ತೀವೃಷ್ಟಿ: ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳಿಂದ ಪ್ರಗತಿ ಪರಿಶೀಲನೆ ಆಗಸ್ಟ್ 7ರೊಳಗೆ ಪರಿಹಾರ ವಿತರಣೆಗೆ ಸೂಚನೆ


ಬೆಳಗಾವಿ:  ಅತೀವೃಷ್ಟಿಯಿಂದ ಆಗಿರುವ ಬೆಳೆಹಾನಿ ಹಾಗೂ ಮನೆ ಕುಸಿತ ಪ್ರಕರಣಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಆಗಸ್ಟ್ 7ರೊಳಗೆ ಪರಿಹಾರವನ್ನು ವಿತರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ರಾಕೇಶ್ಸಿಂಗ್ ಅವರು ಸೂಚನೆ ನೀಡಿದ್ದಾರೆ.

ಅತೀವೃಷ್ಟಿ ಹಾಗೂ ಪ್ರವಾಹಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ (ಆ.1) ಪ್ರಗತಿ ಪರಿಶೀಲನೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಪರಿಹಾರ ವಿತರಣೆ ವಿಳಂಬವಾಗಬಾರದು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಒಟ್ಟಾರೆ 26 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 21 ಪ್ರಕರಣಗಳು ದೃಢಪಟ್ಟಿದ್ದು, 3 ಪ್ರಕರಣಗಳನ್ನು ಪರಿಶೀಲಿಸಿ ತಿರಸ್ಕರಿಸಲಾಗಿದ್ದು, ಒಂದು ಪ್ರಕರಣದಲ್ಲಿ ಎಫ್ಎಸ್ಎಲ್ ವರದಿ ಬಂದಿರುವುದಿಲ್ಲ. ಇನ್ನೊಂದು ಪ್ರಕರಣ ಇತ್ತೀಚಿನದಾಗಿದೆ, ಪರಿಶೀಲನೆ ಹಂತದಲ್ಲಿದೆ ಎಂದು ಕೃಷಿ ಇಲಾಖೆಯ ಉಪ ನಿದರ್ೇಶಕ ಎಚ್.ಡಿ. ಕೋಳೇಕರ ಮಾಹಿತಿ ನೀಡಿದರು.

ಖಜಾನೆ-2 ವ್ಯವಸ್ಥೆ ಹಿನ್ನೆಲೆಯಲ್ಲಿ ರೈತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿವರಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ರಾಕೇಶ್ ಸಿಂಗ್ ಅವರು, ಈ ಬಗ್ಗೆ ರಾಜ್ಯಮಟ್ಟದಲ್ಲಿ ಚಚರ್ಿಸಿ ಸೂಕ್ತ ಮಾರ್ಗ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಟ್ಯಾಂಕರ್ ನೀರು-ಶಾಶ್ವತ ಪರಿಹಾರಕ್ಕೆ ಸೂಚನೆ:

ಬೇಸಿಗೆ ಕಾಲದಲ್ಲಿ ಮೂನರ್ಾಲ್ಕು ವರ್ಷಗಳಿಂದ ನಿರಂತರವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿರುವ ಗ್ರಾಮಗಳನ್ನು ಗುರುತಿಸಿ ಅವುಗಳಿಗೆ ಶಾಶ್ವತ ನೀರು ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸುವಂತೆ ಜಿಲ್ಲಾ ಪಂಚಾಯ್ತಿ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ರಾಕೇಶ್ ಸಿಂಗ್ ಸೂಚನೆ ನೀಡಿದರು.

ಕೊಳವೆಬಾವಿ ಬದಲಾಗಿ ಸ್ಥಳೀಯ ಜಲಮೂಲಗಳಿಂದ ಪೈಪಲೈನ್ ಅಳವಡಿಸಿ ಶಾಶ್ವತವಾಗಿ ನೀರು ಒದಗಿಸಲು ಪ್ರಯತ್ನಿಸುವಂತೆ ತಿಳಿಸಿದರು.

