ಸಿರಿಧಾನ್ಯ ಯೋಜನೆಗಳ ವಾರ್ಷಿಕ ಗುಂಪು ಸಮಾವೇಶದ ಉದ್ಘಾಟನೆ

ಸಿರಿಧಾನ್ಯ ಯೋಜನೆಗಳ  ವಾರ್ಷಿಕ ಗುಂಪು ಸಮಾವೇಶದ ಉದ್ಘಾಟನೆ Inauguration of the Annual Group Conference of Cereal Projects

ಲೋಕದರ್ಶನ ವರದಿ 

ಧಾರವಾಡ 19: ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಸಜ್ಜೆ, ಜೋಳ ಹಾಗೂ ಸಿರಿಧಾನ್ಯಗಳ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಗಳ ಸಂಯುಕ್ತ ವಾರ್ಷಿಕ ಗುಂಪು ಸಭೆಯನ್ನು 2026ರ ಮೇ 18ರಿಂದ 20ರವರೆಗೆ ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಆಯೋಜಿಸಲಾಗಿದೆ.  

ಉದ್ಘಾಟನಾ ಕಾರ್ಯಕ್ರಮವು ದಿ. 19ರಂದು ಜರುಗಿದ್ದು ಐಸಿಎಆರ್, ನವದೆಹಲಿ ಬೆಳೆ ವಿಜ್ಞಾನ ವಿಭಾಗದ ಉಪ ಮಹಾನಿರ್ದೇಶಕರಾದ ಡಾ. ಡಿ. ಕೆ. ಯಾದವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಸಿರಿಧಾನ್ಯಗಳ ವಿವಿಧ ಕೇಂದ್ರಗಳಲ್ಲಿ ನಡೆಯುತ್ತಿರುವ ಸಂಶೋಧನಾ ಕಾರ್ಯವನ್ನು ಶ್ಲಾಘಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಜೊತೆಗೆ, ಸರಿಯಾದ ತಳಿಯ ಬೀಜಗಳು ಸರಿಯಾದ ಸಮಯದಲ್ಲಿ ರೈತರಿಗೆ ಲಭ್ಯವಾಗುವ ವ್ಯವಸ್ಥೆಯ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಕೃಷಿಶಾಸ್ತ್ರ, ಜೈವಿಕ ಹಾಗೂ ಇತರ ಸಸ್ಯ ಸಂರಕ್ಷಣಾ ಘಟಕಗಳನ್ನು ಬಲಪಡಿಸಿ, ಸಿರಿಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸಲು ರೈತರಿಗೆ ಅನುಕೂಲಕರ ಶಿಫಾರಸುಗಳನ್ನು ನೀಡಬೇಕೆಂದು ಹೇಳಿದರು.  

ಸಜ್ಜೆ ಯೋಜನೆಯ ಯೋಜನಾ ಸಂಯೋಜಕರಾದ ಡಾ. ಎಸ್‌. ಎನ್‌. ಸಕ್ಸೇನಾ ಹಾಗೂ ಜೋಳ ಮತ್ತು ಸಣ್ಣ ಸಿರಿಧಾನ್ಯಗಳ ಯೋಜನಾ ಸಂಯೋಜಕರಾದ ಡಾ. ಆರ್ ಮಧುಸೂಧನ ಅವರು ವಿವಿಧ ಕೇಂದ್ರಗಳಲ್ಲಿ ಕೈಗೊಳ್ಳಲಾದ ಸಂಶೋಧನಾ ಮುಖ್ಯಾಂಶಗಳನ್ನು ಮಂಡಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಾ. ಎಸ್‌. ಕೆ. ಪ್ರಧಾನ ಅವರು, ಸಿರಿಧಾನ್ಯಗಳು ಪೌಷ್ಟಿಕ ಧಾನ್ಯಗಳಾಗಿದ್ದರೂ ಅವುಗಳ ಪ್ರಗತಿ ನೀರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಅಭಿಪ್ರಾಯಪಟ್ಟರು.

