪುರಂನ ವಿಶ್ವ ಯುನೆಸ್ಕೋ ಪರಂಪರೆಯ ತಾಣವನ್ನು ಬಿಗಿ ಭದ್ರತೆಯ ನಡುವೆ ರಸ್ತೆ ಮಾರ್ಗವಾಗಿ ತಲುಪಿದರು 

ಹೆಲಿಪ್ಯಾಡ್ನಲ್ಲಿ ಅವರನ್ನು ಬಿಜೆಪಿಯ ಹಿರಿಯ ಮುಖಂಡರು ಮತ್ತು ಸಚಿವರು ಸ್ವಾಗತಿಸಿದರು. 

ಸಂಜೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಕ್ಸಿ ಜಿನ್ ಪಿಂಗ್ ಅವರನ್ನು ಪ್ರಧಾನಿ ಮೋದಿ ಬರಮಾಡಿಕೊಳ್ಳಲಿದ್ದಾರೆ.  ನಂತರ ಉಭಯ ಮುಖಂಡರು ಶೋರ್ ದೇವಾಲಯ, ಅಜರ್ುನ ತಪಸ್ಸು ಮಾಡಿದ ಸ್ಥಳ ಹಾಗೂ ಪಂಚರಥಗಳ ದರ್ಶನ ಪಡೆಯಲಿದ್ದಾರೆ.