ಜಿನೀವಾ, ಆ 20 ಮುಂದಿನ 2023ರ ಮಹಿಳಾ ಫಿಫಾ ವಿಶ್ವಕಪ್ ಟೂರ್ನಿ ಆತಿಥ್ಯ ವಹಿಸಲು ಹೆಚ್ಚಿನ ಸಂಖ್ಯೆಯ ಅಸೋಸಿಯೇಷನ್ಗಳು ಆಸಕ್ತಿ ತೋರಿವೆ ಎಂದು ವಿಶ್ವ ಫುಟ್ಬಾಲ್ ಭಾಗವಾದ ಫಿಫಾ ತಿಳಿಸಿದೆ.
ಈ ಹಿನ್ನೆಲೆಯಲ್ಲಿ 2023ರ ಮಹಿಳಾ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳನ್ನು 24 ರಿಂದ 32 ರಷ್ಟು ಹೆಚ್ಚಿಸಲು ಫಿಫಾ ನಿರ್ಧರಿಸಿದ್ದು, ಬಿಡ್ಡಿಂಗ್ ಪ್ರಕ್ರಿಯೆಯನ್ನು ಮತ್ತೊಮ್ಮೆ ತೆರೆಯಲಾಗಿದೆ ಎಂದು ತಿಳಿಸಿದೆ.
ಬೆಲ್ಜಿಯಂ ಫುಟ್ಬಾಲ್ ಒಕ್ಕೂಟವು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೊಲಿವಿಯಾ, ಬ್ರೆಜಿಲ್, ಕೊಲಂಬಿಯಾ, ಜಪಾನ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಕೊರಿಯಾಗಳೊಂದಿಗೆ ಜಂಟಿಯಾಗಿ ವಿಶ್ವಕಪ್ ಆತಿಥ್ಯ ವಹಿಸಲು ಆಸಕ್ತಿ ತೋರಿದೆ ಎಂದು ಫಿಫಾ ತನ್ನ ಅಧಿಕೃತ ವೆಬ್ಸೈಟ್ ಮಾಹಿತಿ ನೀಡಿದೆ.
ಈ ಮೇಲಿನ ಎಲ್ಲ ರಾಷ್ಟ್ರಗಳು ಬಿಡ್ ಸಲ್ಲಿಸಲು ಆಸಕ್ತಿ ತೋರಿಸಿದ್ದು, ತಮ್ಮ ಭಾಗವಹಿಸುವಿಕೆಯನ್ನು ಸ್ಪಷ್ಟಪಡಿಸಲು ಸೆಪ್ಟಂಬರ್ 2 ರವೆರೆಗೂ ಗಡುವು ನೀಡಲಾಗಿದೆ ಫಿಫಾ ತಿಳಿಸಿದೆ.