ರಾಣಿ ಚನ್ನಮ್ಮನ ಆದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ: ಸಚಿವ ಸತೀಶ ಜಾರಕಿಹೊಳಿ

 ರಾಣಿ ಚನ್ನಮ್ಮನ ಆದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ: ಸಚಿವ ಸತೀಶ ಜಾರಕಿಹೊಳಿ  Imitate the ideals of Rani Channamma in your life: Minister Satish Jarkiholi

ಲೋಕದರ್ಶನ ವರದಿ 


ವಾ.ವಿ.ಸಂ.79  

201ನೇ ವರ್ಷದ ಕಿತ್ತೂರು ಉತ್ಸವ ಸಂಭ್ರಮ (ಕಾಕತಿ)  

---------------------------------------------------------  

ರಾಣಿ ಚನ್ನಮ್ಮನ ಆದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ: ಸಚಿವ ಸತೀಶ ಜಾರಕಿಹೊಳಿ  


ಬೆಳಗಾವಿ, ಅ.23: ಕಿತ್ತೂರು ಉತ್ಸವ ಮಹಿಳೆಯರ ಉತ್ಸವವಾಗಿದೆ. ರಾಣಿ ಚನ್ನಮ್ಮಳ ನಾಡು, ನುಡಿಗಾಗಿ ಮಾಡಿದ ಹೋರಾಟ ತ್ಯಾಗಗಳ ಬಗ್ಗೆ ತಿಳಿದುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ನುಡಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಅ.23) ಜಿಲ್ಲೆಯ ರಾಣಿ ಚನ್ನಮ್ಮಳ ತವರೂರಾದ ಕಾಕತಿ ಗ್ರಾಮದಲ್ಲಿ 201ನೇ ವರ್ಷದ ಕಿತ್ತೂರು ಉತ್ಸವ ಸಂಭ್ರಮದ ಅಂಗವಾಗಿ ಕಿತ್ತೂರು ರಾಣಿ ಚನ್ನಮ್ಮಳ ಮೂರ್ತಿಗೆ ಮಾಲಾರೆ​‍್ಣ ಮಾಡಿ ಅವರು ಮಾತನಾಡಿದರು.  

ಕಿತ್ತೂರು ಉತ್ಸವವು ಪ್ರತಿ ವರ್ಷ ಕಾಕತಿಯಿಂದ ಪ್ರಾರಂಭವಾಗಿ ಕಿತ್ತೂರಿನಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಮಾಡುತ್ತಿದ್ದೇವ, ಕೇವಲ ಉತ್ಸವ ಅಷ್ಟೇ ಅಲ್ಲದೆ ಉತ್ಸವದ ಜೊತೆಗೆ ಅಭಿವೃದ್ಧಿ ಕಾರ್ಯಗಳು ಸಹಿತ ನಡೆಯುತ್ತಿವೆ ಎಂದರು.  

ಕಳೆದ ಕೆಲ ವರ್ಷಗಳಿಂದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ, ಕೋಟೆ ಹಾಗೂ ದ್ವಾರ ಬಾಗಿಲು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆವೆ. ಇನ್ನು ಹಲಾವಾರು ಬೇಡಿಕೆಗಳು ಇವೆ ಅವುಗಳನ್ನೆಲ್ಲಾ ಈಡೆರುಸುತ್ತೇವೆ ಎಂದು ಭರವಸೆ ನೀಡಿದರು.  

ಕಿತ್ತೂರು ಚನ್ನಮ್ಮಾರವರ ಹೆಸರು ಜಿಲ್ಲೆಯಿಂದ ದಿಲ್ಲಿಯವರೆಗೆ ಮುಟ್ಟಿಸುವ ಕೆಲಸವನ್ನ ಕಿತ್ತೂರು ಉತ್ಸವ ಮಾಡಿದೆ. ಚೆನ್ನಮ್ಮಾಜಿ ನಮಗೆಲ್ಲಾ ಮಾದರಿ ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎಂದರು.  

