ಕಲಾ ವಿಭಾಗದಲ್ಲಿ ಸೃಷ್ಟಿ ಸೊಲೋನಿ ರಾಜ್ಯಕ್ಕೆ 3ನೇ ರ್ಯಾಂಕ್, ಮಾರುತಿ ನಾಯ್ಕ 7ನೇ ರ್ಯಾಂಕ್, ವಾಣಿಜ್ಯದಲ್ಲಿ ಪ್ರೀನಿಯಾ ಮೂಡಲಗಿ 9ನೇ ರ್ಯಾಂಕ್
In the arts category, Srushti Soloni secured 3rd rank for the state, Maruti Nayak secured 7th rank,
ಲಿಂಗರಾಜ ಪಿಯು ಕಾಲೇಜು ಅದ್ವಿತೀಯ ಸಾಧನೆ : ಮಹಾಂತೇಶ ಕವಟಗಿಮಠ ಅಭಿನಂದನೆ
ಬೆಳಗಾವಿ 10 : ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಲಿಂಗರಾಜ ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ ಸೃಷ್ಟಿ ಸೊಲೋನಿ 594 (99ಅ) ಅಂಕಗಳನ್ನು ಪಡೆದು ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿದ್ದಾಳೆ. ಮಾರುತಿ ನಾಯ್ಕ್ 590 (98.33ಅ) ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದಿದ್ದಾನೆ, ವಾಣಿಜ್ಯ ವಿಭಾಗದಲ್ಲಿ ಪ್ರೀನಿಯಾ ಮೂಡಲಗಿ 592 (98.67ಅ) ಅಂಕಗಳೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದಾಳೆ. 142 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 136 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಪಾಸ್ ಶೇಕಡಾವಾರು 95.77ಅ ಆಗಿದೆ. ಇವರಲ್ಲಿ 37 ಮಂದಿ ಡಿಸ್ಟಿಂಕ್ಷನ್, 77 ಮಂದಿ ಫಸ್ಟ್ ಕ್ಲಾಸ್ ಹಾಗೂ 19 ಮಂದಿ ಸೆಕೆಂಡ್ ಕ್ಲಾಸ್ನಲ್ಲಿ ಉತ್ತೀರ್ಣರಾಗಿದ್ದಾರೆ. ಅನನ್ಯ ಕೊಡ್ಲಿ 580 (96.66ಅ) ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ಕಾಲೇಜಿಗೆ 3ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 219 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 212 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇಕಡಾವಾರು 96.80ಅ ಫಲಿತಾಂಶ ಬಂದಿದೆ.
ಇವರಲ್ಲಿ 56 ಮಂದಿ ಡಿಸ್ಟಿಂಕ್ಷನ್, 119 ಮಂದಿ ಫಸ್ಟ್ ಕ್ಲಾಸ್, 29 ಮಂದಿ ಸೆಕೆಂಡ್ ಕ್ಲಾಸ್ ಹಾಗೂ 08 ಮಂದಿ ಪಾಸ್ ಕ್ಲಾಸ್ನಲ್ಲಿ ಉತ್ತೀರ್ಣರಾಗಿದ್ದಾರೆ. ಹರಿಲಿನ್ ಶಾ 589 (98.17ಅ) ಅಂಕಗಳೊಂದಿಗೆ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದು, ಅನುಷ್ಕಾ ಆರ್ ಕೌಂದಲ್ಕರ್ 588 (98ಅ) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಕನ್ನಡದಲ್ಲಿ 02, ಹಿಂದಿಯಲ್ಲಿ 02, ಇತಿಹಾಸದಲ್ಲಿ 01, ಭೂಗೋಳಶಾಸ್ತ್ರದಲ್ಲಿ 07, ಅರ್ಥಶಾಸ್ತ್ರದಲ್ಲಿ 01, ರಾಜಕೀಯ ವಿಜ್ಞಾನದಲ್ಲಿ 01, ಮನೋವಿಜ್ಞಾನದಲ್ಲಿ 01, ಲೆಕ್ಕಶಾಸ್ತ್ರದಲ್ಲಿ 05, ವ್ಯವಹಾರ ಅಧ್ಯಯನದಲ್ಲಿ 08 ಮತ್ತು ಅಂಕಿಅಂಶಶಾಸ್ತ್ರದಲ್ಲಿ 06 ವಿದ್ಯಾರ್ಥಿಗಳು 100/100 ಅಂಕಗಳನ್ನು ಗಳಿಸಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ಕೃಷಿ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳ ಸಾಧನೆ ಅದ್ವಿತೀಯವಾಗಿದ್ದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು. ಕೆಎಲ್‌ಇ ನಿರ್ದೇಶಕರಾದ ಜಯಾನಂದ ಮುನವಳ್ಳಿ ಹಾಗೂ ಎಂ. ಸಿ. ಕೊಳ್ಳಿ, ಆಜೀವ ಸದಸ್ಯರಾದ ಡಾ.ಸತೀಶ ಪಾಟೀಲ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 