ದ್ವಿಭಾಷಾ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ

ದ್ವಿಭಾಷಾ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ Inauguration of English Medium Class

ಧಾರವಾಡ ಗ್ರಾಮೀಣ20:  ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಗಬೇಕು ಹಾಗೂ ಇಂಗ್ಲಿಷ್ ಕಲಿಯಬೇಕೆಂದು ದ್ವಿಭಾಷೆ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲಾಗಿದೆ ಎಂದು ಬೇಲೂರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸವರಾಜಸಂದೂರಿ ಹೇಳಿದರು. 

ಧಾರವಾಡ ಗ್ರಾಮೀಣ ತಾಲೂಕಿನ ಬೇಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ ದ್ವಿಭಾಷಾ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ ಮಾಡಿ ಮಾತನಾಡುತ್ತಾ ನಮ್ಮೂರಿನ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭವಾದದ್ದು ತುಂಬಾ ಸಂತೋಷ ತಂದಿದೆ. ಈ ಭಾಗದ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಾಲೆಗೆ ಮಕ್ಕಳನ್ನು ಸೇರಿಸುತ್ತೇವೆ ಎಂದರು. 

ಕಾರ್ಯಕ್ರಮದ ಸಾನಿಧ್ಯವನ್ನು ಶಿವಾನಂದ ಮಠ ಬೇಲೂರ ಸಿದ್ಧೇಶ್ವರ ಸ್ವಾಮಿಜಿಗಳು ವಹಿಸಿ, ಮಾತನಾಡುತ್ತಾ ರಾಜ್ಯ ಸರಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅಂಗ್ಲ ಮುಧ್ಯಮ ಶಾಲೆ ಪ್ರಾರಂಭಿಸಿದ್ದು ಕೆಲ ಬಡವರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬ ಮಾಹಾದಾಸೆ ಹೊಂದಿದ್ದರೂ ಆರ್ಥಿಕ ಸಮಸ್ಯೆಯಿಯಿಂದ ತಮ್ಮ ಕನಸು ಕೈಬಿಡುವಂತಾಗಿತ್ತು. ಅಂಥವರ ಕನಸು ನನಸಾಗಲು ರಾಜ್ಯ ಸರಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿದೆ ತಾವು ಉಪಯೋಗ ಪಡೆದುಕೊಳ್ಳಬೇಕೆಂದು ಕರೆನೀಡಿದರು. 

ಮುಖ್ಯ ಅತಿಥಿಯಾಗಿ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್ ಮಾತನಾಡಿ ಈ ಬಾರಿ ಆಂಗ್ಲ ಮಾಧ್ಯಮ ತರಗತಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರಿಸುವ ಭರವಸೆ ಮಕ್ಕಳ ಪೋಷಕರ ಮೇಲೆ ಹಾಗೂ ಶಾಲಾ ಶಿಕ್ಷಕರ ಮೇಲೆ ಇದೆ ಎಂದರು. 

ಬ್ರೈಟರ್ ಮೈಂಡ ಮತ್ತು ಹಾರ್ಟಪುಲ್ನೆಸ್ ಸಂಸ್ಥೆಯಿಂದ ನಡೆದ ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮುಕುಂದ ಅಚಲಕರರವರು ಮಕ್ಕಳಿಗೆ ಕಲಿಸಿದ ಗಾಂಧಾರ ವಿಧ್ಯೆ ಕುರಿತು ಮಕ್ಕಳಿಂದ ಚಟುವಟಿಕೆ ಮಾಡಿಸಿದರು. ಮಕ್ಕಳು ಕಣ್ಣು ಕಟ್ಟಿ ಬಣ್ಣ ಗುರುತಿಸುವದು ಅಕ್ಷರ ಓದುವದು. ಮುಂತಾದ ಅತೀಂದ್ರಿಯ ಶಕ್ತಿಯ ಚಟುವಟಿಕೆಗಳನ್ನು ಮಾಡಿಸಿ ಪ್ರಶಸ್ತಿ ಪತ್ರವನ್ನು ಮಕ್ಕಳಿಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಗೈಡ್ಸ ಮಕ್ಕಳ ಬೇಸಿಗೆ ಶಿಬಿರದ ಪ್ರಶಸ್ತಿಗಳನ್ನು ವಿತಸಲಾಯಿತು. 

ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅದ್ಯಕ್ಷ ಬಸವರಾಜ ಹುಲ್ಲಂಬಿ ವಹಿಸಿದ್ದರು.ಗ್ರಾ ಪಂ ಸದಸ್ಯರಾದ ಯಲ್ಲಪ್ಪ ಕಡ್ಲಿ, ಮಂಜುನಾಋ ಧರೆಣ್ಣವರ ಸಿ ಆರ್ ಪಿಗಳಾದ ಅನಘಾ ಗೋಡಕಿಂಡಿ. ಗ್ರಾಮಸ್ಥರು ಮಕ್ಕಳು ಶಿಕ್ಷಕರು ಹಾಜರಿದ್ದರು. ಪ್ರಧಾನ ಗುರುಗಳಾದ ಎಂ ಎನ್ ಸತ್ತೂರ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹಣ ಗೂಳಣ್ಣವರ ಕಾರ್ಯಕ್ರಮವನ್ನು ನಿರೂಪಿಸಿದರು.