ಈ ಉತ್ಸವದಿಂದ ಜಿಲ್ಲೆಗೆ ಒಂದು ಒಳ್ಳೆಯ ಹೆಸರು ಬರುವ ಹಾಗೆ ನಾವೆಲ್ಲರು ಸೇರಿಕೊಂಡು ಕೆಲಸ ಮಾಡಬೇಕು, ಉತ್ಸವದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನ ಯಶಸ್ವಿ ಮಾಡಬೇಕು. ಪ್ರತಿ ವರ್ಷ ಕಿತ್ತೂರು ಉತ್ಸವ ಯಶಸ್ವಿಯಾಗಿ ಮುಂದು ವರಿಯಲಿ 201ನೇ ಉತ್ಸವದೊಂದಿಗೆ ಇತಿಹಾಸಗಳನ್ನು ತಿಳಿದುಕೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕೊಹೊಳಿ ಅವರು ತಿಳಿಸಿದರು.  

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆಯ್‌.ಎ.ಎಸ್‌. ಅಕಾಡೆಮಿ ಕನ್ನಡ ಉಪನ್ಯಾಸಕರಾದ ರಾಜೀವ್ ಪಟೇಲ್ ಅವರು ಮಾತನಾಡಿ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕು ಮುಂಚೆ ಇದೆ ನಮ್ಮ ನಾಡಿನಿಂದ ಭವ್ಯ ಭಾರತಕ್ಕೆ ಮಾರ್ಗದರ್ಶಿಯಾದಂತಹ ಕ್ರಾಂತಿಯ ಕಿಡಿ ಎಂದರೆ ಅದು ತಾಯಿ ಚೆನ್ನಮ್ಮಾಜಿ, ಕನ್ನಡ ನಾಡಿಯಲ್ಲಿ ಅನೇಕ ವಿಚಾರಗಳಿಗೆ ನೆನಪಾಗುತ್ತಾರೆ, ತ್ಯಾಗದ ಪ್ರತೀಕ, ಬಲಿದಾನದ ಪ್ರತೀಕವಾಗಿ, ದೇಶ ಪ್ರೇಮದ, ಆದರ್ಶಗಳ, ಸಾಹಸದ ಪ್ರತೀಕವಾಗಿ ಚೆನ್ನಮ್ಮಾಜಿ ನಮಗೆ ನೆನಪಾಗುತ್ತಾರೆ ಎಂದರು.  

ಹದಿನೆಂಟನೆ ಶತಮಾನದಲ್ಲಿ ಬ್ರಿಟಿಷರು ಬಹಳಷ್ಟು ವಿಚಾರಗಳನ್ನು ಇಟ್ಟುಕೊಂಡು ದಾಳಿಮಾಡಿದರು, ಆದರೆ ತನ್ನ ನೆಲಕ್ಕೆ ತನ್ನ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಸಿಡಿದೇಳಬೇಕು ಎಂಬುದನ್ನ ಒಬ್ಬ ಸ್ತ್ರೀ ಆಗಿ, ಒಬ್ಬ ದೇಶ ಪ್ರೇಮಿಯನ್ನಾಗಿ ಮಾಡಿ ಇಡಿ ನಾಡಿಗೆ ಒಂದು ಕ್ರಾಂತಿಯ ಸಂದೇಶವನ್ನು ಮೊಳಗಿಸಿದ್ದು ತಾಯಿ ಚೆನ್ನಮ್ಮಾಜಿ. ಬ್ರಿಟಿಷರು ಹಲವಾರು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದರು ಎದೆಗುಂದದೆ ಒಬ್ಬ ಮಹಿಳೆಯಾಗಿ ಧೈರ್ಯದಿಂದ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ವನಿತೆ ತಾಯಿ ಚೆನ್ನಮ್ಮಾಜಿ ಎಂದು ಒರ್ವ ಮಹಿಳೆಯಾಗಿದ್ದರು ತನ್ನ ಸ್ವಾಭಿಮಾನಕ್ಕೆ ದಕ್ಕೆಯಾದಾಗ ಸಿಡಿದೆದ್ದು ನಿಂತತಹ ಮಹಿಳೆ ರಾಣಿ ಚನ್ನಮ್ಮ, ಅವರ ಶಕ್ತಿ, ಅವರ ಶೌರ್ಯ, ಸಾಮ್ರಾಜ್ಯದ ದ್ವನಿ, ಶಕ್ತಿಯಾಗಿದನ್ನು ನಾವು ಇತಿಹಾಸದಲ್ಲಿ ನೋಡಬಹುದು.  

