ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ

ಗುಲರ್ಾಪೂರ 19: ಮಕ್ಕಳು ಗುರಿ ಮುಟ್ಟಲು ಕುತೂಹಲ ಹೆಚ್ಚಿಸುವ ಮೂಲಕ ಶಿಕ್ಷಕರು ಪಾಲಕರು ಸಂಸ್ಕಾರವನ್ನು ತುಂಬಿ ಭವ್ಯ ಭವಿಷ್ಯತ್ತಿನ ಪ್ರಜೆಗಳನ್ನಾಗಿ ನಿಮರ್ಿಸುವ ಕಾರ್ಯ ನಮ್ಮದೆಲ್ಲರದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

  ಅವರು ಗುರುವಾರ ಸ್ಥಳೀಯ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈಜ್ಞಾನಿಕ ರೀತಿಯಲ್ಲಿ ಮಕ್ಕಳ ಕಲಿಕೆಯನ್ನು ಫಲಪ್ರದಗೋಳಿಸಿ ನಾವಿನ್ಯ ಚಟುವಟಿಕೆಗಳನ್ನು ಅಳವಡಿಸಲು ಶಿಕ್ಷಕರು ಪ್ರಯತ್ನಿಸಬೇಕು. ಮಕ್ಕಳ ವಿಜ್ಞಾನ ಹಬ್ಬವು ನೂತನ ರೀತಿಯಾಗಿ ಬೇರೆ ಬೇರೆ ಶಾಲೆಗಳ ಮಕ್ಕಳೊಂದಿಗೆ ಬೇರೆತು ಸಂಪನ್ಮೂಲ ಶಿಕ್ಷಕರಿಂದ ಆವಿಷ್ಕಾರಿಯಾಗುವಂತಹ ಏನು? ಏಕೆ? ಹೇಗೆ? ಎಂಬ ಅಮೂರ್ತದಿಂದ ಮೂರ್ತದ ಕಡೆ ಸಾಗುವ ಒಂದು ರೀತಿಯ ಕಲಿಕಾ ವಿಧಾನವಾಗಿದೆ ಎಂದರು. 81 ವರ್ಷಗಳ ಪಾರಂಪರಿಕ ಶಾಲೆಯಾದ ಪ್ರಯುಕ್ತ ಮಾಚಿ ಸಚಿವರು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಶಿಫಾರಸ್ಸಿನ ಮೇರೆಗೆ ಶಾಲೆಯ ಮೂಲಭೂತ ಸೌಲಭ್ಯಗಳಾದ ಕೊಠಡಿ ದುರಸ್ಥಿ ಕಾರ್ಯವು ಗೋಕಾಕ ಪಂಚಾಯತ ರಾಜ್ ಅಭಿಯಂತರ ಇಲಾಖೆಯಿಂದ 2.00 ಲಕ್ಷ ರೂಗಳ. ಕಾಮಗಾರಿ ಪ್ರಾರಂಭಗೊಂಡಿದೆ. ಕೊಠಡಿಗಳ ಮರು ನಿಮರ್ಾಣಕ್ಕೆ 3 ಕೊಠಡಿಗಳಿಗೆ 31.80 ಲಕ್ಷ ರೂಗಳ ವೆಚ್ಚದ ಕಾಮಗಾರಿಗೆ, ಮಕ್ಕಳ ಸಂಖ್ಯಾನುಸಾರ 2 ಗಂಡು, 2 ಹೆಣ್ಣು ಮಕ್ಕಳ ಶೌಚಾಲಯ ನಿಮರ್ಿಸಲು ಅನುಮೊದನೆಗಾಗಿ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಅತಿಥಿಗಳಾದ ನಿವೃತ್ತ ಶಿಕ್ಷಕ ಯಲ್ಲಪ್ಪ ಕುಲಗೋಡ, ವೀರಭದ್ರ ನೇರಲಿ ಮಾತನಾಡಿ, ಮಕ್ಕಳಲ್ಲಿ ವಿಜ್ಞಾನದ ಕುರಿತು ವಿಶೇಷ ಸಂಪನ್ಮೂಲ ಶಿಕ್ಷಕರಿಂದ ಚಟುವಟಿಕೆಯಲ್ಲಿ ತೊಡಗಿಸುವ ಕಾರ್ಯ ಸ್ವಾಗತಾರ್ಹವಾಗಿದೆ. ವಿವಿಧ ಶಾಲೆಗಳ ಮಕ್ಕಳನ್ನು ಸೇರಿಸಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮೂಲಕ ಭಿತ್ತಿ ಪತ್ರಗಳು, ಡೋಳ್ಳೂವಾಧ್ಯ, ಕೋಲಾಟ, ವಿಶೇಷ ವೇಷ ಭೂಷಣಗಳು, ಕಾಗದದ ಕಿರೀಟ, ಕಲಿಕಾ ಕಿಟ್ಗಳಿಂದಾಗಿ ಕಲಿಕಾ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕೈಗೊಂಡ ಸರಕಾರದ ಕಾರ್ಯವನ್ನು ಪ್ರಶಂಸಿಸಿದರು. ಸಾನಿಧ್ಯವಹಿಸಿದ ಶಿವಾನಂದ ಹಿರೇಮಠ ಮಕ್ಕಳ ಹಬ್ಬದ ಕುರಿತು ಆಶೀರ್ವಚನ ನೀಡಿದರು.

  ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ನೇಮಗೌಡರ, ರೇವಪ್ಪ ನೇಮಗೌಡರ, ಪುರಸಭೆ ಸದಸ್ಯ ಆನಂದ ಟಪಾಲದಾರ, ಪಿಕೆಪಿಎಸ್ ಅಧ್ಯಕ್ಷ ಗೌಡಪ್ಪ ನೇಮಗೌಡರ, ಕಾರ್ಯದಶರ್ಿ ಎಸ್.ಜಿ ಹಂಚಿನಾಳ, ಮಲ್ಲಪ್ಪ ನೇಮಗೌಡರ, ಮಹದೇವ ಬಿಳಗಿ, ಮಹದೇವ ಜಕಾತಿ, ಲಕ್ಷ್ಮಣ ಮರಾಠೆ, ಭೀಮಶಿ ದೇವರಮನಿ, ರೇವಪ್ಪ ಸತ್ತಿಗೇರಿ, ಮಹದೇವ ಕುಲಗೋಡ, ಮಹಾಲಿಂಗ ಮುಗಳಖೋಡ, ಪ್ರಕಾಶ ಮುಗಳಖೋಡ, ದುಂಡಪ್ಪ ಮುಗಳಖೋಡ, ಎಮ್.ಜಿ ನೇಮಗೌಡರ,ಸಿ.ಆರ್.ಪಿ ಕೆ.ಎಲ್ ಮೀಶಿ, ಪ್ರಧಾನ ಗುರು ಎಮ್ ಮಂಜುನಾಥ, ಸಂಪನ್ಮೂಲ ಶಿಕ್ಷಕರಾದ ಎಸ್.ಎಚ್ ಯಂಡ್ರಾವಿ, ಎಸ್.ಎಮ್ ಮಂಗಿ, ಆರ್.ಬಿ ಶೆಕ್ಕಿ, ಎಸ್ ಎಸ್ ಪಾಟೀಲ, ದೀಪಿಕಾ ನಡೋಣಿ, ಎಚ್.ಜಿ ದಡ್ಡಿಮನಿ, ರೂಪಾ ಬಸಳಿಗುಂದಿ, ಅಜಿತ ಐಹೊಳೆ, ಹಾಗೂ ಮೂಡಲಗಿ ಸಮೂಹ ವ್ಯಾಪ್ತಿಯ ಆಯ್ದ ಶಿಕ್ಷಕರು ವಿದ್ಯಾಥರ್ಿಗಳು ಹಾಜರಿದ್ದರು.

  ಕಾರ್ಯಕ್ರಮವನ್ನು ಬಿ.ವಾಯ್ ಮೊಮಿನ ನಿರೂಪಿಸಿದರು. ಎಸ್ ಬಿ ದರೂರ ಸ್ವಾಗತಿಸಿ, ಬಿ.ಎಸ್. ಶೆಟ್ಟಪ್ಪನ್ನವರ ವಂದಿಸಿದರು.