ಕಾರವಾರ ಸೇರಿದಂತೆ ಕರಾವಳಿಯಲ್ಲಿ ಹೆಚ್ಚಿದ ತಾಪಮಾನ

ನಾಗರಾಜ ಹರಪನಹಳ್ಳಿ

ಕಾರವಾರ 28: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ತಾಪಮಾನ ಹೆಚ್ಚಿದ್ದು, ಜನರು ವಿಪರೀತ ಬಿಸಿಲಿನಿಂದ ಬಸವಳಿದಿದ್ದಾರೆ. ಮೇ ತಿಂಗಳ ಬಿಸಿಲನ್ನು ಚಳಿಗಾಲದ ಬಿಸಿಲು ಮೀರಿಸಿದೆ. ಕಳೆದ ಸೋಮವಾರ 36.6 ಡಿಗ್ರಿ ಸೆಲ್ಸಿಯನ್ಸ ತಾಪಮಾನ ದಾಖಲಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಭಾರತದ ಕನರ್ಾಟಕ ಕರಾವಳಿಯಲ್ಲಿ ಅತೀ ಹೆಚ್ಚು ಉಷ್ಣಾಂಶ ಕಳೆದ ಸೂಮವಾರ ದಾಖಲಾಗಿದೆ. ಒಂದು ಶತಮಾನದಿಂದ ಇಷ್ಟು ಪ್ರಮಾಣದ ಉಷ್ಣಾಂಶ ನವ್ಹೆಂಬರ್ ತಿಂಗಳ ಕೊನೆಯವಾರದಲ್ಲಿ ದಾಖಲಾದುದು ಇದೇ ಮೊದಲು ಎನ್ನಲಾಗಿದೆ. 

ಪಶ್ಚಿಮ ಘಟ್ಟಗಳು ಹಾದು ಹೋಗಿರುವ ಕಾರವಾರದಲ್ಲಿ ಹಾಗೂ ಜಿಲ್ಲೆಯ ಕರಾವಳಿಯಲ್ಲಿ ನವ್ಹೆಂಬರ್ ತಿಂಗಳಲ್ಲಿ 20 ಡಿಗ್ರಿ ಸೆಲ್ಸಿಯಸ್ ನಿಂದ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದು ಸಹಜ. ಆದರೆ 36.6 ಡಿಗ್ರಿ ಸೆಲ್ಸಿಯಸ್ ದಾಖಲಾದುದು ಆತಂಕಕಾರಿಯಾಗಿದೆ. ಮಂಗಳವಾರ ಮತ್ತು ಬುಧುವಾರ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದರಿಂದ ಪರಿಸರ ಮತ್ತು ಜನಜೀವನ ಹಾಗೂ ಜಲಚರಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ ಎಂದು ಪರಿಸರವಾದಿ ಆರ್.ಜಗದೀಶ್ ಅಭಿಪ್ರಾಯಪಡುತ್ತಿದ್ದಾರೆ. ಪಶ್ಚಿಮಘಟ್ಟದಲ್ಲಿನ ಉಷ್ಣಾಂಶ,ಪರಿಸರ, ಕಾಡು ಪ್ರಾಣಿ ಹಕ್ಕಿಗಳ ಜೀವನದ ಬಗ್ಗೆ ಆಗಾಗ ಅಧ್ಯಯನ ಮಾಡುತ್ತಿರುವ ಅವರು ಈಚಿನ ದಿನಗಳಲ್ಲಿ ಕರಾವಳಿಯಲ್ಲಿ ಉಷ್ಣಾಂಶ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜಲಚರಗಳ ಮೇಲೆ ಭೂಮಿ ಮೇಲಿನ ಉಷ್ಣಾಂಶ ಹೆಚ್ಚಿದರೆ ಮೀನು ಸಂತತಿಯ ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ ಎಂದು ಓಶನೋಗ್ರಫಿ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಪಕ್ಷಿಗಳ ಸಂತತಿಯ ಮೇಲೆ , ಸಂತೋನ್ಪತ್ತಿಯ ಮೇಲೆ ಸಹ ವ್ಯತಿರಿಕ್ತ ಪರಿಣಾವವಾಗಲಿದೆ ಎಂದು ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾಥರ್ಿಗಳು ಹೇಳುತ್ತಿದ್ದಾರೆ. 

ಹೆದ್ದಾರಿ ಅಗಲೀಕರಣಕ್ಕೆ ಸಾವಿರಾರು ಮರಗಳ ಬಲಿ :

ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿಗೆ ಸಾವಿರಾರು ಮರಗಳು ಕಾರವಾರದಿಂದ ಭಟ್ಕಳದತನಕ 145 ಕಿ.ಮೀ. ಉದ್ದಕ್ಕೂ ಕತ್ತರಿಸಲಾಗಿದೆ. ಇದರಿಂದ ಸಹಜವಾಗಿ ತಾಪಮಾನದಲ್ಲಿ ಏರಿಕೆಯಾಗಿದೆ. ನಗರೋತ್ಥಾನದಲ್ಲಿ ವಿವಿಧ ನಗರಗಳಲ್ಲಿನ ಸಿಮೆಂಟ್ ರಸ್ತೆಗಳು ಉಷ್ಣಾಂಶ ಹೆಚ್ಚಲು ಕಾರಣವಾಗಿದ್ದು, ಹೆದ್ದಾರಿ ಅಗಲೀಕರಣಕ್ಕೆ ಗುಡ್ಡುಗಳನ್ನು ಕತ್ತರಿಸಲು ಸ್ಪೋಟಕಗಳನ್ನು ಬಳಸಲಾಗುತ್ತಿದೆ. ಇದು ಸಹ ಕರಾವಳಿಯಲ್ಲಿ ತಾಪಮಾನ ಹೆಚ್ಚಲು ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. 

