ಪ್ರಾಥಮಿಕ ಶಾಲಾ ಹಂತದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಿ: ದೇಶಪಾಂಡೆ

ಪ್ರಾಥಮಿಕ ಶಾಲಾ ಹಂತದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಿ: ದೇಶಪಾಂಡೆ Inculcate discipline at primary school level: Deshpande

ವಿಜಯಪುರ 13: ಪ್ರಾಥಮಿಕ ಶಾಲಾ ಹಂತದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು ಆಗ ಮಾತ್ರ ಯಾವ ಕ್ಷೇತ್ರದಲ್ಲಿಯಾದರೂ ಯಶಸ್ವಿಯಾಗಬಹುದು. ಇಂದು ಮಕ್ಕಳಿಗೆ ಪಾಠ ಮಾಡುವುದೊಂದಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದೇವೆ ಆಟ ಆಡಿಸುವುದನ್ನು ಕಡಿಮೆಗೊಳಿಸಿದ್ದೇವೆ ಹೀಗಾಗಿಯೇ ಇತ್ತೀಚಿಗೆ ಹರೆಯದ ಯುವಕರಿಗೆ ಹೃದಯ ಸಂಬಂಧಿ ಕಾಯಿಲೆ ಮತ್ತು ದೈಹಿಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಖ್ಯಾತ ವೈದ್ಯರು ಸಹ ಇತ್ತೀಚಿಗೆ ಕಳವಳ ವ್ಯಕ್ತಪಡಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಯೋಗ, ಪ್ರಾಣಾಯಾಮ, ಸರಳ ವ್ಯಾಯಾಮ, ಕವಾಯತ್ತು, ಕಬಡ್ಡಿ, ಖ್ಷೋ ಖೋ ಇನ್ನಿತರ ದೈಹಿಕ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಿಸುವುದರಿಂದ ಭವಿಷ್ಯದಲ್ಲಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸರ್ಕಾರ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂದು ದರಬಾರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಜಿ .ದೇಶಪಾಂಡೆ ಅವರು ನುಡಿದರು. 

ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವಿಜಯಪುರ ಹಾಗೂ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ದರಬಾರ ಮೈದಾನದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ನಗರ ವಲಯ ಎಸ್ ಜೆ ಬಿರಾದಾರ ಮಾತನಾಡಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಶಿಸ್ತಿನ ಸಂಸ್ಕಾರ ನೀಡಬೇಕು. ಸಮಾಜ ಹಾಗೂ ರಾಷ್ಟ್ರದ ಉತ್ತಮ ಪ್ರಜೆಯನ್ನಾಗಿ ನಿರ್ಮಿಸುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.  

ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಬಸವರಾಜ ಬೇನೂರ, ಜುಬೇದ ಕೆರೂರು, ಎ.ಎಫ. ಅರಳಿಮಟ್ಟಿ, ಅಶೋಕ ರಾಠೋಡ, ಪಿ. ಎಸ.ನಾಲವತ್ತವಾಡ, ಜಿ.ವೈ.ತಲಕಲ, ಕರ್ಜಗಿ, ಮಮದಾಪೂರ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.