ಸ್ವಾತಂತ್ರ್ಯೋತ್ಸವ ಅದ್ಧೂರಿ ಆಚರಣೆ ನಿರ್ಧಾರ: ತಹಶೀಲ್ದಾರ್ ಸಿಂದಗಿ

ಸ್ವಾತಂತ್ರ್ಯೋತ್ಸವ ಅದ್ಧೂರಿ ಆಚರಣೆ ನಿರ್ಧಾರ: ತಹಶೀಲ್ದಾರ್ ಸಿಂದಗಿ  Independence Day celebrations to be grand: Tahsildar Sindagi

ಸ್ವಾತಂತ್ರ್ಯೋತ್ಸವ ಅದ್ಧೂರಿ ಆಚರಣೆ ನಿರ್ಧಾರ: ತಹಶೀಲ್ದಾರ್ ಸಿಂದಗಿ  


ದೇವರಹಿಪ್ಪರಗಿ 07: ಅದ್ಧೂರಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಅಧಿಕಾರಿಗಳಿಗೆ ಸೂಚಿಸಿದರು.  

ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾತಂತ್ರೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಮಾಜಿ ಯೋಧರನ್ನು ಈ ಬಾರಿ ಆಚರಣೆ ವೇಳೆ ಸನ್ಮಾನಿಸಬೇಕು ಎಂದು ಹೇಳಿದರು. ರಾಷ್ಟ್ರೀಯ ಹಬ್ಬದ ವೇಳೆ ಅಂಥ ಮಹನೀಯರಿಗೆ ಗೌರವಿಸುವುದು ಅತಿ ಅವಶ್ಯವಿದೆ. ತಾಲೂಕಿನಲ್ಲಿರುವ ಅವರ ಹೆಸರು ನೀಡಿ, ಗೌರವಿಸಲು ಸಹಕರಿಸಬೇಕು, ಸ್ವಾತಂತ್ರ್ಯೋತ್ಸವ ದಿನದಂದು ನಡೆಯುವ ಪರೇಡ್ ಅಚ್ಚುಕಟ್ಟಾಗಿ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು. ಈ ಸಂತಸದ ಕ್ಷಣಕ್ಕೆ ಸಾರ್ವಜನಿಕರು ತಮ್ಮ ಮಕ್ಕಳು, ಬಂಧುಗಳೊಂದಿಗೆ ಸಾಕ್ಷಿಯಾಗಬೇಕು ಎಂದು ಕೋರಿದರು.  

ಸ್ವಾತಂತ್ರ್ಯ ದಿನೋತ್ಸವದ ಸಿದ್ಧತೆಗೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಿದ್ಧತಾ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಅಂಥವರ ವಿರುದ್ಧ ಕ್ರಮ ವಹಿಸಲು ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಹಲವಾರು ಮುಖಂಡರು ಮಾತನಾಡಿ ಅಧಿಕಾರಿಗಳಿಗೆ ಮನವಿ ಮಾಡಿದರು.  

ಕಾರ್ಯಕ್ರಮದ ವಿವಿಧ ಸಮಿತಿಗಳನ್ನು ರಚಿಸಲು ಸೂಚಿಸಲಾಯಿತು.  

ತಾ.ಪಂ ಭಾರತಿ ಚಲುವಯ್ಯ, ಸಿಂದಗಿ ಬಿ.ಇ.ಓ ಎಮ್‌.ಬಿ.ಯಡ್ರಾಮಿ, ಪ.ಪಂ. ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಪಿ.ಎಸ್‌.ಐ ಸಚಿನ್ ಆಲಮೇಲಕರ, ಪಿಡಬ್ಲ್ಯೂಡಿ ಎಇಇ ಅರುಣಕುಮಾರ ವಡಿಗೇರಿ, ಕಂದಾಯ ಶಿರಸ್ತೆದಾರ ಸುರೇಶ ಮ್ಯಾಗೇರಿ, ಬಿಸಿ ಊಟದ ಅಧಿಕಾರಿಗಳಾದ ಅರವಿಂದ ಡೋಣೂರ, ಸಂಗಮೇಶ ಗ್ವಾಳೇದ, ಪ.ಪಂ ಅಧ್ಯಕ್ಷರ ಪ್ರತಿನಿಧಿ ಬಸವರಾಜ ದೇವಣಗಾಂವ, ಪ.ಪಂ ಸದಸ್ಯರುಗಳಾದ ಕಾಸುಗೌಡ ಜಲಕತ್ತಿ, ಕಾಶೀನಾಥ ಭಜಂತ್ರಿ, ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಮುಖಂಡರುಗಳಾದ ಪ್ರಕಾಶ ಮಲ್ಲಾರಿ, ಕಾಶೀನಾಥ ತಳಕೇರಿ, ಸಿ.ಕೆ. ಕುದರಿ, ಅಜೀಜ ಯಲಗಾರ, ಸಿದ್ದು ಮೇಲಿನಮನಿ, ಬಸು ತಳಕೇರಿ, ಸಿದ್ದು ಮೇಲಿನಮನಿ, ಬೀರು ಹಳ್ಳಿ, ರಾಮು ದೇಸಾಯಿ, ವಿಜಯಕುಮಾರ ಯಂಬತ್ನಾಳ, ರಾಜು ಸಿಂದಗೇರಿ ಸೇರಿದಂತೆ ತಾಲೂಕು ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.