ಅಂಗನವಾಡಿ ದುರಸ್ತಿಗೊಳಿಸಿ:

ಪ್ರಕೃತಿ ವಿಕೋಪ ಪರಿಹಾರ ನಿಧಿ ಅನುದಾನದಲ್ಲಿ ಅಂಗನವಾಡಿ ಕಟ್ಟಡಗಳನ್ನು ದುರಸ್ತಿಗೊಳಿಸಲು ಹಣ ನೀಡುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಪ್ರಾಥಮಿಕ ಶಾಲಾ ಆವರಣದಲ್ಲಿ ಜಾಗೆ ಲಭ್ಯವಿದ್ದರೆ ತಕ್ಷಣ ನೀಡಬೇಕು; ಒಂದು ವೇಳೆ ಹೆಚ್ಚುವರಿ ಕೋಣೆಗಳು ಲಭ್ಯವಿದ್ದರೆ ಒದಗಿಸುವಂತೆ ಸಲಹೆ ನೀಡಿದರು.

ಇತ್ತೀಚಿನ ಮಳೆಯಿಂದ ಬೆಳಗಾವಿ ಹಾಗೂ ಚಿಕ್ಕೋಡಿ ಬಸ್ ನಿಲ್ದಾಣಗಳಲ್ಲಿ ತೆಗ್ಗು-ಗುಂಡಿಗಳು ನಿಮರ್ಾಣಗೊಂಡಿದ್ದು, ದುರಸ್ತಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮನವಿ ಮಾಡಿಕೊಂಡರು.

ಈ ಬಗ್ಗೆ ಪರಿಶೀಲಿಸಿ ನಿಯಮಾವಳಿಗಳಲ್ಲಿ ಅವಕಾಶವಿದ್ದರೆ ಅನುದಾನ ಬಿಡುಗಡೆ ಮಾಡುವಂತೆ ರಾಕೇಶ್ ಸಿಂಗ್ ತಿಳಿಸಿದರು.

ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ರಸ್ತೆ ದುರಸ್ತಿ ಮತ್ತು ಸೌಂದಯರ್ೀಕರಣಕ್ಕೆ ಕಳೆದ ಬಾರಿಯಂತೆ ವಿಶೇಷ ಅನುದಾನ ಒದಗಿಸಬೇಕು ಎಂದು ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ಮನವಿ ಮಾಡಿಕೊಂಡರು.

ಹೊಸ ಆಸ್ಪತ್ರೆ ಅಗತ್ಯ:

ಬೆಳಗಾವಿ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ಕಟ್ಟಡ ನೂರು ವರ್ಷ ಹಳೆಯದಾಗಿದ್ದು, ಪದೇ ಪದೆ ದುರಸ್ತಿ ಮಾಡಲಾಗುತ್ತಿದೆ. ಹೆರಿಗೆ, ತುತರ್ು ಚಿಕಿತ್ಸಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳು ಬೇರೆ ಬೇರೆ ಕಡೆ ಇರುವುದರಿಂದ ತೀವ್ರ ಅನಾನುಕೂಲ ಆಗುತ್ತಿದೆ. ಆದ್ದರಿಂದ ಎಲ್ಲ ಸೌಲಭ್ಯವೂ ಒಂದೇ ಸೂರಿನಡಿ ಇರುವಂತಹ 500 ಹಾಸಿಗೆಗಳ ನೂತನ ಕಟ್ಟಡ ನಿಮರ್ಾಣದ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಪ್ಪಾಸಾಹೇಬ್ ನರಟ್ಟಿ ಸಭೆಯಲ್ಲಿ ತಿಳಿಸಿದರು.

250 ಹಾಸಿಗೆಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿಮರ್ಾಣ ಮಾಡಲಾಗುತ್ತಿದ್ದು, ಆದಾಗ್ಯೂ ಹೊಸ ಕಟ್ಟಡದ ಅಗತ್ಯವಿದೆ ಎಂದು ಹೇಳಿದರು.