ತಾಯಿ ಚನ್ನಮ್ಮಾಜಿ ಇಡಿ ಮಹಿಳಾ ಕುಲಕ್ಕೆ ಮಾದರಿಯಾಗಿದ್ದಾರೆ. ದೇಶಭಕ್ತಿಗೆ ಒಂದು ಹೆಸರು ಚೆನ್ನಮ್ಮಾಜಿ ಎಂದು ಉಪನ್ಯಾಸಕ ರಾಜು ಪಟೇಲ ಅವರು ಹೇಳಿದರು.  

ಈ ಸಂದರ್ಭದಲ್ಲಿ ಶಾಸಕರಾದ ಆಸೀಫ (ರಾಜು) ಸೇಠ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ನಗರ ಪೊಲೀಸ ಆಯುಕ್ತ ಭೂಷನ ಬೋರಸೆ ಗುಲಾಬರಾವ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಕಾಕತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವರ್ಷಾ ಮುಚ್ಛಂಡಿಕರ, ಉಪಾಧ್ಯಕ್ಷರಾದ ರೇಣುಕಾ ಕೋಳಿ, ಸಿದ್ದು ಸುಣಗಾರ, ಯಲ್ಲಪ್ಪ ಕೋಳೆಕಾರ ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತಿತರಿದ್ದರು.  

***** 

 ವಾ.ವಿ.ಸಂ.80  

201ನೇ ವರ್ಷದ ಕಿತ್ತೂರು ಉತ್ಸವದ ಸಂಭ್ರಮ: ಕಿತ್ತೂರು ರಾಣಿ ಸಂಸ್ಥಾನದ ಕುರಿತು ರಾಜ್ಯ ಮಟ್ಟದ ಮಹಿಳಾ ವಿಚಾರ ಗೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು 


ಬೆಳಗಾವಿ, ಅ.23:  201ನೇ ವರ್ಷದ ಕಿತ್ತೂರು ಉತ್ಸವ ಸಂಭ್ರಮದ ನಿಮಿತ್ತವಾಗಿ ಶುಕ್ರವಾರ (ಅ.24) ಕೋಟೆ ಅವರಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮಾ ವೇದಿಕೆಯಲ್ಲಿ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಕಿತ್ತೂರು ರಾಣಿ ಸಂಸ್ಥಾನದ ಕುರಿತು ರಾಜ್ಯ ಮಟ್ಟದ ಮಹಿಳಾ ವಿಚಾರ ಗೋಷ್ಠಿ ನಡೆಯಲಿದೆ.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಚಿಕ್ಕೋಡಿ ಲೋಕಸಭಾ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಆಂಗ್ಲ ಭಾಷಾ ಲೇಖಕರು ಹಾಗೂ ವಿದ್ವಾಂಸರಾದ ಡಾ.ವಿಜಯಲಕ್ಷ್ಮೀ ತಿರ್ಲಾಪೂರ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ ಡಾ.ನಾಗರತ್ನಾ ಪರಾಂಡೆ ಅವರು ಆಶಯ ನುಡಿಯನ್ನು ನುಡಿಯಲಿದ್ದಾರೆ.  

ಕಿತ್ತೂರು ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ವಿಷಯ ಕುರಿತು ಸಾಹಿತಿಗಳಾದ ಡಾ.ನಿರ್ಮಲಾ ಬಟ್ಟಲ, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ರಾಣಿ ಚನ್ನಮ್ಮಳ ಆದರ್ಶಗಳು ವಿಷಯದ ಕುರಿತು ಡಾ. ಅರ್ಚನಾ ಅಥಣಿ, ಕಿತ್ತೂರು ಸಂಸ್ಥಾನದ ರಾಣಿಯರ ಸಮನ್ವಯತೆ ಸಂದೇಶ ವಿಷಯದ ಕುರಿತು ಜ್ಯೋತಿ ಬದಾಮಿ ಹಾಗೂ ಕಿತ್ತೂರು ಸಂಸ್ಥಾನದ ದತ್ತಕ ಪ್ರಕ್ರಿಯೆಯಲ್ಲಿ ರಾಣಿಯರ ಪಾತ್ರ ಎಂಬ ವಿಷಯದ ಕುರಿತು ನಿವೃತ್ತ ಪ್ರಾಚಾರ್ಯರಾದ ಡಾ.ಸರಸ್ವತಿ ಕಳಸದ ಅವರು ರಾಜ್ಯ ಮಟ್ಟದ ಮಹಿಳಾ ವಿಚಾರ ಗೋಷ್ಠಿ ಮಾಡಲಿದ್ದಾರೆ.  

