ಗೋವುಗಳು ನಮ್ಮ ಸಂಸ್ಕೃತಿ ಹಾಗೂ ಕೃಷಿ ಜೀವನದ ಅವಿಭಾಜ್ಯ ಅಂಗವಾಗಿದೆ : ಮೀನಾಕ್ಷಿ ಬಣ್ಣದ ಭಾವಿ

ಗೋವುಗಳು ನಮ್ಮ ಸಂಸ್ಕೃತಿ ಹಾಗೂ ಕೃಷಿ ಜೀವನದ ಅವಿಭಾಜ್ಯ ಅಂಗವಾಗಿದೆ : ಮೀನಾಕ್ಷಿ ಬಣ್ಣದ ಭಾವಿ Cows are an integral part of our culture and agricultural life: Meenakshi Bannada Bhavi


ಕೊಪ್ಪಳ  06: ಗೋವುಗಳು ನಮ್ಮ ಸಂಸ್ಕೃತಿ ಹಾಗೂ ಕೃಷಿ ಜೀವನದ ಅವಿಭಾಜ್ಯ ಅಂಗವಾಗಿದೆ , ಇವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು, ಅವರು ಕೊಪ್ಪಳ ಇನ್ನರ್ ವೀಲ್ ಕ್ಲಬ್ ರೂಪಿಸಿದ ಗೋವು ಸೇವಾ ಕರುಣೆಯ ಪವಿತ್ರ ಕಾರ್ಯ ಎಂಬ ಯೋಜನೆ ಅಂಗವಾಗಿ ನಗರದಲ್ಲಿರುವ ಘೋಶಾಲೆಗೆ ಭೇಟಿ ನೀಡಿ ಗೋವುಗಳ ಸೇವೆ ಮಾಡುವುದರ ಮೂಲಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು, ಮುಂದುವರೆದು ಮಾತನಾಡಿ ಗೋವುಗಳಿಗೆ ಮೇವು ನೀರು ಹಾಗೂ ಅಗತ್ಯ ಆರೈಕೆ ಮಾಡಬೇಕು, ಅನಾರೋಗ್ಯದಿಂದ ಬಳಲುವ ನಿರ್ಗತಿಕ ಗೋವುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದರ ಜೊತೆಗೆ ಅವುಗಳ ಸುರಕ್ಷತೆಗೆ ವಿಶೇಷ ಕಾಳಿಗೆ ವಹಿಸಬೇಕು, ಗೋವುಗಳ ಪಾಲನೆಗೆ ಸಹಕಾರ ನೀಡಬೇಕು ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಅಭಿಪ್ರಾಯಪಟ್ಟರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕ್ಲಬ್ಬಿನ  ಕಾರ್ಯದರ್ಶಿ ಶ್ರೀದೇವಿ ಪಾಟೀಲ್ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಸಹ ಗೋವುಗಳಿಗೆ ಬಾಳೆಹಣ್ಣು ತರಕಾರಿಗಳು ಮತ್ತು ಹಸಿರು ಮೇವನ್ನು ತಿನ್ನಿಸಿ ಗೋಮಾತೆಯ ಸೇವೆ ಮಾಡಿದರು ,ಇದು ನಮಗೆ ಆತ್ಮ ತೃಪ್ತಿ ನೀಡಿದ ಕಾರ್ಯವಾಗಿದೆ ಎಂದರು ,ಗೋವುಗಳ ಆರೈಕೆ ಮತ್ತು ಪ್ರಾಣಿ ಕಲ್ಯಾಣದ ಬಗ್ಗೆ ತೋರಿದ ಕಾಳಜಿ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಗೋಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಕ್ಲಬ್ಬಿನ ಗೋವು ಸೇವಾ ಕಾರ್ಯಕ್ಕೆ ಅಭಿನಂದಿಸಿದರು,