ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ Illegal sale of marijuana: Two arrested

ಬೆಳಗಾವಿ 28: ಅಕ್ರಮವಾಗಿ ಗಾಂಜಾ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ಇಬ್ಬರು   ಆರೋಪಿಗಳನ್ನು ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಅವರಿಂದ ಗಾಂಜಾ ಮತ್ತು ನಗದು ಹಣ ಜಪ್ತ ಪಡಿಸಿಕೊಂಡಿದ್ದಾರೆ. 

ನಗರದ ಶಿವಬಸವ ನಗರ ಗ್ಯಾಂಗವಾಡಿ ನಿವಾಸಿ ರವಿ ಮಾಸ್ತರ ಲೊಂಡೆ. (50), ಆರೋಪಿಯಾಗಿದ್ದು, ಈತ  

ಮಾಳಮಾರುತಿ  ಪೊಲೀಸ್ ಠಾಣಾ ಹದ್ದಿಯ ಬೆಳಗಾವಿ ಶಿವಬಸವ ನಗರದ ಪಾಲಿಟೆಕ್ನಿಕ್ ಕ್ವಾಟರ್ಸನ ಪಾಳು ಬಿದ್ದ ವಸತಿ ಗೃಹದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಮಾಳಮಾರುತಿ ಪೊಲೀಸ್ ಠಾಣೆ ಪಿಎಸ್‌ಯ ಹೊನ್ನಪ್ಪ ತಳವಾರ ಅವರು, ಪಂಚರು, ಪತ್ರಾಂಕಿತ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದು, ಆರೋಪಿಯಿಂದ ರೂ. 5,100 ಮೌಲ್ಯದ  255 ಗ್ರಾಂ ದಷ್ಟು ಗಾಂಜಾ ಹಾಗೂ ರೂ. 800 ನಗದು ಹಣ ಹೀಗೆ ಒಟ್ಟು ರೂ.5,900 ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಂಡಿರುತ್ತಾರೆ.  

ಆರೋಪಿ ಹೆಂಡತಿ ಇಂದಿರಾ ರವಿ ಲೋಂಡೆ ಇವಳಿಂದ ಗಾಂಜಾ ತಂದು ಮಾರುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದು, ಆರೋಪಿತರಿಬ್ಬರ ವಿರುದ್ಧ  ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.