ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ

ಲೋಕದರ್ಶನವರದಿ

ಮುಧೋಳ: ಪ್ರತಿಯೊಬ್ಬ ವಿದ್ಯಾಥರ್ಿಯಲ್ಲಿ ತನ್ನದೆಯಾದ ಪ್ರತಿಭೆ ಇದ್ದೆ ಇರುತ್ತದೆ. ಸೂಕ್ತ ಅವಕಾಶ ಮತ್ತು ವೇದಿಕೆ ದೊರೆತಾಗ ಅವರಲ್ಲಿ ಹುದಗಿರುವ ಪ್ರತಿಭೆಯನ್ನು ಹಾರಹಾಕಲು ಸಾಧ್ಯ ಅಂತಹ ಅವಕಾಶಗಳು ಮಹಾವಿದ್ಯಾಲಯಗಳು ಕಲ್ಪಿಸಿಕೊಡುತ್ತೇವೆ ಕಾರಣ ವಿದ್ಯಾಥರ್ಿಗಳು ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಧಾರವಾಡ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿದರ್ೇಶಕಿ ಡಾ.ನೀಲಾಂಬಿಕಾ ಎಸ್.ಪಟ್ಟಣಶೆಟ್ಟಿ ಹೇಳಿದರು.

     ಬಾಗಲಕೋಟ ಬಿ.ವ್ಹಿ.ವ್ಹಿ ಸಂಘದ ಮುಧೋಳದ  ಎಸ್.ಆರ್.ಕಂಠಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿ ಸ್ಥಾನವಹಿಸಿ ಮಾತನಾಡಿ ಪ್ರತಿಭಾವಂತರಿಗೆ ಸಾಕಷ್ಟು ಅವಕಾಶಗಳಿವೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು.

          ಪಾಲಕರು ತಮ್ಮ ಮಕ್ಕಳಿಗೆ ಸೂಕ್ತ ಸಲಹೆ,ಮಾರ್ಗದರ್ಶನ ಮತ್ತು ಪ್ರೊತ್ಸಾಹ ನೀಡಬೇಕು, ಶಿಕ್ಷಕರು ಯಾವ ಮಕ್ಕಳಲ್ಲಿ ಯಾವ ಪ್ರತಿಭೆ ಇದೆ ಎಂಬುದನ್ನು ಗುರುತಿಸಿ ಅವರಿಗೆ ಅವಕಾಶಗಳನ್ನು ಕಲ್ಪಿಸಬೇಕು.ವಿದ್ಯಾಥರ್ಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಇದರಿಂದ ಸವರ್ಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ಎಂದರು.

  ವಿದ್ಯಾಥರ್ಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕ್ರೀಡೆಯಿಂದ ಸಾಮರಸ್ಯದ ಬಾಂಧವ್ಯ ರೂಪಿತಗೊಂಡು ಏಕಾಗ್ರತೆ ಉಂಟಾಗಿ ವಿಕಾಸದ ಬೆಳವಣಿಗೆಗೆ ಹಾದಿ ಆಗಬೇಕು. 

       ಬೀಜ ಹೊಲದಲ್ಲಿ ಬಿತ್ತಿ, ಸರಿಯಾಗಿ ಗೊಬ್ಬರ ಮತ್ತು ನೀರು ಹಾಕಿದಾಗ ಉತ್ತಮ ಫಲಕೊಡುವ ಹಾಗೆ ವಿದ್ಯಾಥರ್ಿಗಳು ಸರಿಯಾಗಿ ದಿಟ್ಟ ಹೆಜ್ಜೆ ಇಟ್ಟಾಗ ಸುಂದರ ಬದುಕು ನಿಮರ್ಾಣವಾಗಲು ಸಾದ್ಯ,ಚಿಂತೆ ಮಾಡದೆ ನಿಷ್ಠೆಯಿಂದ ಕೆಲಸ ಮಾಡಿದಾಗ ಯಶಸ್ವು ಹೊಂದಬಹುದು,ಜೀವನದಲ್ಲಿ ಏನಾದರು ಸಾಧಿಸಬೇಕಾದರೆ ಋಣಾತ್ಮಕ ವಿಚಾರಗಳನ್ನು ಹೊಂದದೆ ಧನಾತ್ಮಕ ವಿಚಾರಗಳನ್ನು ರೂಢಿಸಿಕೊಂಡರೆ ಎಲ್ಲವನ್ನು ಸಾಧಿಸಬಹುದೆಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.

    ಕಾಲೇಜಿನ ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಅಧ್ಯಕ್ಷತೆವಹಿಸಿ ಮಾತನಾಡಿ ಆತ್ಮಬಲ ಇದ್ದರೆ ಎಂತಹ ಬಡತನದಲ್ಲಿಯೂ ಉತ್ತಮ ಸಾಧನೆ ಮಾಡಬಹುದು, ಆಟ-ಪಾಠಗಳು ನಮ್ಮ ಪರಿಪೂರ್ಣ ವ್ಯಕ್ತಿತ್ವಕ್ಕೆ ಪೂರಕವಾದವುಗಳಾಗಿವೆ, ಮಹಾವಿದ್ಯಾಲಯದ ವಿದ್ಯಾಥರ್ಿಗಳು ಕ್ರೀಡಾ ಮತ್ತು ಸಾಂಸ್ಕೃತಿಕ  ಚಟುವಟಿಕೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀತರ್ಿ ತಂದಿದ್ದಾರೆ ಎಂದರು.

  ಸಾಂಸ್ಕೃತಿಕ ವಿಭಾಗದ ಕಾಯರ್ಾಧ್ಯಕ್ಷೆ ಪ್ರೊ.ಜಿ.ಬಿ.ಅಣೆಪ್ಪನವರ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಕ್ರೀಡಾ ವಿಭಾಗದ ಕಾಯರ್ಾಧ್ಯಕ್ಷ ಡಾ.ಎಂ.ಆರ್.ಜರಕುಂಟಿ ಸ್ವಾಗತಿಸಿದರು.

 ದೈಹಿಕ ನಿದರ್ೇಶಕ ಪ್ರೊ.ಎ.ವೈ.ಮುನ್ನೋಳ್ಳಿ ವಂದಿಸಿದರು, ಪ್ರೊ.ಆಶಾ ಮಂಟೂರ ನಿರೂಪಿಸಿದರು, ವಿದ್ಯಾಥರ್ಿನಿಯರು ಪ್ರಾರ್ಥನೆ ಹೇಳಿದರು. ಇದೆ ಸಂದರ್ಭದಲ್ಲಿ ಮಹಾವಿದ್ಯಾಲಯದ ವತಿಯಿಂದ ಧಾರವಾಡ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿದರ್ೇಶಕಿ ಡಾ.ನೀಲಾಂಬಿಕಾ ಎಸ್.ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.