ಅಕ್ಟೋಬರ್ 24ರ ಸಾಂಸ್ಕೃತಿಕ ಕಾರ್ಯಕ್ರಮಗಳು:  ಕೋಟೆ ಅವರಣದಲ್ಲಿನ ಕಿತ್ತೂರು ಚನ್ನಮ್ಮನ ವೇದಿಕೆಯಲ್ಲಿ  ಮಧ್ಯಾಹ್ನ 3 ಗಂಟೆಯಿಂದ 8.15 ರವರೆಗೆ  ಗಾನಗಾರುಡಿ ಬಸಲಿಂಗಯ್ಯ ಹಿರೇಮಠ ಪ್ರತಿಷ್ಠಾನ, ಬೈಲೂರ ತಂಡದಿಂದ ಲಾವಣಿ ಪದ,  ಜ್ಯೋತಿಲಿಂಗ ಹೊನಕಟ್ಟಿ ಮತ್ತು ತಂಡದವರಿಂದ ಜಾನಪದ ಸಂಗೀತ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ರವರಿಂದ ನೃತ್ಯ ರೂಪಕ, ಶಂಭಯ್ಯ ಹಿರೇಮಠ ರವರಿಂದ ಜನಪದ ಸಂಗೀತ, ವೆಂಕಟೇಶ ಆಲಕೋಡ ರವರಿಂದ ವಚನ ಸಂಗೀತ, ಪುಷ್ಪಲತಾ ಹಿರೇಮಠ ರವರಿಂದ ಸಂಗೀತ, ಕಲ್ಮೇಶ್ವರ ಜಾನಪದ ಕಲಾ ತಂಡದಿಂದ ಜೊಗತಿ ನೃತ್ಯ, ಉಮೇಶ ಪತ್ತಾರ ರವರಿಂದ ಸುಗಮ ಸಂಗೀತ, ಶೃತಿಪ್ರಿಯಾ ಅಕಾಡೆಮಿ ಆಫ್ ಡ್ಯಾನ್ಸ್‌ ರವರಿಂದ ನೃತ್ಯ ರೂಪಕ, ಹಡಪದ ಅಪ್ಪಣ್ಣ, ನಯನ, ಹಿತೇಶ, ಸೂರ್ಯಕಾಂತ ಕುಂದಾಪೂರ, ಸದಾನಂದ, ಭವ್ಯ, ದಾನಪ್ಪ ರವರಿಂದ ಹಾಸ್ಯ ಸಂಜೆ, ಬಸವರಾಜ ಬಂಟನೂರ ರವರಿಂದ ವಚನ ಸಂಗೀತ, ಮಂಜುನಾಥ ಹುಡೇದ, ಪ್ರವೀಣ, ಕೆ.ಆರ್‌.ಪೇಟೆ ಶಿವು ಮತ್ತು ಸುಜಾತಾ ರವರಿಂದ ರಸಮಂಜರಿ, ರೆಮಿಂದ ಖುರಾನಾ ಖ್ಯಾತ ಒಡಿಸಿ ಡ್ಯಾನ್ಸರ್, ರವಿ ಮಾಸ್ಟರ್ ಜೀ ಟಿ.ವಿ. ಕೊರಿಯೋಗ್ರಾಫರ್ ನೃತ್ಯ ವೈವಿದ್ಯ, ಆಲ್ ಓಕೆ ಲೈವ್ ಮ್ಯೂಸಿಕ ತಂಡ ( ಚಲನಚಿತ್ರ ತಾರೆಯರು ಝಯದಖಾನ ಮತ್ತು ಮಲೈಕಾ) ರವರಿಂದ ರಸಮಂಜರಿ ನಂತರ 8.15 ರಿಂದ ಸ.ರಿ.ಗ.ಮ.ಪ ತಂಡ ಬೆಂಗಳೂರು ರವರಿಂದ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  

ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿನ ಸರದಾರ ಗುರುಸಿದ್ದಪ್ಪ ವೇದಿಕೆಯಲ್ಲಿ ಗ್ಯಾನಪ್ಪ ಭಜಂತ್ರಿ ಕ್ಲಾರಿಯೋನೆಟ್, ಜಗದೀಶ ಮಹಾಂತೇಶ ಕರಡಿಗುದ್ದಿ ಸಾ/ಏಣಗಿ ರವರಿಂದ ಭಜನೆ,  ಈರಣ್ಣ ಶಿವಪುತ್ರ ಬಡಿಗೇರ ಸಾ/ಕಪ್ಪಲಗುದ್ದಿ ಸುಗಮ ಸಂಗೀತ, ವಸಂತ ಭಜಂತ್ರಿ ಚ. ಕಿತ್ತೂರು ರವರಿಂದ ವಾದ್ಯ ಸಂಗೀತ, ದ್ರಾವ್ಯಾ ಸಿ. ಕಮ್ಮಾರ ರವರಿಂದ ಭರತನಾಟ್ಯ, ಮಲ್ಲಿಕಾರ್ಜುನ ಭಜನೆ ಜಾನಪದ ಕಲಾ ಸಂಘ ಸಾ/ಕುರುಬಗಟ್ಟಿ ರವರಿಂದ ಭಜನೆ, ದುರ್ಗಪ್ಪಾ ಮರೆಪ್ಪಗೊಳಸಾ/ಖನಗಾಂವಿ ರವರಿಂದ ಡೊಳ್ಳಿನ ಪದ, ಇಶಾ ಅ ಪಠಾಣ ರವರಿಂದ ಭರತನಾಟ್ಯ, ಶ್ಯಾವಳಿಗೇಪ್ಪ, ವಿಜಯನಗರ ರವರಿಂದ ಸುಗಮ ಸಂಗೀತ, ಆಶಾದೀಪ ಸಮುದಾಯ ಕಲಾಕೇಂದ್ರ, ಚಿಕ್ಕೋಡಿ ರವರಿಂದ ಜಾನಪದ ಗಾಯನ,  ಕರೆಪ್ಪ ಗದಿಗೆಪ್ಪ ಬನ್ನೂರ ಸಾ/ಸಿಂಗಾರಗೊಪ್ಪ ರವರಿಂದ ಭಜನೆ, ನಟನಾ ನಾಟ್ಯ ಸೇವಾ ಸಂಸ್ಥೆ ಕಾದರವಳ್ಳಿ ರವರಿಂದ ನೃತ್ಯ, ಸುರೇಶ ನಾಗಪ್ಪಾ ಮೋಕಾಶಿ ಹುಲಿಕಟ್ಟಿ ರವರಿಂದ ಗಾಯನ, ವಾಯುಪುತ್ರ ಮೆಲೋಡಿಸ ಬೈಲಹೊಂಗಲ ರವರಿಂದ ಸಂಗೀತ, ಮಧುರಾ ಸಂಪಗಾವಿ ಮತ್ತು ತಂಡದಿಂದ ನೃತ್ಯ ರೂಪಕ, ಮಾಂತೇಶ ಶಿವಪ್ಪಾ ಮುದಕಗೌಡರ ರವರಿಂದ ಗಾಯನ, ವಾಣಿಶ್ರೀ ರವರಿಂದ ರೂಪಕ, ಗೋಪಾಲ ಕಲ್ಲಪ್ಪಾ ಚಪಣಿ ಸಾ/ಯಮಕನಮರಡಿ ರವರಿಂದ ಭಜನೆ, ಈಶ್ವರ ಗಡಿಬಿಡಿ ಸಾ/ಚ ಕಿತ್ತೂರು ರವರಿಂದ ವಚನ ಗಾಯನ ವಿರ​‍್ಪ ಅನಿಗೋಳ ರವರಿಂದ ತತ್ವಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 

