ಅಕ್ಷರ ಗ್ಲೋಬಲ್ ಶಾಲೆ ಮತ್ತು ಕಾಲೇಜಿನಲ್ಲಿ ಸ್ವಾತಂತ್ರ್ಯ ಸಂಭ್ರಮದ ಆಚರಣೆ

ಅಕ್ಷರ ಗ್ಲೋಬಲ್ ಶಾಲೆ ಮತ್ತು ಕಾಲೇಜಿನಲ್ಲಿ ಸ್ವಾತಂತ್ರ್ಯ ಸಂಭ್ರಮದ ಆಚರಣೆ  Independence Day celebrations at Akshara Global School and College


ಬಳ್ಳಾರಿ 15: “ಸ್ವಾತಂತ್ರ್ಯ ಎಂದರೆ ಇಷ್ಟ ಬಂದಂತೆ ಬದುಕುವುದು ಅಲ್ಲ; ಜವಾಬ್ದಾರಿಯಿಂದ ನಡೆದುಕೊಳ್ಳುವುದು” ಎಂದು ಅಕ್ಷರ ಗ್ಲೋಬಲ್ ಶಾಲೆ ಮತ್ತು ಕಾಲೇಜಿನ ಅಧ್ಯಕ್ಷರಾದ ಡಾ. ಅನುರಾಧಾ ಎಸ್‌.ಜೆ. ಅವರು ಹೇಳಿದರು.  

ನಗರದ ಸಿರಿಗುಪ್ಪ ರಸ್ತೆ, ವಕೀಲರ ಕ್ಯಾಂಪ್ ಸಮೀಪದ ಅಕ್ಷರಧಾಮ ಕ್ಯಾಂಪಸ್ನಲ್ಲಿ ಅಕ್ಷರ ಗ್ಲೋಬಲ್ ಶಾಲೆ ಮತ್ತು ಕಾಲೇಜಿನ ವತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಐದು ದಿನಗಳ ‘ಸಂಕಲ್ಪಹಿ2026' ಕಾರ್ಯಕ್ರಮದ ಐದನೇ ದಿನ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.  

ಧ್ವಜಾರೋಹಣ ನೆರವೇರಿಸಿದ ಡಾ. ಅನುರಾಧಾ ಎಸ್‌.ಜೆ. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಳಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪಥಸಂಚಲನ, ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ದೇಶಭಕ್ತಿ ಗೀತೆಗಳು ಹಾಗೂ ‘ಶಾಂತಿ ಕ್ರಾಂತಿ’ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ಸಾಂಸ್ಕೃತಿಕ ಪ್ರದರ್ಶನಗಳು ಎಲ್ಲರ ಗಮನ ಸೆಳೆದವು.  

‘ಸಂಕಲ್ಪಹಿ2026' ಹೆಸರಿನಲ್ಲಿ ನಡೆದ ಐದು ದಿನಗಳ ಅದ್ಧೂರಿ ಕಾರ್ಯಕ್ರಮಕ್ಕೆ ಈ ಮೂಲಕ ತೆರೆ ಎಳೆಯಲಾಯಿತು.  

ಕಾರ್ಯಕ್ರಮದಲ್ಲಿ ಅಕ್ಷರ ಕಿಂಡರ್ ಗಾರ್ಡನ್ ಶಾಲೆಯ ಪ್ರಾಂಶುಪಾಲರಾದ ಸವಿತಾ, ಶಾಲೆಯ ಪ್ರಾಂಶುಪಾಲರಾದ ಡಾ. ಸುಹಾಸಿನಿ, ಕಾಲೇಜಿನ ಪ್ರಾಂಶುಪಾಲರಾದ ಶಿವಾರೆಡ್ಡಿ ಶ್ರೀ ನಂದಿ, ಎಜುಕೇಷನಲ್ ಟ್ರಸ್ಟ್ನ ಸದಸ್ಯರು ಹಾಗೂ ಅವರ ಕುಟುಂಬಸ್ಥರು, ಕಿಂಡರ್ ಗಾರ್ಡನ್, ಶಾಲಾ-ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.