ಕೃಷಿ ಸಖಿಯರಿಗೆ “ಪರಿಸರ ಕೃಷಿ ವಿಧಾನಗಳು” ಕುರಿತು ಮಾಡ್ಯೂಲ್‌-4 ರ ತರಬೇತಿ ಕಾರ್ಯಕ್ರಮದ ಉದ್ಘಾಟನೆ

ಕೃಷಿ ಸಖಿಯರಿಗೆ “ಪರಿಸರ ಕೃಷಿ ವಿಧಾನಗಳು” ಕುರಿತು ಮಾಡ್ಯೂಲ್‌-4 ರ ತರಬೇತಿ ಕಾರ್ಯಕ್ರಮದ ಉದ್ಘಾಟನೆ Inauguration of Module-4 training program on “Ecological Farming Methods” for agricultural assistant

ಲೋಕದರ್ಶನ ವರದಿ 

ಹುಲಕೋಟಿ 22 : ಸಂಜೀವಿನಿ-ಕೆ.ಎಸ್‌.ಆರ್‌.ಎಲ್‌.ಪಿ.ಎಸ್‌.ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ್ಘಜೀವನೋಪಾಯ ಇಲಾಖೆ, ಕರ್ನಾಟಕ ಸರಕಾರ ಹಾಗೂ ಐ.ಸಿ.ಎ.ಆರ್‌-ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ ಇವರ ಸಹಯೋಗದಲ್ಲಿ “ಪರಿಸರ ಕೃಷಿ ವಿಧಾನಗಳು” ಕುರಿತಂತೆ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ : ಮೊಡ್ಯೂಲ್‌-4) 6 ದಿನಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ 21-04-2026 ರಿಂದ 26-04-2026 ರವರೆಗೆ ಹಮ್ಮಿಕೊಳ್ಳಲಾಯಿತು.

ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 21-04-2026 ಮಂಗಳವಾರದಂದು ಎಮ್‌.ವಿ.ಚಳಗೇರಿ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ, ಗದಗ ಇವರು ಉದ್ಘಾಟಿಸಿ, ಕೃಷಿ ಸಖಿಯರು ಜಿಲ್ಲೆಯ ಕೃಷಿ ಸಂಭಂಧಿತ ಚಟುವಟಿಕೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರಸ್ತುತ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಕಿವಿ ಮಾತು ಹೇಳಿದರು,ಜೊತೆಗೆ ಕೃಷಿ ಸಖಿಗಳ ಜವಾಬ್ದಾರಿ ಮತ್ತು ಕಾರ್ಯಚಟುವಟಿಕೆಗಳನ್ನು ತಿಳುಹಿಸಿದರು. ಎನ್‌.ಆರ್‌.ಎಲ್‌.ಎಮ್ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ ಮಡ್ಡೇಶ ಮಲ್ಲಿಮಾರ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಮಾಡ್ಯೂಲ್ 4ರ ಧ್ಯೇಯೋದ್ಧೇಶಗಳನ್ನು ವಿವರಿಸಿದರು.  

ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥರಾದಡಾ. ಸುಧಾ ವಿ. ಮಂಕಣಿ ಮಾತನಾಡಿ, ತರಬೇತಿಯಲ್ಲಿ ಪಡೆದುಕೊಂಡ ಮಾಹಿತಿಮತ್ತುಜ್ಞಾನವನ್ನುರೈತ ಹಾಗೂ ರೈತ ಮಹಿಳೆಯರಿಗೆ ಸರಿಯಾದ ಸಮಯದಲ್ಲಿ ತಲುಪಿಸಿ ತರಬೇತಿಯಉದ್ದೇಶವನ್ನು ಸಾಕಾರಗೊಳಿಸಬೇಕೆಂದು ತಿಳಿಸಿದರು.ಡಾ. ಮಂಜುಪ್ರಕಾಶ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು, ಡಾ. ವಿನಾಯಕ ನಿರಂಜನ ಸ್ವಾಗತಿಸಿದರು ಮತ್ತು ಹಾಗೂ ಎನ್‌. ಎಚ್‌. ಭಂಡಿ ವಂದಿಸಿದರು.

ಸದರಿ ಕಾರ್ಯಕ್ರಮದಲ್ಲಿಜಿಲ್ಲಾ ವ್ಯವಸ್ಥಾಪಕರಾದ ಬಸವರಾಜ ಮೂಲಿಮನಿ, ಸಂಪನ್ಮೂಲ ವ್ಯಕ್ತಿಗಳಾದ ಡಾ. ನೀಲಮ್ಮಆರ್‌. ಕೊಳಗೇರಿ, ಗದಗ ಮತ್ತು ಗಜೇಂದ್ರಗಡ ತಾಲೂಕಿನ 30 ಕೃಷಿ ಸಖಿಯರು ಉಪಸ್ಥಿತರಿದ್ದರು.