'ಊಜರ್ಾ-2018' ವಾಷರ್ಿಕ ಕ್ರೀಡಾ ಕೂಟದ ಉದ್ಘಾಟನೆ

ಲೋಕದರ್ಶನ ವರದಿ

ಧಾರವಾಡ: ಮೂಲ ಧಾರವಾಡ ಪ್ರದೇಶದ ವ್ಯಾಪ್ತಿಗೆ ಒಳಪಟ್ಟು ಸಮೀಪದ ಗ್ರಾಮೀಣ ಹಾಗೂ ಕೊಳಚೆ ಪ್ರದೇಶದ ವಿದ್ಯಾಥರ್ಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ವಿಸ್ತೃತವಾದ ವ್ಯಾಸಂಗದ ಅವಕಾಶಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ ಅದ್ಭುತ ಸೇವೆ ಸಲ್ಲಿಸಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಶಂಸಿಸಿದರು. 

ಅವರು ನಗರದ ಕಾಮನಕಟ್ಟಿ ಹತ್ತಿರದ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯ 'ಊಜರ್ಾ-2018' ವಾಷರ್ಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜಿಲ್ಲಾಧಿಕಾರಿ ಹುದ್ದೆ ವಹಿಸಿಕೊಂಡ ನಂತರ ಮೊದಲ ಸರಕಾರೇತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಮಗೆ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ಕಲಿಕಾ ವಾತಾವರಣವನ್ನು ಕಂಡು ಬಹಳಷ್ಟು ಖುಷಿ ಎನಿಸಿದೆ. ಈ ಶಾಲೆಯು ಒದಗಿಸುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ವಿದ್ಯಾಥರ್ಿ ಪಾಲಕರು ಹಾಗೂ ಪೋಷಕರು ಆಸಕ್ತಿಯಿಂದ ಸ್ಪಂದನೆ ನೀಡಬೇಕು ಎಂದರು. 

ಕನರ್ಾಟಕದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ. ನಾವು ನಮ್ಮ ಮಕ್ಕಳಿಗೂ ಕೂಡಾ ಕನ್ನಡವನ್ನು ಕಲಿಸಲು ಮುಂದಾಗಿದ್ದೇವೆ. ಆದರೆ ಇಂದು ಸ್ಪಧರ್ಾತ್ಮಕ ಜಗತ್ತಿನಲ್ಲಿ ನಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲೀಷನ್ನು ಅಧ್ಯಯನ ಮಾಡಲೇಬೇಕಾಗುತ್ತದೆ. ಆದ್ದರಿಂದ ಕನ್ನಡಕ್ಕಟ ಆದ್ಯತೆ ನೀಡಿದರೂ ಕೂಡ ಇಂಗ್ಲಿಷನ್ನೂ ಕಡೆಗಣಿಸುವಂತಿಲ್ಲ. ಇಂಗ್ಲಿಷ್ ಕಲಿತರೂ ಮಾತೃಭಾಷೆಯನ್ನು ಪ್ರೀತಿಸಿ ಗೌರವಿಸಿ ಎಂದರು.

ಬೆಂಗಳೂರು ಮಹಾನಗರದ ಕಾಪರ್ೊರೇಟ್ ಜಗತ್ತಿನಲ್ಲಿ ಕೆಲಸ ಮಾಡಿದವರೂ ಸಹ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಬೋಧನೆಗೆ ತೊಡಗಿದ್ದು, ಅವರು ತಾವು ಪಡೆಯುವ ವೇತನ ಭತ್ಯೆಗಳ ಬಗೆಗೆ ವಿಚಾರಿಸದೇ  ವಿದ್ಯಾಥರ್ಿಗಳಿಗೆ ಉನ್ನತ ಮಟ್ಟದ ಅಭಿಪ್ರೇರಣೆ (ಮೋಟಿವೇಷನ್) ನೀಡಿ ತರಗತಿಗಳಲ್ಲಿ ಹೊಸತು ಪ್ರಯೋಗಗಳನ್ನು ಅಳವಡಿಸುವಲ್ಲಿ ಆಸಕ್ತಿ ಹೊಂದಿರುವುದು ತಮಗೆ ಸಮಾಧಾನ ತಂದಿದೆ ಎಂದರು.

