ಬೆಂಗಳೂರು, ಜ 20,ಭಾನುವಾರ ಮೂರನೇ ಏಕದಿನ ಪಂದ್ಯದಲ್ಲಿ ಸೋತು ಏಕದಿನ ಸರಣಿಯನ್ನು ಕಳೆದುಕೊಂಡ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಭಾರತ ತಂಡದ ಡೆತ್ ಬೌಲಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಅವರ 127 ರನ್ ಗಳ ದೊಡ್ಡ ಜತೆಯಾಟದ ಹೊರತಾಗಿಯೂ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಆಸ್ಟ್ರೇಲಿಯಾ ತಂಡ ವಿಫಲವಾಗಿತ್ತು. ನಿಗದಿತ 50 ಓವರ್ ಗಳಿಗೆ 9 ವಿಕೆಟ್ ನಷ್ಟಕ್ಕೆ 286 ರನ್ ಗಳಿಗೆ ಶಕ್ತವಾಗಿತ್ತು. ಬ್ಯಾಟಿಂಗ್ ಸ್ನೇಹಿ ಪಿಚ್ ಆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಗಳ ಸುಲಭ ಜಯ ಸಾಧಿಸಿತ್ತು.ಕೊನೆಯ 10 ಓವರ್ ಗಳಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಮೂರು ಓವರ್ ಗಳಲ್ಲಿ ಭಾರತೀಯ ಬೌಲರ್ ಗಳು ನೀಡಿದ್ದು ಕೇವಲ 13 ರನ್ ಮಾತ್ರ. ಈ ಬಗ್ಗೆ ಮಾತನಾಡಿ, "ನಮ್ಮ ಬ್ಯಾಟ್ಸ್ ಮನ್ ಗಳು ಕೊನೆಯ ಓವರ್ ಗಳಲ್ಲಿ ನಿಯಮಿತವಾಗಿ ರನ್ ಗಳಸುವಲ್ಲಿ ವಿಫಲವಾದರು," ಎಂದು ಹೇಳಿದರು.
"ಕಳೆದ ಎರಡೂ ಪಂದ್ಯಗಳಲ್ಲಿ ಕೊನೆಯ ಓವರ್ ಗಳಲ್ಲಿ ಬೌಲರ್ ಗಳೇ ಬ್ಯಾಟಿಂಗ್ ಮಾಡಿದ್ದಾರೆ. ರಾಜ್ ಕೋಟ್ ನಲ್ಲಿ ಕೆ.ಎಲ್ ರಾಹುಲ್ ಕೊನೆಯ ಹಂತದಲ್ಲಿ ನಮಗೆ ಕಾಡಿದ್ದರು. ಆ ಒಂದು ಜಾಗದಲ್ಲಿ ನಾವು ಸರಿಯಾಗಿ ನಿರ್ವಹಿಸಿಲ್ಲ," ಎಂದು ತಿಳಿಸಿದರು.ರಾಜ್ ಕೋಟ್ ಹಾಗೂ ಬೆಂಗಳೂರಿನ ಪಂದ್ಯಗಳಲ್ಲಿ ಡೆತ್ ಓವರ್ ಗಳಲ್ಲಿ ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ ಹಾಗೂ ನವದೀಪ್ ಸೈನಿ ಅವರ ಬೌಲಿಂಗ್ ಮೆಟ್ಟಿನಿಲ್ಲುವಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ವಿಫಲರಾಗಿದ್ದರು. ವಿಶೇಷವಾಗಿ ಇವರು ಯಾರ್ಕರ್ ಪ್ರಯೋಗ ಮಾಡುವ ಮೂಲಕ ರನ್ ಗಳಿಗೆ ಕಡಿವಾಣ ಹಾಕುತ್ತಿದ್ದರು.ಶಮಿ ಯಾರ್ಕರ್ ದಾಳಿ ನಡೆಸಿದ್ದರು. ಇವರಿಗೆ ಮತ್ತೊಂದು ತುದಿಯಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ನವದೀಪ್ ಸೈನಿ ಕೂಡ ಸಾಥ್ ನೀಡುತ್ತಿದ್ದರು. ಯಾವ ಹಂತದಲ್ಲಿ ನಾವು ಸುಧಾರಣೆಯಾಗಬೇಕು ಎಂಬ ಬಗ್ಗೆ ಅರಿವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಟೀಮ್ ಇಂಡಿಯಾದ ಡೆತ್ ಓವರ್ ಮಾತ್ರ ಅತ್ಯುತ್ತಮವಾಗಿ," ಎಂದು ಫಿಂಚ್ ಶ್ಲಾಘಿಸಿದ್ದಾರೆ.