ಇಂಡಿ ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಕವಚ ರಚನೆ

Indi Taluk Hospital Health Shield Structure

ಇಂಡಿ ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಕವಚ ರಚನೆ

ಇಂಡಿ 27: ತಾಲೂಕ ಆಸ್ಪತ್ರೆ ಆರೋಗ್ಯ ರಕ್ಷಾ ಕವಚ ಸಮಿತಿಯನ್ನು ರಚಿಸಲಾಯಿತು. ನೂತನವಾಗಿ ಆಯ್ಕೆಯಾದ ಸದಸ್ಯರ ಸನ್ಮಾನ ಸಮಾರಂಭ ಸಿ ವಿ ರಾಮನ್ ಪಿಯು ಕಾಲೇಜ್ ಇಂಡಿ ಆಡಳಿತ ಮಂಡಳಿ ವತಿಯಿಂದ ನೂತನವಾಗಿ ಆಯ್ಕೆಯಾದ ರಕ್ಷಾಕವಚ ಸಮಿತಿಯ ಸದಸ್ಯ ಸುಧೀರ್ ಕರಕಟ್ಟಿ, ಸತೀಶ್ ಕುಂಬಾರ ಡಾ. ರಾಜಶೇಖರ್ ತೋಳನೂರ ಮತ್ತು ರಾಜು ಪತಂಗೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.  

ಸತೀಶ್ ಕುಂಬಾರ ಅವರು ಮಾತನಾಡಿ ಸಮಾಜದ ಸೇವೆ ನಾವೆಲ್ಲರೂ ನಮ್ಮ ಕುಟುಂಬದ ಜೊತೆ ಸಮಾಜದ ಉದ್ಧಾರಕ್ಕಾಗಿ ಕೈಜೋಡಿಸಬೇಕು ಮತ್ತು ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಭವಿಷ್ಯದಲ್ಲಿ ಉತ್ತಮ ಅಧಿಕಾರಿ, ಹಾಗೂ ನಾಯಕರಾಗಬೇಕೆಂದು ಹೇಳಿದರು.  

ಸಂಸ್ಥೆಯ ಕಾರ್ಯದರ್ಶಿ ವರ್ಧಮಾನ್ ಮಹಾವೀರ್ ಮಾತನಾಡಿ ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಸದಸ್ಯರಿಗೆ ಅಭಿನಂದನೆಗಳು ತಿಳಿಸಿದರು. ಇನ್ನೋರ್ವ ಆಡಳಿತ ಮಂಡಳಿಯ ಸದಸ್ಯ ಸನ್ಮತಿ ಹಳ್ಳಿ ಮಾತನಾಡಿ ಸ್ವಸ್ಥ ಸಮಾಜಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಸಂಸ್ಥೆಯ ಸಂಸ್ಥಾಪಕ ಶಿವಾನಂದ ಕಾಮಗೊಂಡ ಅವರು ಮಾತನಾಡಿ ಅಲ್ಪ ಸಮಯವಾದರೂ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ತೊಡಗಬೇಕೆಂದು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷ ಶೈಲೇಶ್ ಬಿಳಗಿ, ಪ್ರಸನ್ನ ಕುಮಾರ್ ನಾಡಗೌಡ ವಕೀಲರು, ಶೋಭಾ ನಾರಾಯಣಕರ್, ಶೈಲಜಾ, ವೆಂಕಟೇಶಬಾಬು ಖೇಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.