ಬಾಗಲಕೋಟೆ೨೬: ಮುಧೋಳ ತಾಲೂಕಿನ ಮಹಾಲಿಂಗಪೂರ ಅಕ್ಕಿಮರಡಿ ರಸ್ತೆಯ ಧರಿಗೌಡ ಜಮೀನಿನ ಹತ್ತಿರ ಪರವಾನಿಗೆ ಇಲ್ಲದೇ ಕಾನೂನು ಬಾಹೀರವಾಗಿ ಮಾರಾಟ ಮಾಡುತ್ತಿದ್ದ 5 ಕೆ.ಜಿ 12 ಗ್ರಾಂ ತೂಕದ ಗಾಂಜಾ ಮತ್ತು ಎರಡು ಮೋಟಾರ ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ಧಶನದ ಮೇರೆಗೆ ಡಿ.ಸಿ.ಐ.ಬಿ ಘಟಕದ ಪೊಲೀಸ್ ನಿರೀಕ್ಷಕರಾದ ಬಿ.ಎಸ್.ಮಂಟೂರ ಅವರ ನೇತೃತ್ವದಲ್ಲಿ ಇತ್ತೀಚೆಗೆ ದಾಳಿ ನಡೆಸಿ ಗಾಂಜಾ ಮತ್ತು ಎರಡು ಮೋಟಾರ್ ಸೈಕಲ್ ಸೇರಿ ಒಟ್ಟು 90 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಮಹಾಲಿಂಗಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.ಯಾಕುಬ್ ಬಸೀರ್ ಶಿಲ್ಲೆದಾರ, ವಾಸೀಮ ಇಮ್ರಾನ್ ನೌಶಾದ ಇಭುಸೆ ಹಾಗೂ ಸಯ್ಯದ ಲಾಲ್ಸಾಬ್ ಕುಲ್ಲೊಳ್ಳಿ ಆರೋಪಿಗಳಾಗಿದ್ದಾರೆ. ಸದರಿ ಕಾಯರ್ಾಚರಣೆಯಲ್ಲಿ ಬಾಗಲಕೋಟೆ ಪೊಲೀಸ್ ನಿರೀಕ್ಷಕ ಬಿ.ಎಸ್.ಮಂಟೂರ, ಸಿಎಚ್ಸಿ ಸುರೇಶ ನಾಯಕ, ಎಂ.ಎಸ್.ಬೆಂಡಿಗೇರಿಮಠ, ಪ್ರಭುಗೌಡ ಹಾಗೂ ಜೀಪ್ ಚಾಲಕ ಎಚ್.ಬಿ.ಚೌದರಿ ಇದ್ದರು.