ಸ್ವಾತಂತ್ರ್ಯೋತ್ಸವ ಆಚರಣೆಯಿಂದ ದೇಶಪ್ರೇಮ, ಭಾವೈಕ್ಯತೆ ವೃದ್ಧಿ: ನಿಂಗಪ್ಪ ಆರೇರ

ಸ್ವಾತಂತ್ರ್ಯೋತ್ಸವ ಆಚರಣೆಯಿಂದ ದೇಶಪ್ರೇಮ, ಭಾವೈಕ್ಯತೆ ವೃದ್ಧಿ: ನಿಂಗಪ್ಪ ಆರೇರ  Independence Day celebrations foster patriotism and emotional unity: Ningappa Arera

ಹಾವೇರಿ, ಆ.11: ಸ್ವಾತಂತ್ರ್ಯ ದಿನವನ್ನು ಆಚರಿಸುವುದರಿಂದ ನಮ್ಮಲ್ಲಿ ರಾಷ್ಟ್ರೇ​‍್ರಮ, ಅಭಿಮಾನ ಹಾಗೂ ಪರಸ್ಪರ ಪ್ರೀತಿ ಬೆಳೆದು, ಮನಸ್ಸು ವಿಶಾಲವಾಗುತ್ತದೆ. ಭಾವನೆಗಳು ಕೋಮಲವಾಗುತ್ತವೆ. ರಕ್ತ ಅನುಕಂಪದಿಂದ ಕೂಡಿದ ರಕ್ತವಾಗಿ, ಸಹೋದರತ್ವದ ಭಾವನೆ ಜಾಗೃತಗೊಳ್ಳುತ್ತದೆ ಎಂದು ಅಮ್ಮ ಸಂಸ್ಥೆಯ ಸಂಸ್ಥಾಪಕ ನಿಂಗಪ್ಪ ಆರೇರ ಹೇಳಿದರು.  

ತಾಲೂಕಿನ ಮಾಚಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮ್ಮ ಸಂಸ್ಥೆ (ರಿ.) ಹಿರೇಮುಗ್ಗದೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾರತದ ಸ್ವಾತಂತ್ರ್ಯದ 80ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮದ ಸಾಕ್ಷ್ಯಚಿತ್ರ ಪ್ರದರ್ಶನ, ಮಕ್ಕಳ ಭಾಷಣ ಹಾಗೂ ದೇಶಭಕ್ತಿಗೀತೆಗಳ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.  

ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ಮಾತನಾಡಿ, ಬ್ರಿಟಿಷರು ಭಾರತೀಯರನ್ನು ಗುಲಾಮರಂತೆ ನಡೆಸಿಕೊಂಡು, ತಮ್ಮ ಆಜ್ಞೆಯಂತೆ ಕೇಳುವ, ಕುಣಿಯುವ ಕೈಗೊಂಬೆಗಳಂತೆ ಮಾಡಿದ್ದರು. ಇದನ್ನು ಸಹಿಸದೆ ಅನೇಕ ಮಹಾತ್ಮರು ತಮ್ಮ ತನು, ಮನ, ಧನವನ್ನು ಅರ​‍್ಿಸಿ, ಸರ್ವ ಸುಖಗಳನ್ನು ತ್ಯಜಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅವರ ತ್ಯಾಗವನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.  

ಎಸ್ಡಿಎಂಸಿ ಅಧ್ಯಕ್ಷ ಮುತ್ತಪ್ಪ ದೊಡ್ಡಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಎ. ಎಣ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಗುರುಗಳಾದ ಜಿ.ಎಂ. ಓಂಕಾರಣ್ಣ ಸ್ವಾಗತಿಸಿದರು.  ಮುಖ್ಯ ಅತಿಥಿಗಳಾಗಿ ನಾಗಪ್ಪ ಸೋಮನ, ಅಯ್ಕನಗೌಡ ಕರೆಗೌಡ್ರ, ನಿಂಗನಗೌಡ ಭೀಮನಗೌಡ್ರ ಹಾಗೂ ನಾಗನಗೌಡ ಹನುಮಗೌಡ್ರ ಉಪಸ್ಥಿತರಿದ್ದರು.  

ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ನಿಂಗಪ್ಪ ಆರೇರ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಎನ್‌.ಬಿ. ದೇವಿಹೊಸೂರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಎಸ್‌.ಬಿ. ಈರೋಜಿ ವಂದಿಸಿದರು.