ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಪ್ರವಾಹ ಪರಿಹಾರ ವಿಚಾರ ಪ್ರಸ್ತಾಪಿಸುತ್ತೇನೆ: ಸದಾನಂದಗೌಡ

 ಬೆಂಗಳೂರು, ಅ 2:  ರಾಜ್ಯದ ಪ್ರವಾಹ ಪರಿಸ್ಥಿತಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸಕರ್ಾರ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎನ್ನುವ ಆಕ್ರೋಶದ ನಡುವೆಯೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಪರಿಹಾರ ವಿಚಾರವನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.  ಯುಎನ್ಐ ಕನ್ನಡ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸದಾನಂದಗೌಡ, ಗುರುವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟದ ಮುಂದೆ ಕನರ್ಾಟಕ ನೆರೆ ಪರಿಹಾರ ವಿಚಾರ ಎತ್ತುವುದಾಗಿ ಹೇಳಿದರು. 

         ನೆರೆ ಅಧ್ಯಯನ ತಂಡ ಇಂದು ಅಥವಾ ನಾಳೆ ಕೇಂದ್ರಕ್ಕೆ ಪ್ರವಾಹ ಪರಿಸ್ಥಿತಿಯಿಂದಾದ ಹಾನಿ  ಕುರಿತು ವರದಿ ಸಲ್ಲಿಸಲಿದೆ. ಆದಷ್ಟು ಶೀಘ್ರದಲ್ಲಿ ಕೇಂದ್ರ ಸಕರ್ಾರ ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡಲಿದ್ದು, ಕನರ್ಾಟಕಕ್ಕೆ ಹೆಚ್ಚಿನ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂತ್ರಸ್ತರ ರಕ್ಷಣೆಗೆ ಕೈಗೊಳ್ಳಬೇಕಾದ ತುತರ್ುಕ್ರಮಗಳನ್ನು ಈಗಾಗಲೇ ಸಕರ್ಾರ ತೆಗೆದುಕೊಂಡಿದೆ. ನೆರೆಸಂತ್ರಸ್ತರಿಗೆ ನೆರವು ಒದಗಿಸಲು ಜಿಲ್ಲಾಧಿಕಾರಿಗಳ ಹಾಗೂ ಪಿಡಿ ಖಾತೆಗಳಲ್ಲಿ ಇದಕ್ಕಾಗಿ ಹಣ ಮೀಸಲಿಡಲಾಗಿದೆ.

        ಡಿಸೆಂಬರ್ ನಲ್ಲಿ ಬಿಡುಗಡೆಗೊಳಿಸಬೇಕಾಗಿದ್ದ ಎಸ್ ಡಿಆರ್ ಎಫ್ಅನುದಾನವನ್ನು ಕೇಂದ್ರ ಈಗಾಗಲೇ  ಮುಂಚಿತವಾಗಿ ರಾಜ್ಯಕ್ಕೆ ನೀಡಿದೆ ಎಂದು ಕೇಂದ್ರದ ನಡೆಯನ್ನು ಸಮಥರ್ಿಸಿಕೊಂಡರು.  ಹಣ ದುರುಪಯೋಗ ಆಗಬಾರದೆಂಬ ಉದ್ದೇಶ ಕೇಂದ್ರದ್ದಾಗಿದೆ. ಇನ್ನೂ ಮಳೆ ನಿಂತಿಲ್ಲ. ಮಳೆ ನಿಂತ ಬಳಿಕ ನೆರೆ ಹಾನಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ತರಾತುರಿಯಲ್ಲಿ ಯಾವ ನಿಧರ್ಾರವನ್ನೂ ಕೈಗೊಳ್ಳಲು ಸಾಧ್ಯವಿಲ್ಲ.  ನಾಳಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ಚಚರ್ೆ ಆಗಲಿದೆ ಎಂದರು. ಕೇಂದ್ರದ ನೆರೆ ಅಧ್ಯಯನದ ತಂಡದ ವರದಿಯನ್ವಯ ಆದಷ್ಟು ಬೇಗ ಕನರ್ಾಟಕಕ್ಕೆ ನೆರವು ಸಿಗಲಿದೆ.  ಕೇಂದ್ರ ಸಕರ್ಾರ  ಎಲ್ಲವನ್ನೂ ನಿಯಮಾನುಸಾರ ಮಾಡಬೇಕಿರುವ ಕಾರಣದಿಂದ ವಿಳಂಬವಾಗಿದೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗುರಿ ಮಾಡಿಕೊಂಡಿರುವ ಕಾರಣದಿಂದಲೇ ಕನರ್ಾಟಕಕ್ಕೆ ಮೋದಿ ನೆರೆ ಪರಿಹಾರ ನೀಡಿಲ್ಲ ಎನ್ನುವುದು ಸರಿಯಲ್ಲ. ನೆರೆ ವಿಚಾರವನ್ನು ಮಾಧ್ಯಮಗಳು ರಾಜಕೀಯವಾಗಿ ನೋಡುವುದು ಸರಿಯಲ್ಲ ಎಂದು ಸದಾನಂದಗೌಡ ಒತ್ತಿ ಹೇಳಿದರು.