ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿಗೆ ಅನಿರ್ದಿಷ್ಟ ಹೋರಾಟ
Indefinite struggle for fixing price of 3500 per ton of sugarcane
ಹುಕ್ಕೇರಿ 04: ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಪ್ರತಿ ಟನ್ ಕಬ್ಬಿಗೆ 3500 ದರ ಘೋಷಣೆ ಮಾಡಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರು ಹಾಗೂ ಸಂಘಗಳ ಒಕ್ಕೂಟ ಮಂಗಳವಾರ ನ.4 ರಂದು ಸಂಗೊಳ್ಳಿ ರಾಯಣ್ಣ ವೃತದಲ್ಲಿ ಅನಿರ್ದಿಷ್ಟ ಧರಣಿ ಮಾಡುವುದಾಗಿ ತಿಳಿಸಿದ್ದಾರೆ. ಹುಕ್ಕೇರಿ ತಾಲೂಕಿನ ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿ ವರ್ಷ ರೈತರನ್ನ ಸುಲಿಗೆ ಮಾಡುವುದು ತಪ್ಪುತಿಲ್ಲ.ಅಕ್ಕಪಕ್ಕದ ರಾಜ್ಯ ಹಾಗೂ ಜಿಲ್ಲೆಯಲ್ಲಿ ಒಂದು ಬೆಲೆಯಾದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಬೆಲೆ, ಯಾಕೆ ರೈತರಿಗೆ ಕಬ್ಬಿನ ದರದಲ್ಲಿ ಮೊಸ, ತೂಕದಲ್ಲಿ ಮೊಸ, ಇವುಗಳ ಜೊತೆಗೆ ಸರಿಯಾದ ಸಮಯಕ್ಕೆ ಹಣ ಬಾರದೇ ಮತ್ತಷ್ಟು ತೊಂದರೆ ಆಗುತ್ತಿದೆ,ಒಂದು ಟನ್ ಕಬ್ಬಿನಿಂದ ಸಕ್ಕರೆ - ಜೊತೆಗೆ ಮಿಥೆನಾಲ್, ಸ್ಪಿರಿಟ್, ಮೊಲ್ಯಾಸಿಸ್, ಬಗಾಸ್, ವೆಸ್ಟ್ ಸೇರಿದಂತೆ ಇತರೆ ಉಪ ಉತ್ಪನ್ನಗಳನ್ನು ಮಾಡಿ ಲಕ್ಷ ಲಕ್ಷ ಲಾಭಗಳಿಸುತ್ತಿರುವ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ಸರಕಾರ ರೈತರನ್ನ ‘ಮಾತ್ರ ದೀವಾಳಿ ’ಮಾಡಲು ಹೊರಟಿದೆ. ಎಫ್.ಆರಿ ದರವನ್ನು ಯಾವುದೇ ಕಾರಣಕ್ಕೂ ಕಬ್ಬು ಬೆಳೆಗಾರರು ಒಪ್ಪುವುದಿಲ್ಲ, ಇಂದಿನ ಆಧುನಿಕ ಕೃಷಿ ಕರ್ಚು ತುಂಬಾ ಹೆಚ್ಚು ಆಗಿದ್ದು, ಒಂದು ಎಕರೆಗೆ ಅಂದಾಜು 30 ಸಾವಿರ ನಷ್ಟ ಆಗುತ್ತಿದ್ದು ಆದ್ದರಿಂದ ಕಬ್ಬಿನಿಂದ ಆಗುವಉಪ ಉತ್ಪನ್ನಗಳಲ್ಲಿ ರೈತರನ್ನು ಪರಿಗಣನೆಗೆ ತೆಗೆದುಕೊಂಡು ಒಂದಿಷ್ಟು ಲಾಭ ಕೊಡಬೇಕು ಒಟ್ಟಾರೆಯಾಗಿ ಪ್ರತಿ ಟನ್ ಕಬ್ಬಿಗೆ 3500 ಬೆಲೆ ಕೊಡಲೇಬೇಕು. ಮೊಸವನ್ನು ತಪ್ಪಿಸಬೇಕು, ಹಾಗೂ ಸಗಾಣೆಕೆಯನ್ನು 12 ಗಂಟೆಗಳಲ್ಲಿ ಮುಗಿಸಬೇಕು. ಕಬ್ಬಿನ ಬಾಕಿ ಮೊತ್ತವನ್ನು 14 ದಿನಗಳ ಒಳಗೆ ಕೊಡಬೇಕು. ಇಲ್ಲ 15ಅ ಬಡ್ಡಿ ಹಾಕಿ ಕೊಡಬೇಕು ಸಿ.