ವರುಣಗೌಡ ಪಾಟೀಲ ಅಭಿಮಾನಿ ಬಳಗದಿಂದ ಇಫ್ತಾರ್ ಕೂಟ
ಶಿಗ್ಗಾವಿ 17: ರಂಜಾನ್ ಹಬ್ಬದ ಅಂಗವಾಗಿ ವರುಣಗೌಡ ಪಾಟೀಲ ಅಭಿಮಾನಿ ಬಳಗದ ಶಿಗ್ಗಾವಿಯ ನಯಿಪೇಟ್ ಆಶೀಮಿ ಮಸೀದಿಯ ಆವರಣದಲ್ಲಿ ರವಿವಾರ ಇಫ್ತಾರ್ ಕೂಟ ನಡೆಯಿತು.
ಮಸೀದಿ ಕಮಿಟಿಯ ಸದಸ್ಯರಾದ ಅಕ್ತರ ರಾಜಾ ಗುಲಾಮುದ್ದಿನ ಕೂಟ ಆಯೋಜಿಸಿದರು. ಭಾವೈಕ್ಯದ ತಾಣ ಶಿಗ್ಗಾವಿಯಲ್ಲಿ ಹಿಂದೂಹಿಮುಸ್ಲಿಮರು ಸಹೋದರರಂತೆ ಇದ್ದೇವೆ ಎಂದರು.ವರುಣಗೌಡ ಪಾಟೀಲ ಅಭಿಮಾನಿ ಬಳಗದವರು ಮುಸಲ್ಮಾನ್ ಬಾಂಧವರಿಗೆ ರೋಜಾ ಸಮಯದಲ್ಲಿ ಹಣ್ಣು ಹಂಪಲು ವಿತರಿಸಿ ಶುಭಾಶಯ ಸಲ್ಲಿಸಿದರು.ಈ ಸಂದರ್ಭದಲ್ಲಿ ವರುಣಗೌಡ ಪಾಟೀಲ ಅಭಿಮಾನಿ ಬಳಗದ ನಾಗರಾಜ ಕ್ಯಾಬಳ್ಳಿ, ವಿನಯ ಹೊನ್ನಣ್ಣವರ,ಚೇತನ, ಪ್ರೀತಮ್ ಅರಳಿಕಟ್ಟಿ, ವಿಶಾಲ್ ಮರಾಠಿ, ಪ್ರಜ್ವಲ್, ಶೌಕತ್ ಅಲಿ ಅಖ್ತರ್ ಗುಲಾಮುದ್ದೀನ್ ರವೂಫ್ ಆದಮ್ಬಾಯಿ ಹಜರತ್‌ಅಲಿ ಕೌಕಲಿಅನ್ವರ್ಬಾಷಾ ಕಲಂದರ್ ಧಾರವಾಡ ಮುಷ್ತಾಕ್ಮಿಯಾ ಗುಲಾಬಖಾನ್ ಖಾಜೆಖಾನಜಾಫರ್ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.