ಶ್ರೀ ನೀಲಗಂಗಾ ಹೊಸ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

ಶ್ರೀ ನೀಲಗಂಗಾ ಹೊಸ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ Inauguration of Sri Neelganga New Knowledge Development Center

ನೇಸರಗಿ 04: ಸಮೀಪದ ಸೋಮನಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಹೊಸಕೇಂದ್ರ ಶ್ರೀ ನೀಲಗಂಗಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಕಾರ್ಯಕ್ರಮವು ಸೋಮವಾರದಂದು ನೆರವೇರಿತು.      

ಅಧ್ಯಕ್ಷತೆಯನ್ನು ಮಾಜಿ  ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾರತಿ ತಿಗಡಿ, ಮುಖ್ಯ ಅತಿಥಿಗಳಾಗಿ ರಮೇಶ, ತಾಲೂಕು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈಲಾ ಜೆ, ವಲಯದ ಮೇಲ್ವಿಚಾರಕರಾದ ಪರಶುರಾಮ ಇವರ ಉಪಸ್ಥಿತಿಯಲ್ಲಿ ನೆರವೇರಿತು. ಜ್ಞಾನವಿಕಾಸ ಸಮನ್ವೇದಿಕಾರಿ ಶೈಲಾ ಜೆ  ಅವರು ಕಾರ್ಯಕ್ರಮ ಉದ್ದೇಶಿಸಿ ಹೊಸ ಕೇಂದ್ರ ರಚನೆ ಉದ್ದೇಶಗಳ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ನಡೆದ ಬಂದ ದಾರಿ ಕ್ಷೇತ್ರದಿಂದ ನಡೆಯುವಂತಹ ಅಭಿವೃದ್ಧಿ ಕಾರ್ಯಗಳು ಸ್ವಸಹಾಯ ಸಂಘಗಳ ಮಹತ್ವ ಮಾಶಾಸನ ವಿತರಣೆ ವಾತ್ಸಲ್ಯ ಮನೆ ರಚನೆ ಜನಮಂಗಳ ಕಾರ್ಯಕ್ರಮ ಸಮುದಾಯ ಅಭಿವೃದ್ಧಿ ವಿಭಾಗದಿಂದ ನೀಡುವ ಅನುದಾನಗಳ ಬಗ್ಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ ಸ್ವಸಹಾಯ ಸಂಘದವರಿಗೆ ನೀಡುವ ಪ್ರಗತಿ ನಿಧಿ ಬಗ್ಗೆ ಮಾಹಿತಿ ನೀಡಿದರು.  

ಕಾರ್ಯಕ್ರಮದ ಉದ್ಘಾಟಕರಾಗಿ ರಮೇಶ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಜಾರಿಗೆ ತಂದಿರುವ ಕಾರ್ಯಕ್ರಮಗಳ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು, ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುದರೊಂದಿಗೆ ಕುಟುಂಬ ನಿರ್ವಹಣೆಯನ್ನು  ಜಾಣ್ಮೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ ಹಾಗೂ ಎಲ್ಲರೂ ಅನಾವಶ್ಯಕ ಖರ್ಚು ಮಾಡದೆ ಸ್ವ ಉದ್ಯೋಗ ರೂಪಿಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಡೀ ಕರ್ನಾಟಕದಾದ್ಯಂತ ವ್ಯಾಪಿಸಿದ್ದು ಅದೆಷ್ಟೋ ಕುಟುಂಗಳಿಗೆ ದಾರೀದೀಪವಾಗಿದೆ. ತಮ್ಮ ಅವಶ್ಯಕತೆಗೆ ಪೂರಕವಾಗಿ ಸಾಲ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.       

ಕಾರ್ಯಕ್ರಮದ ನಿರೂಪಣೆ ಜ್ಞಾನವಿಕಾಸ ಸಮನ್ವೇಧಿಕಾರಿ ಶೈಲಾ, ಸ್ವಾಗತ ವಲದ ಮೇಲ್ವಿಚಾರಕರಾದ ಪರುಶುರಾಮ, ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.