ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮ
Inauguration program of Ashakirana Drishti Kendra
ಯರಗಟ್ಟಿ, 03 : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ಜರಗಿತು. ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ"ಆಶಾಕಿರಣ ಯೋಜನೆ" ಎಂಬುದು ಕರ್ನಾಟಕ ಸರ್ಕಾರದ ಯೋಜನೆ ಯಾಗಿದ್ದು,ಬಡವರು ಮತ್ತು ಗ್ರಾಮೀಣ ಜನರಿಗೆ ಕನ್ನಡಕ ವಿತರಣೆಶಾಸ್ತ್ರಚಿಕಿತ್ಸೆ ಒಳಗೊಂಡಿದೆ. ಬಿಎಡ್ ಇಓ ಆಯ್.ಆರ್. ಗಂಜಿ ಹೇಳಿದರು.
ವೈದ್ಯಾಧಿಕಾರಿ ಡಾ ಬಿ. ಎಸ್ ಬಳ್ಳೂರ ಮಾತನಾಡಿದ ಅವರು ಕರ್ನಾಟಕದ ಕಾಯಂ ನಿವಾಸಿಗಳು ಆರ್ಥಿಕವಾಗಿ ಹಿಂದುಳಿದವರು ಮತ್ತು ಕಣ್ಣಿನ ಸಮಸ್ಯೆ ಇರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.ಉಚಿತ ಕಣ್ಣಿನ ತಪಾಸಣೆ ಕನ್ನಡಕ ಕಾಂಟಾಕ್ಟ್ ಲೆನ್ಸ್ ಗಳು ಮತ್ತು ಶಸ್ತ್ರಚಿಕಿತ್ಸೆಗಳು ಈ ಒಂದು ಯೋಜನೆ ಅಡಿಯಲ್ಲಿ ಒದಗಿಸಲಾಗುವುದು ಎಂದುತಿಳಿಸಿದರು. ಈ ವೇಳೆ ಡಾ. ಆರ್. ಬಿ. ಯರಝರ್ವಿ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಭಾಸ್ಕರ್ ಹಿರೇಮೆತ್ರಿ, ಉಮೇಶ ಮಾಗುಂಡನವರ, ಪರಮೇಶ ಚಕ್ರಕೋಟಿ, ಪ.ಪಂ. ಸದಸ್ಯರಾದ ನಿಖಿಲ ಪಾಟೀಲ ಸಲೀಂಬೇಗ ಜಮಾದಾರ ಆರೋಗ್ಯ ಇಲಾಖೆಯ ಸಿಬ್ಬಂದಿಯವರಾದನೇತ್ರ ಅಧಿಕಾರಿ ಬಸವರಾಜ ಮಳಗಲಿ, ಎಂ.ಎನ್. ಕತ್ತಿ, ಮಂಜುನಾಥ ಸಿಂಗನ್ನವರ, ಸುನಿಲ ಕಾಶನ್ನವರ, ಮಹಾಂತೇಶ ಹಿರೇಮಠ, ಪ್ರಕಾಶ ಮಾಂಗ,ಎಸ್. ಬಿ. ಬೆಂಡಿಗೇರಿ ಆಶಾಕಾರ್ಯಕರ್ತೆಯರು ಸಾರ್ವಜನಿಕರು ಹಾಜರಿದ್ದರು.ಹೇಳಿಕೆ:
ಆಶಾ ಕಾರ್ಯಕರ್ತೆಯರು ಮನೆಯಲ್ಲಿ ಪ್ರಾಥಮಿಕ ಪರೀಕ್ಷೆ ಮಾಡಿ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದ್ವಿತೀಯ ಪರೀಕ್ಷೆ ಮಾಡಿ ಸಂಬಂಧಪಟ್ಟಂತ ಸೇವೆಯನ್ನು ನೀಡಲಾಗುವುದು. ಈ ಯೋಜನೆ ಅಡಿಯಲ್ಲಿ ಕಣ್ಣಿನ ಪೊರೆ ದೃಷ್ಟಿ ದೋಷ ಡಯಾಬಿಟಿಕ್ ರೆಟಿನೋಪತಿ ಗ್ಲಕೋಮ ಮತ್ತು ಇತರೆ ಕಣ್ಣಿನ ಸಮಸ್ಯೆಗಳನ್ನು ಗುರುತಿಸಲಾಗುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯವರು ಮತ್ತು ಆಶಾ ಕಾರ್ಯಕರ್ತೆರನ್ನು ಸಂಪರ್ಕಿಸಬಹದು.
ಡಾ. ಸುರೇಶ ಹಿತ್ತಲಮನಿನೇತ್ರ ವೈದ್ಯರು, ಯರಗಟ್ಟಿ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 