“ವಿಕಸಿತ ಭಾರತ” ನಿರ್ಮಾಣದ ಗುರಿ ಸಾಧಿಸಲು ಜೀನೋಟೈಪಿಂಗ್ ಹಾಗೂ ರೈತರ ಪಾಲ್ಗೊಳ್ಳುವಿಕಾಧಾರಿತ ವಿಧಾನಗಳನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಸಿರಿಧಾನ್ಯಗಳನ್ನು ಜಾಗತಿಕವಾಗಿ ಉಷ್ಣ, ಅರೆಉಷ್ಣ ಹಾಗೂ ಸಮಶೀತೋಷ್ಣ ವಲಯ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಡಾ. ಸಿ. ತಾರಾ ಸತ್ಯವತಿ, ಅವರು ಸಿರಿಧಾನ್ಯಗಳ ಮಹತ್ವ ಮತ್ತು ಪ್ರಸ್ತುತ ಪರಿಸ್ಥಿತಿಯ ಕುರಿತು ಪ್ರಾಥಮಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.  

ಅಧ್ಯಕ್ಷೀಯ ಭಾಷಣದಲ್ಲಿ ಕೃ.ವಿ.ವಿ., ಧಾರವಾಡದ ಮಾನ್ಯ ಕುಲಪತಿಗಳಾದ ಡಾ. ಪಿ. ಎಲ್‌. ಪಾಟೀಲ ಅವರು ಎಲ್ಲಾ ಎಐಸಿಆರ​‍್ಿ ಸಿರಿಧಾನ್ಯ ಕೇಂದ್ರಗಳ ಸಾಧನೆಯನ್ನು ಪ್ರಶಂಸಿಸಿದರು. ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಜ್ಜೆ, ಜೋಳ ಹಾಗೂ ಸಿರಿಧಾನ್ಯಗಳ ವಿಜ್ಞಾನಿಗಳು ಭಾಗವಹಿಸಿದ್ದರು.  

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಸಂಶೋಧನಾ ನಿರ್ದೇಶಕರಾದ ಡಾ. ಎ. ಎಸ್‌. ಸಜ್ಜನ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ವಂದನಾರೆ​‍್ಣಯನ್ನು ಡಾ. ಎನ್‌. ಜಿ. ಹನಮರಟ್ಟಿ ಅವರು ನೆರವೇರಿಸಿದರು.  

ಅಖಿಲ ಭಾರತ ಸಮನ್ವಿತ ಸಜ್ಜೆ, ಜೋಳ ಮತ್ತು ಸಿರಿಧಾನ್ಯ ಯೋಜನೆಗಳ  2026ರ ವಾರ್ಷಿಕ ಗುಂಪು ಸಮಾವೇಶವನ್ನು ಐಸಿಎಆರ್, ನವದೆಹಲಿ ಬೆಳೆ ವಿಜ್ಞಾನ ವಿಭಾಗದ ಉಪ ಮಹಾನಿರ್ದೇಶಕರಾದ ಡಾ. ಡಿ. ಕೆ. ಯಾದವ ಉದ್ಘಾಟಿಸಿದರು.  

   ಅಖಿಲ ಭಾರತ ಸಮನ್ವಿತ ಸಜ್ಜೆ, ಜೋಳ ಮತ್ತು ಸಿರಿಧಾನ್ಯ ಯೋಜನೆಗಳ  2026ರ ವಾರ್ಷಿಕ ಗುಂಪು ಸಮಾವೇಶವನ್ನು ಐಸಿಎಆರ್, ನವದೆಹಲಿ ಬೆಳೆ ವಿಜ್ಞಾನ ವಿಭಾಗದ ಉಪ ಮಹಾನಿರ್ದೇಶಕರಾದ ಡಾ. ಡಿ. ಕೆ. ಯಾದವ ಉದ್ಘಾಟಿಸಿ ಮಾತನಾಡಿದರು.