ಮಾಸ್ಕೋ, ಏ 12, ಕೆನಡಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23,000 ದಾಟಿದ್ದು ಈ ಸೋಂಕಿನಿಂದ 653 ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.ಏಪ್ರಿಲ್ 11 ರ ವೇಳೆಗೆ ಕೆನಡಾದಲ್ಲಿ 23,318 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ, 653 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಹೆಲ್ತ್ ಕೆನಡಾ ತಿಳಿಸಿದೆ,22 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 569 ಕ್ಕೆ ಏರಿಕೆಯಾಗಿದೆ ಎಂದು ಹೆಲ್ತ್ ಕೆನಡಾ ಇದಕ್ಕೂ ಮುನ್ನ ತಿಳಿಸಿತ್ತು. ಕ್ಯೂಬೆಕ್ ಮತ್ತು ಆಂಟಾರಿಯೋದಲ್ಲಿ ಅತಿ ಹೆಚ್ಚು ಪ್ರಕರಣಗಳ ದಾಖಲಾಗಿವೆ. ಕ್ಯೂಬೆಕ್ ನಲ್ಲಿ 12,292 ಮತ್ತು ಆಂಟಾರಿಯೋದಲ್ಲಿ 6,648 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ.