ಯಮಕನಮರಡಿ 05: ಸಮೀಪದ ಹುಕ್ಕೇರಿ ತಾಲೂಕಿನ ಅತ್ತಿಹಾಳ ಗ್ರಾಮದಶ್ರೀ ಮಹಾಲಕ್ಷ್ಮೀ ದೇವಿಯ ನೂತನ ಕಟ್ಟಡದ ಉದ್ಘಾಟನೆ ವಾಸ್ತುಶಾಂತಿ ಮುಂಜಾನೆ 8 ಗಂಟೆಗೆ ಹೋಮ ಹವನ ನವಗ್ರಹ ಪೂಜೆ ಮಹಾರುದ್ರಾಭಿಷೇಕ ದೇವಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪಣೆ ಕಳಸಾರೋಹನ ಸಮಾರಂಭ ಜರುಗಲಿದ್ದು ಸಾಯಂಕಾಲ 7 ಗಂಟೆಗೆ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಕಾರಿಮಠ ಹತ್ತರಗಿ ಇವರಿಂದ ಆಶಿರ್ವಚನ ರಾತ್ರಿ 9 ಗಂಟೆಗೆ ಬಸವೇಶ್ವರ ಭಜನಾ ಮಂಡಳ ಇವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಗುರುಸಿದ್ದೇಶ್ವರ ಮಹಾಸ್ವಾಮಿಗಳು ಕಾರಿಮಠ ಹತ್ತರಗಿ ಹಾಗೂ ಉ ಖಾನಾಪುರ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮರುಳಸಿದ್ದೇಶ್ವರ ಬ್ರಹನ್ಮಠ, ಘನ ಅಧ್ಯಕ್ಷತೆ ಸತೀಶ ಅಣ್ಣಾ ಜಾರಕಿಹೋಳಿ ಮಾನ್ಯ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಉಸ್ತುವಾರಿ ಸಚಿವರು ಮುಖ್ಯ ಅತಿಥಿಗಳು ಕುಮಾರಿ.
ಪ್ರಿಯಾಂಕ ಸತೀಶ ಜಾರಕಿಹೋಳಿ ಸಂಸದರು ಚಿಕ್ಕೋಡಿ ಲೋಕಸಭಾ ಸದ್ಯಸರು, ರಾಹುಲಅಣ್ಣಾ ಸತೀಶ ಜಾರಕಿಹೋಳಿ, ದಯಾನಂದ ಮಾ ಪಾಟೀಲ, ಕೀರಣಸಿಂಗ ರಜಪೂತ ಕಾಂಗ್ರೇಸ್ ಯುವಧುರಿಣರು, ಹಾಗೂ ಜಾವೇದ ಮುಶಾಪೀರಿ ಯಮಕನಮರಡಿ ಸಿಪಿಐ ಸಾಹೇಬರು, ಶಿವಾನಂದ ಮಣ್ಣಿಕೇರಿ ಪಿ ಎಸ್ ಐ ಸಾಹೇಬರು ಯಮಕನಮರಡಿ, ವಹಿಸಲಿದ್ದಾರೆ. ಉರಿನ ಗುರು ಹಿರಿಯರು ಸಮಸ್ತ ಗ್ರಾಮಸ್ಥರು ಹಾಗೂ ಯಾತ್ರಾ ಪಂಚಕಮೀಟಿಯವರು ಉಪಸ್ಥತರಿರುವರು.