ಕಿತ್ತೂರು ರಾಣಿ ಚನ್ನಮ್ಮ ಸಭಾಭವನ. ಚನ್ನಮ್ಮ ವೃತ್ತದಲ್ಲಿನ ಅಮಟೂರು ಬಾಳಪ್ಪ ವೇದಿಕೆಯಲ್ಲಿ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 9 ರವರೆಗೆ ಬಸವರಾಜ ಭಜಂತ್ರಿ, ಬಾಗಲಕೋಟೆ ರವರಿಂದ ಶಹನಾಯಿ, ಬೀರಲಿಂಗೇಶ್ವ ಡೊಳ್ಳಿನ ಕಲಾ ಸಂಘದಿಂದ ಭಜನೆ, ಗ್ರಾಮ ದೇವತೆ ಭಜನಾ ಮಂಡಳಿ ತಿಗಡೊಳ್ಳಿ ರವರಿಂದ ಭಜನೆ, ಬಸವೇಶ್ವರ ಭಜನಾ ಮಂಡಳಿ ನಿಚ್ಚನಿಕೆ ರವರಿಂದ ಭಜನೆ, ಮಲ್ಲಿಕಾರ್ಜುನ ನೇಗಿನಹಾಳ ರವರಿಂದ ಸುಗಮ ಸಂಗೀತ, ದಯಾನಂದ ಚಿಕ್ಕಮಠ ಬೈಲಹೊಂಗಲ ರವರಿಂದ ಏಕ ಪಾತ್ರಾಭಿನಯ, ಇಚಿತಾ ಮಡಕೇರಿ ರವರಿಂದ ಭರತನಾಟ್ಯ, ಸಂಜು ಮರಗನ್ನವರ ಕಲ್ಲೋಳಿ ರವರಿಂದ ತತ್ತ್ವಪದ, ಯಲ್ಲವ್ವ ಕುಳ್ಳೂರು ರವರಿಂದ ಗೀ ಗೀ ಪದ, ಸುರೇಶ ಶಿವಾನಂದ ಹರಕುಣಿ ಸಾ/ಎತ್ತಿನಕೇರಿ ರವರಿಂದ ನೃತ್ಯ ರೂಪಕ, ಸೋಮನಗೌಡ ಬ ಗೌಡರ ಸಾ/ನಾಗನೂರ ರವರಿಂದ ಭಜನೆ, ಕವನ ಮಲ್ಲಿಕಾರ್ಜುನ ಕಳಸಣ್ಣವರ ಸಾ/ಕದ್ರೋಳ್ಳಿ ರವರಿಂದ ಭರತನಾಟ್ಯ, ಪಾಂಡುರಂಗ ಭಜನಾ ಮಂಡಳಿ ಸಾ/ಬೈಲೂರು ರವರಿಂದ ಭಜನೆ, ಈರ​‍್ಪ ಗುರಸಿದ್ದಪ್ಪ ಬಬ್ಲಿ ಸಾ/ಬಸಪೂರ ರವರಿಂದ ಭಜನೆ, ಪ್ರಿಯಾಂಕಾ ಸಂ. ತಿಲಗಾರ ರವರಿಂದ ಭಕ್ತಿಗೀತೆ, ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ರವರಿಂದ ಜಾನಪದ ಗೀತೆ, ಶಿವರಾಜ ನಾಯಕ ರವರಿಂದ ಹರಿಕಥೆ, ಅರ್ಜುನ ಫಕ್ಕೀರ​‍್ಪ ಅಂಬಡಗಟ್ಟಿ ರವರಿಂದ ಸುಗಮ ಸಂಗೀತ, ಸಂಗೀತ ಹಾಗೂ ಕಲಾ ತಂಡದಿಂದ ವಚನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  

ಕಿತ್ತೂರು ಉತ್ಸವಕ್ಕೆ ಚಾಲನೆ- ಅದ್ಧೂರಿ ಮೆರವಣಿಗೆ: ಮನಸೆಳೆದ ಆಕರ್ಷಕ ಜಾನಪದ ಕಲಾವಾಹಿನಿಗಳು  


ಬೆಳಗಾವಿ, ಅ.23: ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ವಿಜಯ ಪತಾಕೆ ಹಾರಿಸಿದ ಸವಿನೆನಪಿನಲ್ಲಿ ಆಚರಿಸಲಾಗುತ್ತಿರುವ ಚನ್ನಮ್ಮನ ಕಿತ್ತೂರು ಉತ್ಸವವು ತುಂತುರು ಮಳೆಯ ಮಧ್ಯೆಯೇ ಸಡಗರ-ಸಂಭ್ರಮದಿಂದ ಆರಂಭಗೊಂಡಿತು.  

