ವಿಜಯಪುರ, ಡಿ. 16: ವೃಕ್ಷಥಾನ್ ಹೆರಿಟೇಜ್ ರನ್-2024ಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಓಟಕ್ಕೆ ನಾನಾ ಉದ್ಯಮಗಳು ಮತ್ತು ಗಣ್ಯರು ಪ್ರಾಯೋಜಕತ್ವ ನೀಡಿದ್ದಾರೆ.
ವೃಕ್ಷಥಾನ್ ಹೆರಿಟೇಜ್ ರನ್ ಜನಪ್ರೀಯತೆಗೆ ಮೆಚ್ಚಿ ಬಾಲಾಜಿ ಶುಗರ್ಸ್ ರೂ. 2 ಲಕ್ಷ, ಶ್ರೀ ಬಸವೇಶ್ವರ ಶುಗರ್ಸ್ ರೂ. 1 ಲಕ್ಷ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ. ಪ್ರಭುಗೌಡ ಲಿಂಗದಳ್ಳಿ ರೂ. 1 ಲಕ್ಷ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ರೂ. 50 ಸಾವಿರ, ಎಪಿಎಂಸಿ ರೂ. 50 ಸಾವಿರ ಹಾಗೂ ಸಮಾಜ ಸೇವಕ ಅಬ್ದುಲ್ ಪೀರಾ ಜಮಖಂಡಿ ರೂ. 50 ಸಾವಿರ ನೀಡಿದ್ದಾರೆ. ಈ ಮೂಲಕ ವೃಕ್ಷಥಾನ್ ಹೆರಿಟೇಜ್ ರನ್- 2024ಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನದ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.