ಸಾರ್ಕ, ಕರಾಟೆ, ಪ್ರಬಂಧ ಮುಂತಾದ ಉನ್ನತ ದಜರ್ೆಯ ಸ್ಪಧರ್ೆಗಳಲ್ಲಿ ಈ ಶಾಲೆಯ ವಿದ್ಯಾಥರ್ಿಗಳು ಪಾಲ್ಗೊಂಡು ಬಹುಮಾನ ಗಳಿಸಿರುವುದೂ ಸಹ ವಿಶೇಷವಾಗಿದೆ ಎಂದರು. 

ಈ ಮೂಲ ಧಾರವಾಡ ಪರಿಸರದ ಪಾಲಕರು-ಪೋಷಕರು ಉತ್ತಮ ಕಲಿಕಾ ಅವಕಾಶಗಳನ್ನು ಒದಗಿಸಿದ್ದಾರೆ. ಶಿಕ್ಷಕರು ಜ್ಞಾನ ಸಂಪಾದನೆಗೆ ಪೂರಕವಾಗಿ ವ್ಯಾಪಕ ಮಾರ್ಗದರ್ಶನ ಮಾಡುತ್ತಿದ್ದಾರೆ.  ಈ ಹಂತದಲ್ಲಿ ವಿದ್ಯಾಥರ್ಿಗಳು ತಮ್ಮ ವ್ಯಾಸಂಗದ ಜವಾಬ್ದಾರಿಗಳನ್ನು ಅರಿತು ಸಾಧನೆ ಮಾಡಿದರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ತಮ್ಮ ತರಗತಿ ಕಲಿಕೆಯೊಂದಿಗೆ ಉತ್ಕೃಷ್ಟ ಬರವಣಿಗೆ, ಸಾಹಿತ್ಯದ ನಂಟು, ನೃತ್ಯ, ಚಿತ್ರಕಲೆ, ಯೋಗ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಹೆಸರು ಮಾಡಿದಾಗ ನಾವು ಪ್ರತಿನಿಧಿಸುವ ಸಮಾಜಕ್ಕೆ ಹಾಗೂ ದೇಶಕ್ಕೆ ಉನ್ನತ ಹಿರಿಮೆ ಪ್ರಾಪ್ತವಾಗುತ್ತದೆ ಎಂದರು. 

ಜಗತ್ತಿನ ಖ್ಯಾತನಾಮರ ಆದರ್ಶಗಳನ್ನು ಮುಂದಿಟ್ಟುಕೊಂಡು ವಿದ್ಯಾಥರ್ಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ದೇಶ ಎದುರಿಸುತ್ತಿರುವ ಸವಾಲುಗಳ ಬಗೆಗೆ ಅರಿತು ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಅಪರಾಧ ಕೃತ್ಯಗಳು ನಡೆಯದಂತೆ, ಮೇಲು-ಕೀಳು ಭಾವನೆಗಳು ಬೆಳೆಯದಂತೆ ನೋಡಿಕೊಳ್ಳುವಲ್ಲಿ ವಿದ್ಯಾಥರ್ಿಗಳು ತಮ್ಮ ಜವಾಬ್ದಾರಿಗಳನ್ನು ಅರಿಯಬೇಕು. ವಿದ್ಯಾಥರ್ಿಗಳೇ ದೇಶದ ಭವಿಷ್ಯ ನಿರೂಪಕರು. ಆದ್ದರಿಂದ ದೇಶಪ್ರೇಮ, ಅಭಿಮಾನ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಚರಂತಿಮಠ ಪಬ್ಲಿಕ್ ಶಾಲೆಯ ಉತ್ತಮ ಪರಿಸರ, ಪರಿಣಾಮಕಾರಿ ಬೋಧನೆಯ ಕೌಶಲ ಹೊಂದಿದ ಉತ್ತಮ ಶಿಕ್ಷಕರು ಹಾಗೂ ಕಲಿಕಾ ಅವಕಾಶಗಳನ್ನು ನೀಡಿರುವ ಉತ್ತಮ ಪಾಲಕರ ಶ್ರಮ ಸಾರ್ಥಕವಾಗಬೇಕಾದರೆ ಸೂಕ್ತ ಜ್ಞಾನ ಸಂಪಾದನೆಗೆ ವಿದ್ಯಾಥರ್ಿಗಳು ತೊಡಗಿಕೊಳ್ಳಬೇಕು ಎಂದ ದೀಪಾ ಚೋಳನ್ ಅವರು ಚರಂತಿಮಠ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರಿಗೆ ಅಭಿನಂದನೆ ಸಲ್ಲಿಸಿದರು.  

