ಪ್ರಚೋದನಾಕಾರಿ ಸ್ಟೇಟಸ್‌: ವ್ಯಕ್ತಿಯ ವಿರುದ್ಧ ಎಫ್‌ಐಆರ್

 ಮಂಗಳೂರು, ಏ.9, ಮಂದಿರ, ಗುರುದ್ವಾರಗಳಿಂದ ದಾನ ಮಾಡುತ್ತಿದ್ದರೆ ಮಸೀದಿಗಳಿಂದ ಕೊರೋನಾ ಹಬ್ಬಿಸುವ ಕೆಲಸ  ಆಗುತ್ತಿದೆ ಎಂದು ತನ್ನ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದ ವ್ಯಕ್ತಿಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಸಜಿಪ ಮೂಡ ಗ್ರಾಮದ ಕಾರಾಜೆ ಎಸ್.ಡಿ.ಪಿ.ಐ. ಸದಸ್ಯ ಮುಹಮ್ಮದ್ ನಿಸಾರ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಬೋಳಿಯಾರ್ ಗ್ರಾಮದ ರಂತಡ್ಕ ವಡಕಿನಕಟ್ಟೆ ನಿವಾಸಿ ರಂಜನ್ ಪೂಜಾರಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.