ವಿವಿಧೆಡೆ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ವಿವಿಧೆಡೆ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ಆಚರಣೆ Independence Day celebration: Jamakhandi

ಜಮಖಂಡಿ 15: ಗಾಂಧಿಯವರ ಚಳವಳಿಯಲ್ಲಿ ಭಾಗಿಯಾದ ವಿವಿಧ ಮಹನೀಯರನ್ನು ಸ್ಮರಿಸುವ ದಿನವಾಗಿದೆ. ನಮ್ಮ ದೇಶ ಸಮಸಮಾಜ, ಅಹಿಂಸಾ ಧರ್ಮವನ್ನು ಹೊಂದಿದೆ. ವಿವಿಧ ಭಾಷೆಗಳು, ವಿವಿಧ ಜಾತಿ ಏಕತೆಯನ್ನು ಹೊಂದಿದ ದೇಶವಾಗಿದೆ. ಸ್ವಾತಂತ್ರ್ಯೋತ್ಸವ ಜಾತಿ ಭೇದ, ಲಿಂಗ ಭೇದವಿಲ್ಲದೆ ಉತ್ಸಾಹದಿಂದ ಆಚರಿಸುವ ಹಬ್ಬವಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡೀಕರ ಹೇಳಿದರು.  

ನಗರದ ಐತಿಹಾಸಿಕ ಪೋಲೋ ಮೈದಾನದಲ್ಲಿ ನಡೆದ 79ರ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ತೆರದ ವಾಹನದಲ್ಲಿ ಪರೀವಿಕ್ಷಣ ಪಥ ಸಂಚಲನ ವೀಕ್ಷಣೆಯನ್ನು ಮಾಡಿ ನಂತರ ಮಾತನಾಡಿದರು.  

78 ಸ್ವಾತಂತ್ರ್ಯ ದಿನವನ್ನು ಉಂಡು, 79ರಲ್ಲಿ ಪಾದಾರೆ​‍್ಣ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯು ಭಾರತೀಯನ ಪ್ರತಿಯೊಬ್ಬನ  

ಜವಾಬ್ದಾರಿ ದಿನವಾಗಿ, ಭಾರತ ದೇಶವು ನಮ್ಮಗೆ ಒಳ್ಳೆಯ ದಾರಿ, ಸ್ವಚ್ಛತೆ, ಬದುಕು ಹೀಗೆ ಹಲವಾರು ಸ್ವಾತಂತ್ರ್ಯವನ್ನು ನೀಡಿದ ದಿನ,  ರಾಷ್ಟ್ರ ನಾಯಕರ ಸ್ಮರಿಸುವ ದಿನ, 7 ದಶಕಗಳ ಮೇಲೆ ನಿಂತಿರುವದು ನಮ್ಮ ಸಂವಿಧಾನದ ಮೇಲೆ ನಿಂತಿದೆ. ಸಂವಿಧಾನದಲ್ಲಿ ಕಾನೂನು. ಮೂಲಭೂತ ಸೌಕರ್ಯ ಬದ್ಧತೆಯನ್ನು ಹೊಂದಿದೆ. ಡಾ.ಬಿ.ಆರ್‌.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೆ ಕಾರಣ ಇಂದು ನಾವೆಲ್ಲರೂ ಸಂವಿಧಾನದ ಮೇಲೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ನಮ್ಮ ದೇಶ ಪ್ರಜಾಪ್ರಭುತ್ವದಿಂದ ಯಶಸ್ವಿಯಾದ ದೇಶ. ಉತ್ತಮ ಆಡಳಿತವನ್ನು ಮುಂದುವರಿದೆ. ನಮ್ಮ ದೇಶ ಹೆಮ್ಮೆಯ ದೇಶವಾಗಿದೆ. ಆದರೆ ನಮ್ಮೊಟ್ಟಿಗೆ ಹುಟ್ಟಿದ ದೇಶಗಳು ಇಂದಿಗೂ ಸಹ ತಿನ್ನುವ ಆಹಾರದ ಕೊರತೆಯಿಂದ ಹಾಗೂ ಮೂಲಭೂತ ಸೌಕರ್ಯಗಳಿಂದ ಬಳಲುತ್ತಿವೆ. ಆದರೆ ನಮ್ಮ ದೇಶ ಸಮಸಮಾಜವನ್ನು ಹೊಂದಿದೆ ದೇಶ. ಅಹಿಂಸಾ ಧರ್ಮವನ್ನು ಹೊಂದಿದ್ದು. ವಿವಿಧ ಭಾಷೆಗಳು, ವಿವಿಧ ಜಾತಿಗಳನ್ನು ಹೊಂದಿದ್ದು, ದೇಶ ಏಕತೆಯನ್ನು ಹೊಂದಿದ ದೇಶವಾಗಿದೆ. ಜಾತಿ, ಭೇದ, ಲಿಂಗ ಭೇದವಿಲ್ಲದೆ ಉತ್ಸಾಹದಿಂದ ಆಚರಿಸುವ ಹಬ್ಬವಾಗಿದೆ. ಗಾಂಧಿಯವರ ಚಳವಳಿಯಲ್ಲಿ ಭಾಗಿದ ವಿವಿಧ  ಮಹನೀಯರನ್ನು ಸ್ಮರಿಸುವ ದಿನ. ಭವವಿಲ್ಲದೆ ಬದುಕುವ ದೇಶವಾಗಿದೆ. ಶಿಸ್ತು. ಬದ್ದತೆಯನ್ನು. ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ನೀಡಿದ ದಿನವಾಗಿದೆ ಎಂದರು.  

ಪೋಲಿಸ ಇಲಾಖೆ, ಹೊಂ ಗಾರ್ಡ ಸೇರಿದಂತೆ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸೇರಿದಂತೆ 21 ತಂಡ ಪತಸಂಚಲನದಲ್ಲಿ ಪಾಲ್ಗೊಂಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ. ಗೌರವಿಸಿದರು.  

ತಹಶೀಲ್ದಾರ ಅನೀಲ ಬಡಿಗೇರ ಸ್ವಾಗತಿಸಿದರು. ಡಿಎಸ್ ಪಿ.ಸೈಯದ್ ರೋಷನ್ ಜಮೀರ್, ನಗರಸಭೆ ಪೌರಾಯುಕ್ತ ಜೋತಿ ಗೀರೀಶ, ಬಿಇಒ ಅಶೋಕ ಬಸನ್ನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ ಪಾಸೋಡೆ, ತಾ.ಆರೋಗ್ಯ ಇಲಾಖೆ ಅಧಿಕಾರಿ ಗೈಬುಸಾಬ ಗಲಗಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ನಗರಸಭೆಯ ಅಧ್ಯಕ್ಷ ಈಶ್ವರ ವಾಳೇನ್ನವರ ಹಾಗೂ ನಗರಸಭೆಯ ಸದಸ್ಯರು ವೇದಿಕೆಯಲ್ಲಿ ಇದ್ದರು.