ಈ ಬಗ್ಗೆ ಸಕರ್ಾರದ ಮಟ್ಟದಲ್ಲಿ ಚಚರ್ೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ತಿಳಿಸಿದರು.

ಅಣೆಕಟ್ಟು ನಿರ್ವಹಣೆಗೆೆ ಸಿಬ್ಬಂದಿ ಕೊರತೆ:

ಸಿಬ್ಬಂದಿಯ ತೀವ್ರ ಕೊರತೆಯಿಂದಾಗಿ ಜಿಲ್ಲೆಯ ಹಿಡಕಲ್ ಹಾಗೂ ಮಲಪ್ರಭಾ ಅಣೆಕಟ್ಟುಗಳ ದೈನಂದಿನ ನಿರ್ವಹಣೆ ಹಾಗೂ ಭದ್ರತೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳ ಗಮನಕ್ಕೆ ತಂದರು.

ಅನೇಕ ಸಿಬ್ಬಂದಿ ನಿವೃತ್ತಿಯಾಗಿದ್ದು, ನಿಯೋಜನೆ ಮೇರೆಗೆ ಇದ್ದ ಸಿಬ್ಬಂದಿ ಮಾತೃ ಇಲಾಖೆ/ಕಚೇರಿಗೆ ತೆರಳಿದ್ದರಿಂದ ಸಮಸ್ಯೆಯಾಗಿದೆ ಎಂದು ವಿವರಿಸಿದರು.

ಅದೇ ರೀತಿ ಅಣೆಕಟ್ಟುಗಳ ಭದ್ರತೆಗೆ ನೀರಾವರಿ ಇಲಾಖೆಯಿಂದ ಹಣ ಪಾವತಿಸುತ್ತಿದ್ದರೂ ಪೊಲೀಸ್ ಇಲಾಖೆ ವತಿಯಿಂದ ಸಿಬ್ಬಂದಿ ನಿಯೋಜಿಸುತ್ತಿಲ್ಲ ಎಂದು ಹೇಳಿದರು.

ಅಣೆಕಟ್ಟು ನಿರ್ವಹಣೆ ಹಾಗೂ ಭದ್ರತೆಗೆ ಸಿಬ್ಬಂದಿ ಒದಗಿಸುವ ಕುರಿತು ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ ರಾಕೇಶ್ ಸಿಂಗ್ ಅವರು, ಜಿಲ್ಲೆಯಲ್ಲಿ ಹೊಸದಾಗಿ ರಚನೆಗೊಂಡಿರುವ ಮೂರು ತಾಲ್ಲೂಕುಗಳಲ್ಲಿ ಕಟ್ಟಡ ನಿಮರ್ಾಣ ಹಾಗೂ ಅಗತ್ಯ ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಳೆ-ಬೆಳೆ, ಬಿತ್ತನೆ, ರಸಗೊಬ್ಬರ ಲಭ್ಯತೆ, ಕ್ಷೀರಭಾಗ್ಯ, ವಿದ್ಯಾಥರ್ಿಗಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳ ವಿತರಣೆ, ಆಸ್ಪತ್ರೆಗಳಲ್ಲಿ ಔಷಧಿ ಲಭ್ಯತೆ ಸೇರಿದಂತೆ ಅನೇಕ ಇಲಾಖೆಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಅತೀವೃಷ್ಟಿ, ಬೆಳೆಹಾನಿ ಅಥವಾ ಇತರೆ ಕಾರಣಗಳಿಂದ ತೊಂದರೆಗೊಳಗಾಗುವ ಕುಟುಂಬಗಳಿಗೆ ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ಬಡಜನರ ಪರವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ. ಬೂದೆಪ್ಪ ಎಚ್.ಬಿ., ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್, ಉಪ ವಿಭಾಗಾಧಿಕಾರಿಗಳು, ಎಲ್ಲ ತಹಶೀಲ್ದಾರರು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.