ಬಲ್ಲಿಯಾ, ಫೆ13 : ಉತ್ತರ ಪ್ರದೇಶದ ಈ ಜಿಲ್ಲೆಯ ಖೇಜೂರಿ ಪ್ರದೇಶದಲ್ಲಿ ಗುರುವಾರ ಕಾರು ಕೊಳಕ್ಕೆ ಬಿದ್ದು ಮೂವರು ಯುವಕರು ಮೃತಪಟ್ಟಿದ್ದಾರೆ.
ಅವರು ಪ್ರಯಾಣಿಸುತ್ತಿದ್ದ ಕಾರು ಕೊಳಕ್ಕೆ ಬಿದ್ದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ನಾಥ್ ತಿಳಿಸಿದ್ದಾರೆ.
ಕಾರು ಮೊದಲು ಮರಕ್ಕೆ ಬಡಿದು ನಂತರ ಬಲ್ಲಿಯಾ-ಸೋನೌಲಿ ರಸ್ತೆಯಲ್ಲಿರುವ ಪಾಟ್‌ಪುರ ಗ್ರಾಮದ ಬಳಿಯ ಕೊಳಕ್ಕೆ ಉರುಳಿ ಬಿದ್ದಿದೆ,
ದೊಡ್ಡ ಶಬ್ದ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರನ್ನು ಕೊಳದಿಂದ ಹೊರತೆಗೆದಿದ್ದಾರೆ.
ಕಾರಿನ ಬಾಗಿಲು ತೆರೆದ ನಂತರ, ಮೂವರು ಯುವಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.