ಮೇ. 31 ರಂದು ಡಾ, ಬಿ.ಆರ್.ಅಂಬೇಡ್ಕರ್ ಅವರ ಪಂಚಲೋಹದ ಪುತ್ಥಳಿ ಉದ್ಘಾಟನಾ ಸಮಾರಂಭ
Inauguration ceremony of the Panchaloha statue of Dr. B.R. Ambedkar on May 31
ಜಮಖಂಡಿ 28 : ತಾಲೂಕಿನ ಗೋಠೆ ಗ್ರಾಮದಲ್ಲಿ ಮೇ.31 ರಂದು ಡಾ, ಬಿ.ಆರ್.ಅಂಬೇಡ್ಕರ್ ಅವರ ಪಂಚಲೋಹದ ಪುತ್ಥಳಿ ಉದ್ಘಾಟನಾ ಸಮಾರಂಭ ಜರುಗಲಿದೆಂದು ದಲಿತ ಮುಖಂಡ ಗೋಪಿನಾಥ ಮೀಶಿ ಹೇಳಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಾತಿ-ಜಾತಿಗಳ ನಡುವೆ ದ್ವೇಶ, ಧರ್ಮ-ಧರ್ಮಗಳ ನಡುವೆ ಜಗಳ-ಕದನಗಳು ನಡೆಯುತ್ತಿವೆ. ಇದನ್ನು ಹೋಗಲಾಡಿಸಲು ಪ್ರತಿಯೊಂದು ಊರುಗಳಲ್ಲಿ ಡಾ,ಬಿ,ಆರ್ ಅಂಬೇಡ್ಕರ ಅವರ ಪುತ್ಥಳಿಗಳು ನಿರ್ಮಾಣವಾದರೆ ಮಾತ್ರ ಸಮಾನತೆ-ಭಾತೃತ್ವ, ಏಕತೆ, ಜಾತ್ಯಾತೀತ ರಾಷ್ಟ್ರವಾಗಲು ಸಾಧ್ಯ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾನತೆಗಾಗಿ ಹಾಗೂ ಭಾತೃತ್ವಗಾಗಿ ಮೇಲು-ಕೀಳು ಮರೆತು ಎಲ್ಲರೂ ಸಮಾನತೆಯಿಂದ ಭಾಳ್ವೇ ಮಾಡುವ ಉದ್ದೇಶವನ್ನು ಹೋಂದಿದರು. ಅವರು ತತ್ವ-ಸಿದಾಂತದ ಪ್ರಕಾರ ನಾವುಗಳು ಬದುಕುತ್ತಿದ್ದೇವೆ. ಅದಕ್ಕಾಗಿ ಪ್ರತಿಯೊಂದು ಗ್ರಾಮ- ಊರುಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗಳು ನಿರ್ಮಾಣವಾದರೆ ಮಾತ್ರ ಸಮಾನತೆಯನ್ನು ಕಾಣಲು ಸಾಧ್ಯ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಉದ್ಘಾಟನಾ ಸಮಾರಂಭಕ್ಕೆ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಶ್ರೀಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ, ಅಂಬೇಡ್ಕರ್‌ವಾದಿ ಚಿಂತಕರು ಬಿ,ಗೋಪಾಲ್, ಕಾರ್ಮಿಕ ಸಚಿವ ಸಂತೋಷ ಲಾಡ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಮಾಜಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು. ಮಾಜಿ ಶಾಸಕರು, ವಿವಿಧ ದಲಿತಪರ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ದಲಿತ ಮುಖಂಡರಾದ ಚನ್ನಬಸು ಗುಣದಾಳ, ಶ್ರೀನಾಥ ಬಸವರಾಜ ಮಾತನಾಡಿದರು. ಇದೇ ಸಂದರ್ಭದಲ್ಲಿ ಶರಣಪ್ಪ ಹೊಸಮನಿ, ಆನಂದ ಬಡಿಗೇರ, ಗೋಪಾಲ ಜುಮನಾಳ, ಎಸ್,ಕೆ, ಬಸವರಾಜ, ನಿಂಗರಾಜ ದೊಡಮನಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 