ಶಾಲಾ ಸಂಸ್ಥಾಪಕ ಹಿರಿಯ ನ್ಯಾಯವಾದಿ ಅರುಣ ಚರಂತಿಮಠ ಅವರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಸನ್ಮಾನಿಸಿ, ನಮ್ಮ ಜಿಲ್ಲೆಗೆ ದಕ್ಷ ಹಾಗೂ ಶಿಸ್ತಿನ ಜಿಲ್ಲಾಧಿಕಾರಿಗಳು ಬಂದಿರುವುದು ಹೆಮ್ಮೆಯ ವಿಷಯ ಎಂದರು. 

ಶಾಲೆಯ ಪ್ರಿನ್ಸಿಪಾಲ್ ವೀಣಾ ಮಣಿ ಮಾತನಾಡಿ, "ಸಿಬಿಎಸ್ಇ ಪಠ್ಯಕ್ರಮದಲ್ಲಿ ಕ್ರೀಡಾ ಚಟುವಟಿಕೆಗಳು ಶೈಕ್ಷಣಿಕ ಚಟುವಟಿಕೆಗಳೊಟ್ಟಿಗೆ ವಿದ್ಯಾಥರ್ಿ ಜೀವನದ ಪ್ರಮುಖ ಭಾಗವಾಗಿರುತ್ತವೆ. ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಯು ಕರಾಟೆ, ಯೋಗ, ನೃತ್ಯ, ಸಂಗೀತ ಮತ್ತು ಚಿತ್ರಕಲೆಗಳನ್ನು ಸಹ ವಿದ್ಯಾಭ್ಯಾಸದಲ್ಲಿ ಅಳವಡಿಸಿಕೊಂಡಿದೆ" ಎಂದರು.  

ವಿದ್ಯಾಥರ್ಿಗಳಿಗೆ ಗೌರವ : ಶಾಲೆಯ ಉತ್ತಮ ವಿದ್ಯಾಥರ್ಿ ಪ್ರಶಸ್ತಿಪಡೆದ 10ನೆಯ ತರಗತಿಯ ಶ್ರದ್ಧಾ ಕೋರಿ, ಏಷಿಯಾ ಮುಕ್ತ ಈಜು ಸ್ಪಧರ್ೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗಳಿಸಿದ 12ವರ್ಷದ ಅಭಿಗ್ನಾ ಆನಂದ ಅವರನ್ನು ಗೌರವಿಸಲಾಯಿತು. ಈ ವಿದ್ಯಾಥರ್ಿಗಳು ತಮ್ಮ ಪರಿಶ್ರಮ ಮತ್ತು ಪ್ರಶಸ್ತಿಯವರೆಗಿನ ಅನುಭವಗಳನ್ನು ಹಂಚಿಕೊಂಡರು. ಶಾಲೆಯ ವಿದ್ಯಾಥರ್ಿಗಳು ಸಾಹಸ ಮತ್ತು ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸಿದರು.

ಮಾಜಿ ಮೇಯರ್ ಶಿವು ಹಿರೇಮಠ, ಪಾಲಿಕೆ ಸದಸ್ಯ ಶಂಕರ ಶೇಳಕೆ, ಕಿರಣ ಹಿರೇಮಠ, ಒಟ್ಟೀಲೀ ಅನ್ಬನ್,  ಸಿದ್ದು ಬೆಟಗೇರಿ, ವೀರೇಶ ಕೆಲಗೇರಿ, ಎಸ್. ಕೆ. ಪತ್ತಾರ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಗೌಡಪ್ಪಾಗೌಡ ಪಾಟೀಲ, ವೀಣಾ ಬೆಟಗೇರಿ, ಶಿವಾನಂದ ಭಾವಿಕಟ್ಟಿ, ಎಸ್. ಜಿ. ಸುಬ್ಬಾಪೂರಮಠ, ಶ್ರೀನಿವಾಸ ವಾಡಪ್ಪಿ ಅವರನ್ನು ಸನ್ಮಾನಿಸಲಾಯಿತು.

   ಎಆರ್ಸಿ ಪೌಂಡೇಶನ್ನ ಧರ್ಮದಶರ್ಿಗಳಾದ ಸುಜಾತಾ ಚರಂತಿಮಠ, ಭೈರವ ಎ. ಸಿ., ಪಾಲಕರು, ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.