ಬೆಂಗಳೂರು, ಫೆ
02 - ಪ್ರವಾಹಪೀಡಿತ ಮಡಗಾಸ್ಕರ್ ಗೆ ಭಾರತ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ ಎಂದು ವಿದೇಶಾಂಗ
ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಭಾನುವಾರ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಐ ಎನ್ ಎಸ್ ಐರಾವತ ನೌಕೆಯ
ಮೂಲಕ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ ಎಂದಿದ್ದಾರೆ. ದ್ವೀಪ ರಾಷ್ಟ್ರದ ವಿಕೋಪಕ್ಕೆ ಪರಿಹಾರ
ಸಾಮಗ್ರಿಗಳನ್ನು ಕಳುಹಿಸುವ ಮೂಲಕ ತಕ್ಷಣವೇ ಪ್ರತಿಕ್ರಯಿಸಿರುವ
ಮೊದಲ ದೇಶ ಭಾರತ ಎಂದು ಹೇಳಿದ್ದಾರೆ.
ಚಂಡಮಾರುತ ಮತ್ತು ಪ್ರವಾಹದಿಂದಾಗಿ ಮಡಗಾಸ್ಕರ್ ಕಳೆದೊಂದು
ತಿಂಗಳಿನಿಂದ ತತ್ತರಿಸಿದ್ದು ಅನೇಕರು ಸಾವನ್ನಪ್ಪಿದ್ದು
ಹಲವರು ಅಶ್ರಯ ಕಳೆದುಕೊಂಡಿದ್ದಾರೆ. ಸುಮಾರು ೯೨,೦೦೦
ಕ್ಕೂ ಅಧಿಕ ಮಂದಿ ಪ್ರವಾಹಪೀಡಿತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.