ಪಯರ್ಾಯ ಏನು :

ಹೆದ್ದಾರಿ ಅಗಲೀಕರಣದ ವೇಳೆ ಕತ್ತರಿಸಲಾದ ಮರಗಳಿಗೆ ಪಯರ್ಾಯವಾಗಿ ಚಿತ್ರದುರ್ಗದ ಚಳ್ಳಕೇರಿಯಲ್ಲಿ ಮರಗಳ ಬೆಳೆಸಲು ಅರಣ್ಯ ಇಲಾಖೆ ಮುಂದಾಗಿದೆ. ಇದು ಅರಣ್ಯದ ಬದಲು ಪಯರ್ಾಯ ಅರಣ್ಣೀಕರಣದ ಭಾಗವಾದರೂ, ಇಲ್ಲಿಯ ನಷ್ಟವನ್ನು ಇಲ್ಲಿಯೇ ತುಂಬಿಕೊಡಬೇಕು ಎಂಬುದು ಪರಿಸರವಾದಿಗಳ ಅಭಿಮತ. ಜಿಲ್ಲೆಯಲ್ಲಿ ಮರಗಳು ಇಲ್ಲದೇ ಇರುವ ಭೂಮಿಯಲ್ಲಿ ಪಯರ್ಾಯ ಅರಣ್ಯ ಬೆಳೆಸಬೇಕು. ಹೆದ್ದಾರಿಯಲ್ಲಿ ಕಡಿಯಲಾದ ವಿವಿಧ ಜಾತಿಯ ಮರಗಳನ್ನು ದೇವಕಾರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಅರಣ್ಯ ಭೂಮಿಯಲ್ಲೇ ಬೆಳೆಸಬೇಕು ಎಂಬ ವಾದ ಪ್ರಬಲವಾಗಿ ಹೇಳಿ ಬರುತ್ತಿದೆ. 

ಕೈಗಾ, ಕಾಳಿ ನದಿ ಅಣೆಕಟ್ಟು ಯೋಜನೆ ಹಾಗೂ ಸೀಬರ್ಡ ಯೋಜನೆಗೆ ನೀಡಲಾದ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿಗೆ ಪಯರ್ಾಯವಾಗಿ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಭೂಮಿಯಲ್ಲಿ ಮರ ಬೆಳೆಸುವ ಯೋಜನೆಯನ್ನು ರೈತರಿಗೆ ಕೊಟ್ಟರೆ, ಅಲ್ಲಿ ಹತ್ತು ವರ್ಷಗಳಲ್ಲಿ ಅರಣ್ಯ ಬೆಳೆದೀತು. ಮಳೆಯಾದರೂ ಆದೀತು ಎಂಬ ಅಭಿಪ್ರಾಯವನ್ನು ಪರಿಸರವಾದಿಗಳು ಹೇಳುತ್ತಿದ್ದಾರೆ. 

ಸಾಮಾಜಿಕ ಅರಣ್ಯ ಬೆಳೆಸುವ ಯೋಜನೆಯ ಅನುಷ್ಠಾನ ಕಠಿಣ ಮಾಡಿದರೆ ಅರಣ್ಯ ಪಾಲನೆ ಸಾಧ್ಯ ಎಂಬ ಮಾತು ಸಹ ಇದೀಗ ಪ್ರಬಲವಾಗಿ ಕೇಳಿ ಬರುತ್ತಿದೆ. ಇಲ್ಲದೇ ಹೋದರೆ ನದಿ ಹಾಗೂ ಕಡಲಿನ ತಾಪಮಾನ ಹೆಚ್ಚಿ ಜಲಚರ ಮತ್ತು ಅರಣ್ಯ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಕಾದಿದೆ. ಕಾಡಿನ ನಾಶವೇ ವನ್ಯ ಜೀವಿಗಳು ಮತ್ತು ಮಾನವ ವಸತಿ ನಡುವಿನ ಸಂಘರ್ಷಕ್ಕೆ ಕಾರಣ ಎನ್ನುತ್ತಿದ್ದಾರೆ ವನ್ಯಜೀವಿ ಪ್ರಿಯರು. ಆನೆಗಳ ದಂಡು ಭತ್ತದ ಗದ್ದೆಗಳಿಗೆ ಬರುವುದು, ಹುಲಿ ಚಿರತೆ ದಾಳಿಗಳು ಆರಣ್ಯದಲ್ಲಿ ಆಹಾರ ಕೊರತೆಯ ದ್ಯೋತಕವಾಗಿವೆ. ಅರಣ್ಯವನ್ನು ಉಳಿಸಿಕೊಳ್ಳುವ ಮೂಲಕ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೂ ತಡೆಯೊಡ್ಡಬೇಕಿದೆ. ಈ ಮೂಲಕ ಕರಾವಳಿಯಲ್ಲಿ ಏರುತ್ತಿರುವ ಉಷ್ಣಾಂಶಕ್ಕೂ ಸ್ವಲ್ಪ ತಡೆಯೊಡ್ಡಬಹುದು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.