ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹ: ಅಧಿಕಾರಿಗಳ ದಾಳಿ
Illegal hoarding of ration rice: Officials raid
ಲೋಕದರ್ಶನ ವರದಿ
ಜಮಖಂಡಿ ೨೭: ನಗರದ ಅಂಬೇಡ್ಕರ್ ಸರ್ಕಲ್ ಬಳಿ ಸರಕಾರದಿಂದ ಹಂಚಿಕೆಯಾದ ಪಡಿತರ ಅಕ್ಕಿಕಾಳು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಪತ್ರಾಸ ಅಂಗಡಿ ಮೇಲೆ ಕಂದಾಯ ಅಧಿಕಾರಿಗಳು ಮತ್ತು ಪೋಲಿಸರು ಜಂಟಿಯಾಗಿ ದಾಳಿ ನಡೆಸಿ. ಅಕ್ರಮದ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ನಗರದ ಇಸ್ತಾಕ್ ಅಹ್ಮದ ಹಾರೂನರಶೀದ್ ಹವಾಲ್ದಾರ ಇವರಿಗೆ ಸೇರಿದ ಮನೆ ಬಾಡಿಗೆಗೆ ಪಡೆದುಕೊಂಡ ಪತ್ರಾಸ್ದಿಂದ ನಿರ್ಮಿಸಿದ ಸಣ್ಣ ಅಂಗಡಿಯಲ್ಲಿ ಗೂಪ್ರಾನ್ ನೂರಅಹ್ಮದ ಕಡದೇಕರ (೩೫) ವರ್ಷ ಅಂಬೇಡ್ಕರ ಸರ್ಕಲ್ ಹತ್ತಿರ ಕಡ್ಲೆ ಗಲ್ಲಿ ಇತನು ಸರ್ಕಾರದಿಂದ ಹಂಚಿಕೆಯಾದ ಅಕ್ಕಿಯನ್ನು ಕಡಿಮೆ ಬೆಲೆಗೆ ಪಡೆದುಕೊಂಡು ಬೇರೆ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದು. ಅಕ್ರಮವಾಗಿ ಸಂಗ್ರಹಿಸಿಟ್ಟ ಅಕ್ಕಿಯನ್ನು ತುಂಬಿದ ೬ ಬಿಳಿ ಪ್ಲಾಸ್ಟಿಕ್ ಚೀಲಗಳು ಇದ್ದು, ಅಂದಾಜು ೫೫ ರಿಂದಾ ೬೦ ಕೆಜಿ ತೂಕ ಇರುತ್ತದೆ. ಒಟ್ಟು ಅಕ್ಕಿಯು ೩೬೦ ಕೆಜಿ ತೂಕ ಇದ್ದು. ಸರ್ಕಾರದಿಂದ ನಿಗದಿಪಡಿಸಿದ ಬೆಲೆಯು ಪ್ರತಿ ಕೆಜಿಗೆ ೩೪.೬೦ ರೂ ಇದ್ದು, ಒಟ್ಟು ಬೆಲೆ ೧೨೪೫೬ ರೂ,ಗಳ ಮಾಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯಲ್ಲಿ ಆಹಾರ ನಿರೀಕ್ಷಕ ಸುರೇಶ ಪರಪ್ಪ ಕುರಿ, ಹೆಚ್ಚುವರಿ ಗ್ರಾಮ ಆಡಳಿತಾಧಿಕಾರಿ ಸಾಜೀದ ಜಲಾಲುದ್ದೀನ ಹುದಲಿ, ಗ್ರಾಮ ಸಹಾಯಕ ಶಣ್ಣೀರ ಹಾಜೀಸಾಬ ಅವಟಿ, ಪೋಲಿಸ್ ಪೇದೆ ಎಲ್,ಎಮ್, ಯಲಿಶೆಟ್ಟಿ ಇದ್ದು. ಈ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 