ಜೀವಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ದ್ಯಾಮಮ್ಮದೇವಿ ದೇವಸ್ಥಾನದ ಉದ್ಘಾಟನೆ
Inauguration of the newly built Dyamammadevi Temple in Jivapura village
ಯರಗಟ್ಟಿ 28 : ಹಳ್ಳಿಗಳ ಜಾತ್ರೆಯಲ್ಲಿ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವ ಜಾತ್ರಾ ಕಮಿಟಿಯವರ ಕಾರ್ಯ ಶ್ಲಾಘನೀಯ ಎಂದು ಶಾಸಕ ವಿಶ್ವಾಸ ವೈದ್ಯ ಹೆಳಿದರು.
ಸಮೀಪದ ಜೀವಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ದ್ಯಾಮಮ್ಮದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ದೇವಿಯ ಮೂರ್ತಿಯ ಪ್ರಾಣಪ್ರತಿಷ್ಠಾಪನಾ ಹಾಗೂ ಕಳಸಾರೋಹಣ ಕಾರ್ಯಕ್ರಮದ ನಿಮಿತ್ಯ ರವಿವಾರ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತವು ನಮ್ಮ ಜೀವನದ ಬದುಕಿನ ಸಂಜೀವಿನಿಯಾಗಿದೆ ಎಂದರು. ಶುದ್ಧ ಕುಡಿಯುವ ನೀರು ಮತ್ತು ರಸ್ತೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತೇನೆ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯೇ ನನ್ನಧೇಯ ಎಂದು ಹೇಳಿದರು.ಮಾಜಿ ಶಾಸಕ ಆರ್.ವಿ.ಪಾಟೀಲ ಮಾತನಾಡಿ, ಕ್ಷೇತ್ರದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶಾಸಕ ವಿಶ್ವಾಸ ವೈದ್ಯ ಸತತ ಪ್ರಯತ್ನದಿಂದ ಸಾಕಷ್ಟು ಅನುದಾನ ತಂದು ಶ್ರಮಿಸಿದ್ದಾರೆ ಎಲ್ಲರ ಸಹಕಾರ ನೀಡಬೇಕು ಎಂದರು. ಶಾಸಕ ವಿಶ್ವಾಸ ವೈದ್ಯ, ಮಾಜಿ ಶಾಸಕ ಆರ್.ವಿ.ಪಾಟೀಲ ಇವರನ್ನು ಗ್ರಾಮಸ್ಥರು ಸನ್ಮಾನಿಸಿದರು.ಹೊಸಕೊಟಿ ಗುತ್ತಿಗೋಳಿ ಅಭಿನವ ರೇವಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಗ್ರಾಪಂ ಅದ್ಯಕ್ಷೆ ಕವಿತಾ ಬಾಲರಡ್ಡಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ರುಕ್ಮೀಣಿ ನಾಯ್ಕರ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ನಿರ್ದೇಶಕಿ ರೇಖಾ ಯರಡ್ಡಿ, ಜಿಪಂ ಮಾಜಿ ಸದಸ್ಯ ಫಕೀರ್ಪ ಹದ್ದನ್ನವರ, ಆರ್.ಎಸ್.ಯರಡ್ಡಿ, ವೆಂಕಪ್ಪ ಯರಡ್ಡಿ, ವೆಂಕಪ್ಪ ಕಮಕೇರಿ, ಶಿವಾನಂದ ಪಾಟೀಲ, ಮುತ್ತನಗೌಡ ನಾಯ್ಕರ, ಸುರೇಶ ಯರಡ್ಡಿ, ಆರ್.ಕೆ.ಪಠಾತ, ಕಲ್ಮೇಶ ಬಾಲರಡ್ಡಿ, ಪಡೆಪ್ಪ ನರಿ, ರಾಜು ಮಳಲಿ, ಪುಟ್ಟು ಅರಳಿಕಟ್ಟಿ, ಬಸವರಾಜ ಅರಳಿಕಟ್ಟಿ, ಕೃಷ್ಣ ಅರೆಬೆಂಚಿ, ಕೃಷ್ಣ ಚೌರಡ್ಡಿ, ಶಂಕರ ಹುಬ್ಬಳ್ಳಿ, ಶಿವನಗೌಡ ನಾಯ್ಕರ, ಪ್ರವೀಣ ಯರಡ್ಡಿ, ರಮೇಶ ಕಮಕೇರಿ, ಸಚೀನ ಬೆಳವಲ ಸೇರಿದಂತೆ ಇತರರು ಇದ್ದರು. ಮುಖ್ಯಶಿಕ್ಷಕ ಶ್ರೀಕಾಂತ ಯರಡ್ಡಿ ನಿರೂಪಿಸಿದರು, ಸುರೇಶ ಕಂಬಾರ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 