ಎಸ್. ಆರ್ ಹಣವನ್ನು ರೈತರ ಅಭಿವೃದ್ಧಿಗೆ ಹಾಗೂ ತರಬೇತಿಗೆ ಹಾಗೂ ರೈತರಿಗಾಗಿ ಬಳಸಬೇಕು. ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮುಂದೆ ಸರಕಾರಿ ತೂಕದ ಯಂತ್ರವನ್ನು ಅಳವಡಿಸಿ ಕಬ್ಬಿನ ತೂಕದಲ್ಲಿ ಆಗುತ್ತಿರುವ ಕಟಾವು ಈ ಮೇಲಿನ ಯಲ್ಲಾ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು, ಕಬ್ಬು ಬೆಳೆಗಾರರು ಹಾಗೂ ಜಿಲ್ಲೆಯ ಎಲ್ಲಾ ರೈತ,ಬೃಹತ್ ರ್ಯಾಲಿ ಮುಖಾಂತರ ಹುಕ್ಕೇರಿ ಕೋರ್ಟ್ ಸರ್ಕಲ್ ಹತ್ತಿರ ಆಗಮಿಸಿ ಬೇಡಿಕೆ ಈಡೆರುವವರೆಗೂ ಹೋರಾಟ ಮಾಡಲಾಗುವುದು, ಅಲ್ಲಿಯವರೆಗೆ ಯಾವುದೇ ಕಾರ್ಖಾನೆಗಳು ಪ್ರಾರಂಭಿಸುವಂತಿಲ್ಲ ಎಂದರು ಮಠಾಧೀಶರು ನ್ಯಾಯವಾದಿಗಳು ಹಾಗೂ ಮಾಜಿ ಸೈನಿಕರು ಹಾಗೂ ವಿವಿಧ ಹಳ್ಳಿಯ ರೈತರು ಸೇರಿಕೊಂಡು ಅಡವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್ ಅವರಿಗೆ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ಜರಗಿತು. ಈ ಸಂದರ್ಭದಲ್ಲಿ ಎಚ್ ಎಲ್ ಪಾಟೀಲ್, ರಾಜು ಪಾಟೀಲ್, ಜೈಪಾಲ್ ರಾಯವ್ವಗೊಳ್, ಕುಮಾರ್ ಚೌಗಲಾ, ರಾಮಪ್ಪ ಮಾಯಪ್ಪಗೊಳ್, ಜೈಪಾಲ್ ಸರ್, ಆರ್ ಎಚ್ ಪಾಟೀಲ್, ಮಾರುತಿ ಪೂಜೇರಿ, ಬಸವರಾಜ ದೇಸಾಯಿ, ಕೆ ಬಿ ಪಾಟೀಲ್, ಅಶೋಕ್ ಚೌಗಲಾ, ಭರಮಣ್ಣ ಚೌಗಲಾ, ರವೀಂದ್ರ ಹಂಚಿನಾಳ, ಮಹಾದೇವ ಹಂಚಿನಾಳ, ಪರ್ಪ ಗಂಗಾನಾರ್, ಸತ್ಯಪ್ಪ ಬೆಡಕ್ಕಿಹಾಳ, ರಾಜು ಗಂಗಾನಾರ್, ಜಿನ್ನಪ್ಪ ಸಂಕವಗೊಳ್, ಹಾಗೂ ಹುಲ್ಲೋಳಿ ಗ್ರಾಮದ ಸಮಸ್ತ ರೈತರು ಹಾಗೂ ಹುಕ್ಕೇರಿ ತಾಲೂಕ ಆದ್ಯಂತ ವಿವಿಧ ಹಳ್ಳಿಯ ರೈತರು ಸಂಘಟನೆಕಾರರು ಭಾಗವಹಿಸಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 