ನಿವೃತ ಹೊಂದಿದ ಕಾರಿ ಜಯರಾಮ ನಾಯಕ ಅವರ ಬಿಳ್ಕೋಡುಗೆ ಸಮಾರಂಭ
Funeral ceremony for retired Kari Jayaram Nayak at Bilkodu
ಲೋಕದರ್ಶನ ವರದಿ
ಜಮಖಂಡಿ 28: ನಿವೃತಿ ಜೀವನ ಎಂಬುವುದು ಯಾರು ಸರಕಾರಿ ಕೆಲಸಕ್ಕೆ ಅಧಿಕಾರಿಯಾಗಿ ಸೇವೆಗೆ ಸೇರುತ್ತಾರೆ. ಆತನ ನಿವೃತಿ ಜೀವನದ ದಿನಾಂಕ ಅವತ್ತೆ ನಿಗದಿಯಾಗುತ್ತದೆ. ಸರಕಾರದ ಕೆಲಸದಲ್ಲಿ ಯಾರು ನಿಷ್ಠೆ-ಪ್ರಾಮಾಣಿಕವಾಗಿ ಸೇವೆ ಸಲಿಸುತ್ತಾರೆ ಅವರ ನಿವೃತಿ ಜೀವನ ಸುಖಮಯವಾಗುತ್ತದೆ ಎಂದು ಬೆಳಗಾವಿ ಸಾರಿಗೆ ಜಂಟಿ ಸಹಾಯ ಆಯುಕ್ತ ಸಿದ್ದಪ್ಪ ಕಲ್ಲೇರ ಹೇಳಿದರು. ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ಆವರಣದಲ್ಲಿ ನಡೆದ ನಿವೃತ ಹೊಂದಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯರಾಮ ನಾಯಕ ಅವರ ಬಿಳ್ಕೋಡುಗೆ ಸಮಾರಂಭ ಹಾಗೂ ಗಣೇಶನ ಮೂರ್ತಿ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾನು ಬಾಗಲಕೋಟ ಜಿಲ್ಲೆಯಲ್ಲಿ ಕೆಲಸವನ್ನು ನಿರ್ವಹಿಸಿದ್ದೇನೆ.
ಅದರಲ್ಲಿ ಜಮಖಂಡಿ ಎಂದರೆ ಎಲ್ಲ ಅಧಿಕಾರಿಗಳಿಗೆ ಬಲು ಪ್ರೀತಿ, ಇಲ್ಲಿನ ಜನರು ಬಹಳ ಒಳ್ಳೆಯ ಜನರು. ಸರಕಾರಿ ಸೇವೆಯನ್ನು ಮಾಡಲು ಎಲ್ಲರೂ ಜಮಖಂಡಿಯಲ್ಲಿ ಸೇವೆ ಸಲಿಸಬೇಕೆಂದು ಭಾವಿಸುತ್ತಾರೆ. ಇಂತಹ ತಾಲೂಕಿನಲ್ಲಿ ಜಯರಾಮ ನಾಯಕ ಅವರು ಸೇವೆಯನ್ನು ಸಲಿಸಿದ್ದಾರೆ. ಅವರು ಬಹಳ ಮೃದುಸ್ವಭಾವದ ವ್ಯಕ್ತಿ, ಕಾನೂನು ಅರಿತುಕೊಂಡವರು ಕಾನೂನಿನ ಪರಿಪಾಲನೆ ಮಾಡುವ ಮೂಲಕ ಸರಕಾರದ ಸೇವೆಯನ್ನು ಮಾಡಿದ್ದಾರೆ. ಅವರು ಸರಕಾರ ಕೆಲಸವನ್ನು ಪ್ರಾಮಾಣಿಕ, ನಿಷ್ಠೆಯಿಂದ ಸೇವೆಯನ್ನು ಸಲಿಸುವ ಜೊತೆಗೆ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ಇತ್ಯಾರ್ಥ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಇಲಾಖೆಗೆ ದೊಡ್ಡಮಟ್ಟ ಕೀರ್ತಿಯನ್ನು ತಂದಿದ್ದಾರೆ ಎಂದರು.
ಜಯರಾಮ ನಾಯಕ ಅವರು ಸರಕಾರದ ಸೇವೆಯಿಂದ ಮಾತ್ರ ನಿವೃತಿಯನ್ನು ಹೊಂದಿದ್ದಾರೆ. ಅವರ ಜೀವನ ಇನ್ನೂ ನಿವೃತಿಯನ್ನು ಹೊಂದಿರುವುದಿಲ್ಲ. ಅವರು ಮಾಡಿದ ಸಾರ್ವಜನಿಕ ಸೇವೆ ಹಾಗೂ ಜನರಿಗೆ ಸ್ಪಂದಿಸುವ ಕಾರ್ಯವನ್ನು ನೋಡಿ ಇಲಾಖೆಯು ಮೆಚ್ಚುಗೆ ವ್ಯಕ್ತಪಡಿಸಿದೆ. ಇಂತಹ ಒಬ್ಬ ನಿಷ್ಠಾವಂತ ಅಧಿಕಾರಿಗಳು ಇಲಾಖೆಯಲ್ಲಿ ಇನ್ನೂ ಸೇವೆಯನ್ನು ಸಲಿಸಬೇಕಾಗುತ್ತದೆ. ಆದರೆ ನಿವೃತಿ ಎಂಬುವುದು ಯಾವ ಅಧಿಕಾರಿಗೂ ಬಿಟ್ಟಿದ್ದು ಅಲ್ಲ. ಇಂದಲ್ಲ ನಾಳೆ ಎಲ್ಲರೂ ನಿವೃತಿಯನ್ನು ಹೊಂದಲೆಬೇಕಾಗುತ್ತದೆ. ಅವರ ನಿವೃತಿ ಜೀವನ ಸುಖಮಯವಾಗಲ್ಲಿ ಎಂದು ಶುಭ ಹಾರೈಯಿಸಿದರು.
ನಿವೃತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್,ಬಿ,ತೀರ್ಥ, ವಿಜಯಪೂರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಾಸೀಮಬಾಬಾ ಮುದ್ದೇಬಿಹಾಳ, ಗೋಕಾಕ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ ಕುಲಕರ್ಣಿ, ಅಥಣಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಗುಡೋಡಗಿ, ನಿವೃತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತವಾಡ, ವಿಜಯಪೂರ ಮೋಟಾರು ವಾಹನ ನೀರೀಕ್ಷಕ ಜಯರಾಜ, ಮೋಟಾರು ವಾಹನ ನೀರೀಕ್ಷಕ ರವಿರಾಜ ಪವಾರ, ಪಿಡಿಒ ಸುರೇಶ ನಾಯಕ ಮಾತನಾಡಿದರು. ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಆರ್ಶೀವಚನ ನೀಡಿದರು. ಎನ್,ವಿ,ಅಸ್ಕಿ ನಿರೂಪಿಸಿದರು.
ಜಮಖಂಡಿ ಮೋಟಾರು ವಾಹನ ನೀರೀಕ್ಷಕ ಶಿವಾನಂದ ಕಾರಜೋಳ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವೇದಿಕೆಯಲ್ಲಿ ನಿವೃತ ಹೊಂದಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯರಾಮ ನಾಯಕ ಅವರ ಧರ್ಮಪತ್ನಿ ಸುನಂದಾ ನಾಯಕ ಅವರಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು, ವಿವಿದ ಸಂಘಟನೆಯ ಮುಖಂಡರು, ರೈತ ಮುಖಂಡರು ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 