ಹಿರೂರ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
Independence Day celebrations at Hirura Government School
ತಾಳಿಕೋಟಿ 16: ತಾಲೂಕಿನ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನವನ್ನು ಅರ್ಥಪೂರ್ಣ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಈ ಬಾರಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ವಿದ್ಯಾರ್ಥಿಗಳ ಸಂಸ್ಕೃತಿಕ ಪ್ರದರ್ಶನಗಳು ಹೆಚ್ಚು ಗಮನ ಸೆಳೆದವು. ಇದಕ್ಕೂ ಮುನ್ನ ಮುಖ್ಯ ಭಾಷಣಕಾರರಾಗಿ ಆಗಮಿಸಿದ ದಲಿತ ಮುಖಂಡ ಡಿ.ಬಿ.ಹಾದಿಮನಿಯವರು ಮಾತನಾಡಿ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನದ ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಇದನ್ನು ರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ದೇಶವನ್ನು ಇನ್ನಷ್ಟು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗಲು ನಾವೆಲ್ಲರೂ ಜಾತಿ ಮತ ಭೇದ ಮರೆತು ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು. ಶಾಲೆಯ ಮುಖ್ಯ ಗುರುಗಳಾದ ಪಿ.ವಾಯ್.ಚಲವಾದಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷ ಸಂಗನಗೌಡ ಅಸ್ಕಿ, ಉರ್ದು ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಹಾಜಿ ಮಲಂಗ ಮುಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕ ಎಸ್‌ಆರ್ ಬಿರಾದಾರ ವಿದ್ಯಾರ್ಥಿಗಳ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು. ಸಹ ಶಿಕ್ಷಕಿ ಜಿಎಸ್ ಮದ್ದರಕಿ, ಶಿಕ್ಷಕ ಎನ್ ಎಸ್ ನೀರಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಶ್ರೀಶೈಲ ಹೊಸಮನಿ, ಮೂರ್ತುಜಾ ಮುಲ್ಲಾ, ಇಬ್ರಾಹಿಂ ಮುಲ್ಲಾ, ಭೀಮಣ್ಣ ದನ್ನೂರ, ದೇವಪ್ಪ ಕುರುಬರ, ಹಸನ್ ಸಾಬ್ ನದಾಫ, ಬಸವರಾಜ ಬಡಿಗೇರ, ಬಸವರಾಜ ದೊಡ್ಡಮನಿ, ಸುಭಾಸ ಯಾಳವಾರ,ರೇವಣಸಿದ್ದಪ್ಪ ಸೋಮನಾಳ, ಹುಲಿಗೆಪ್ಪ ಗೊಂದಲಿ, ನಾಗಪ್ಪ ಪೂಜಾರಿ, ಶಿಕ್ಷಕರಾದ ಎಸ್ ಬಿ ಹಡಪದ, ಶ್ರೀಮತಿ ಎ.ಬಿ.ಅಗ್ನಿ, ಶ್ರೀಮತಿ ಬಿ.ಎ.ಅಗ್ನಿ, ಶ್ರೀಮತಿ ಎಸ್ ಎನ್ ಹೊಸಳ್ಳಿ ಗುರುಮಾತೆ ಭಾಗವಹಿಸಿದ್ದರು. ಶಿಕ್ಷಕಿ ಬಿ.ಜಿ.ಬಿರಾದಾರ ಸ್ವಾಗತಿಸಿದರು. ಡಿ. ಎಚ್. ಎರಲಡ್ಡಿ ನಿರೂಪಿಸಿದರು.ಆರಿ್ಬ. ಮಂಗ್ಯಾಳ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 