ಚನ್ನಮ್ಮನ ವಿಜಯದ ದ್ಯೋತಕವಾಗಿ ರಾಜ್ಯದಾದ್ಯಂತ ಸಂಚರಿಸಿದ ವಿಜಯ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡು ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಪುತ್ಥಳಿಗಳಿಗೆ ಗಣ್ಯರು ಮಾಲಾರೆ​‍್ಣ ಮಾಡಿದರು.  

ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಬೆಳಗಾವಿ ಉತ್ತರ ಶಾಸಕರಾದ ಆಸಿಫ್(ರಾಜು) ಸೇಠ್, ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್  ಮತ್ತಿತರರು ಉಪಸ್ಥಿತರಿದ್ದರು.  

ಇದಕ್ಕೂ ಮುಂಚೆ ಪ್ರತಿವರ್ಷದಂತೆ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ ಮಾಡಿದರು.  

ಆಕರ್ಷಕ ಜಾನಪದ ಕಲಾವಾಹಿನಿ:  

ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅತ್ಯಾಕರ್ಷಕ ಜಾನಪದ ಕಲಾವಾಹಿನಿಗೆ ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು  ಚನ್ನಮ್ಮನ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಚಾಲನೆ ನೀಡಿದರು.  

ಅಲ್ಲಿಂದ ಆರಂಭಗೊಂಡ ಜಾನಪದ ಕಲಾವಾಹಿನಿಯು ನಾಡಿನ ಜಾನಪದ ಕಲಾವೈಭವವನ್ನು ಅನಾವರಣಗೊಳಿಸಿತು. ಡೊಳ್ಳುಕುಣಿತ, ಪುರವಂತಿಕೆ, ಜಗ್ಗಲಗಿ, ಕರಡಿ ಮಜಲು, ಸಂಬಳ ವಾದನ, ಹಲಗೆ ವಾದನ, ಹೆಜ್ಜೆ ಮೇಳ, ತಾಸೇವಾದನ, ಗೊಂಬೆ ಕುಣಿತ, ಮೈಸೂರು ನಗಾರಿ, ಮಹಿಳಾ ನಗಾರಿ, ನಂದಿ ಧ್ವಜ, ಕಂಸಾಳೆ, ಚಂಡೆ ವಾದನ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಕ ಮೆರವಣಿಗೆಗೆ ಮೆರಗು ನೀಡಿದವು.   

ಮಳೆಯ ನಡುವೆಯೂ ಆಕರ್ಷಕ ಜಾನಪದ ಕಲಾವಾಹಿನಿಗಳೊಂದಿಗೆ ಸಾಗಿದ ವಿವಿಧ ಇಲಾಖೆಗಳಿಂದ ನೀಡಲಾಗುವ ಸರಕಾರದ ಯೋಜನೆ, ಸೌಲಭ್ಯಗಳ  ಸ್ತಬ್ದ ಚಿತ್ರಗಳು ನೆರೆದ ಜನಸ್ತೋಮದ ಗಮನ ಸೆಳೆದವು.   

ವಸ್ತುಪ್ರದರ್ಶನ ಮಳಿಗೆ:  

ಕೋಟೆ ಆವರಣದಲ್ಲಿ ಸ್ಥಾಪಿಸಲಾಗಿರುವ ವಸ್ತುಪ್ರದರ್ಶನ ಮಳಿಗೆ, ಫಲಪುಷ್ಪ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ, ಶಾಸಕರಾದ ಬಾಬಾಸಾಹೇಬ್ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ ಶಿಂಧೆ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.  

ಕೃಷಿ, ಆರೋಗ್ಯ, ತೋಟಗಾರಿಕೆಗೆ ಸಂಬಂಧಿಸಿದಂತೆ 121 ವಸ್ತು ಪ್ರದರ್ಶನ ಮಳಿಗೆಗಳು ಹಾಗೂ 37 ವಿವಿಧ ನಮೂನೆಯ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿರುತ್ತದೆ.  

ದೀಪಾವಳಿ ಹಾಗೂ ಉತ್ಸವದ ಹಿನ್ನೆಲೆಯಲ್ಲಿ ಕಿತ್ತೂರು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಮಳೆಯನ್ನು ಲೆಕ್ಕಿಸದೇ ಬೆಳಿಗ್ಗೆಯಿಂದಲೇ ವಸ್ತುಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡುವ ಮೂಲಕ ಉತ್ಸವದ ಮೆರಗು ಹೆಚ್ಚಿಸಿದರು.