ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸ್ಪೀರಿಟ್ ಮತ್ತು ವಾಹನಗಳನ್ನು ವಶಕ್ಕೆ ಪಡೆದು, ಆರೋಪಿತರ ಬಂಧನ
Illegally transported spirit and vehicles seized, suspects arrested
ಧಾರವಾಡ . 25: ನವೆಂಬರ್ 24, 2025 ರಂದು ರಾತ್ರಿ 1 ಗಂಟೆ ಸುಮಾರಿಗೆ ಗರಗ ಠಾಣಾ ವ್ಯಾಪ್ತಿಯ ತೇಗೂರ ಗ್ರಾಮದ ಭಾರತ ಪ್ಯಾಲೇಸ್ ಹೋಟೆಲ್ ಹತ್ತಿರ ಅಕ್ರಮವಾಗಿ ಸೀರಿಟ್ ಕ್ಯಾನಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ವಿನೋಧ ಮುಕ್ತಧಾರ ಅವರ ಮಾರ್ಗದರ್ಶನದಲ್ಲಿ ಗರಗ ವೃತ್ತ ಸಿಪಿಐ ಶಿವಯೋಗಿ ಲೋಹಾರ ಅವರ ನೇತೃತ್ವದಲ್ಲಿ ಗರಗ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ರಾಮಪ್ಪ ಉನ್ನದ ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಕೈಕೊಂಡು ವಾಹನ ಸಂಖ್ಯೆ ಕೆಎ 19 ಎಬಿ 1930 ನೇದ್ದರ ಚಾಲಕನಾದ ಸಜೀವ ಸದಾನಂದನ ಕೊಲಳ್ಳಿ ವಯಾ:44 ವರ್ಷ, ಜಾತಿ: ಹಿಂದೂ, ಉದ್ಯೋಗ: ಅಕ್ಕಸಾಲಿಗ ಶಾ: ವೇಲಿಪ್ಯಾಡ್ ಕೇರಳ ಹಾಗೂ ಸದರಿ ವಾಹನದಲ್ಲಿದ್ದ ಜಾಯ್ ರಾಮಚಂದ್ರ ಕಿಜಾಕತ್ ವಯಾ 66 ವರ್ಷ, ಜಾತಿ: ಹಿಂದೂ ಆರೆಯಂ, ಉದ್ಯೋಗ: ಅಭಿ ಜೋವಲ್ ಟ್ರಕ್ ಟ್ರೇಡರ್ಸ್ ಚೆನ್ನೈ ಡೆರೆಕ್ಟರ್ ಸಾ: ಕೇರಳ ಅವರುಗಳನ್ನು ವಶಕ್ಕೆ ಪಡೆದಿದ್ದು, ಮತ್ತೊಂದು ವಾಹನ ಸಂಖ್ಯೆ: ಹೆಚ್‌ಆರ್ 38 ಡಬ್ಲೂ 7134 ನೇದ್ದರ ಚಾಲಕ ಪರಾರಿಯಾಗಿದ್ದು ಇರುತ್ತದೆ. ಈ ಬಗ್ಗೆ ಗರಗ ಪೊಲೀಸ್ ಠಾಣಾ ಅಪರಾಧ ನಂ: 220/2025 ಕಲಂ: 11, 14, 32, 34,38(ಎ) ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರೆಸಿದ್ದು, ಅಲ್ಲದೇ ಪರಾರಿ ಆರೋಪಿತರ ತಪಾಸಣೆಗೆ ಕ್ರಮ ಕೈಕೊಂಡಿದ್ದು ಇರುತ್ತದೆ.
ಪ್ರಕರಣದ ಆರೋಪಿತರನ್ನು ದಾಳಿ ಕೈಕೊಂಡು ಬಂಧಿಸುವಲ್ಲಿ ಪಿಎಸ್‌ಐ ಎಸ್.ಪಿ ಉನ್ನದ (ಕ್ಘಾಸು), ಪಿಎಸ್‌ಐ (ಹೆಚ್ಚುವರಿ) ಎಪ್.ಎಂ.ಮಂಟೂರ ಹಾಗೂ ಸಿಬ್ಬಂದಿಗಳಾದ ಎ.ಐ.ಬೆಟಗೇರಿ, ಎಂ.ಎ ಪಾಟೀಲ್. ಎಪ್.ಬಿ.ಪಾಟೀಲ್, ಆರ್.ಕೆ.ಕೊಪ್ಪದ, ಎಸ್.ಐ.ಗಾಯಕವಾಡ, ಎನ್.ಬಿ.ಅಲ್ಮೇರಿಡ್, ಎಸ್.ಎ.ರಾಮನಗೌಡ್ರ, ಪಿ.ಎಸ್.ಟಕ್ಕಳಕಿ, ಸುರೇಶ ಡೊಕ್ಕಣ್ಣವರ, ದೀಲೀಪ್ ಲಮಾಣಿ, ಯು.ಆರ್.ಸಂಪಗಾಂವಿ, ವಿಜಯ ಉಪ್ಪಿನ, ಪ್ರಸಾದ ಬಡಿಗೇರ, ಬಾಪುಗೌಡ ಪಾಟೀಲ್, ಪ್ರವೀಣ ಬಾಗೇವಾಡಿ, ಮಲ್ಲಪ್ಪ ಗಿಡ್ಡಪ್ಪನವರ ಒಳಗೊಂಡಂತೆ ಗರಗ ಪೊಲೀಸ್ ಠಾಣಿಯ ಅಧಿಕಾರಿ ವ ಸಿಬ್ಬಂದಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ.
ದಾಳಿ ಸಮಯದಲ್ಲಿ ಆರೋಪಿತರಿಂದಾ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 35 ಲೀಟರ್ ಸ್ವೀರಿಟ್ ತುಂಬಿದ 844 ಕ್ಯಾನಗಳನ್ನು ಅ:ಕಿ: 34,44,800, ಎರಡು ವಾಹನಗಳನ್ನು ಅ:ಕಿ: 36,00,000 ಹಾಗೂ ಸ್ವೀರಿಟ್ ಕ್ಯಾನಗಳು ಕಾಣದಂತೆ ಸಾಗಾಟ ಮಾಡಲು ಉಪಯೋಗಿಸಿದ 40 ಬಳ್ಕೊಳ್ಳಿ ಚೀಲಗಳನ್ನು, 133 ಭತ್ತದ ಹೊಟ್ಟಿನ ಚೀಲಗಳನ್ನು ಮತ್ತು 74 ಸುಣ್ಣದ ಪಾಕಿಟ್‌ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಸದರ ಕಾಲಕ್ಕೆ ಸೋಕೋ ಅಧಿಕಾರಿಗಳಾದ ಸಂಜುಗೌಡ ಪಾಟೀಲ್, ಸಿಮ್ರನ್ ನದಾಪ್ ಹಾಗೂ ಅಬಕಾರಿ ನೀರೀಕ್ಷಕ ಲಿಂಗರಾಜ ಕೆ. ಅವರು ಹಾಜರಿದ್ದು ಪ್ರಕರಣದ ತನಿಖಾ ಕೆಲಸದ ಕಾಲಕ್ಕೆ ಸಹಕರಿಸಿರುತ್ತಾರೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 