ಒಳ್ಳೆಯ ಶಿಕ್ಷಣ ನೀಡಿದರೆ ಜೀವನ ಪರ್ಯಂತ ಅದರ ಉಪಯೋಗ: ಶಾಸಕ ಬಾಬಾಸಾಹೇಬ ಪಾಟೀಲ

ಒಳ್ಳೆಯ ಶಿಕ್ಷಣ ನೀಡಿದರೆ ಜೀವನ ಪರ್ಯಂತ ಅದರ ಉಪಯೋಗ: ಶಾಸಕ ಬಾಬಾಸಾಹೇಬ ಪಾಟೀಲ If you give a good education, it will be useful for life: MLA Babasaheb Patil

 ನೇಸರಗಿ 20:  ರಸ್ತೆ, ಚರಂಡಿ, ಇನ್ನೂ ಅನೇಕ ಕೆಲಸ ಕಾರ್ಯಗನ್ನು ಮಾಡಿದರೆ, ಅದರ ಆಯಸ್ಸು  5 ರಿಂದ 6 ವರ್ಷ, ಇದರ ಜೊತೆಗೆ ನಾವು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಿದರೆ ಅದು ಅವರ ಜೀವನ ಪರ್ಯಂತ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.  ಅವರು ಮಂಗಳವಾರದಂದು ನೇಗಿನಹಾಳ ಗ್ರಾಮದ ಶಾಸಕರ ಕಾರ್ಯಾಲಯದಲ್ಲಿ ಚ . ಕಿತ್ತೂರು ಮತ್ತು ಬೈಲಹೊಂಗಲ ಕ್ಷೇತ್ರದ ಶಿಕ್ಷಣಾಧಿಕಾರಿಗಳ ಕಾರ್ಯಾಲಯ  ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಕ್ಷೇತ್ರ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ, ಈ ಫಲಿತಾಂಶಕ್ಕೆ ಕಳೆದ ಎರಡು ವರ್ಷಗಳಿಂದ ಹಂತಹಂತವಾಗಿ ವಿದ್ಯಾರ್ಥಿಗಳಿಗೆ ತನು ಮನದಿಂದ ಶಿಕ್ಷಣ ನೀಡಿದ.

  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಚನ್ನಬಸಪ್ಪ ತುಬಾಕಿ, ಎಲ್ಲ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಪರಿಶ್ರಮ ಪಟ್ಟು ಕಲಿತ ವಿದ್ಯಾರ್ಥಿಗಳು ತೋರಿದ  ಪರಿಶ್ರಮ ಇಂದು ಯಶಸ್ವಿಯಾಗಿ ಜಿಲ್ಲೆಯಲ್ಲಿಯೇ ಪ್ರಮುಖ ಸ್ಥಾನ ಪಡೆದು ಮುಂದೆ ಬಂದಿದೆ, ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳಿಂದ ಸುಮಾರು 350 ವಿದ್ಯಾರ್ಥಿಗಳು ಸುಮಾರು  ಲಕ್ಷ ರೂಪಾಯಿ ನೀಡಿ ಉಡುಪಿ ಮತ್ತು ಮಂಗಳೂರಿನಲ್ಲಿ ಎರಡು ತಾಲೂಕಿನ ಸ್ಥಿತಿವಂತರು, ಹಲವರು ಸಾಲ ಮಾಡಿ   ಅನೇಕ ಕೋಟಿ ರೂ. ಕೊಟ್ಟು  ಬೇರೆ ಜಿಲ್ಲೆಗೆ ತಮ್ಮ ಮಕ್ಕಳ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಕಳಿಸುತಿದ್ದಾರೆ. ಅದೇ ಶಿಕ್ಷಣ ನಮ್ಮ ಶಾಲೆಗಳಲ್ಲಿ ಕಲಿತರೆ ನಮ್ಮ ತಾಲೂಕಿಗೆ ಕೀರ್ತಿ ಬರುತ್ತದೆ ಮತ್ತು ಉಳಿತಾಯ ಆಗುತ್ತದೆ. ಮುಂದಿನ ನಮ್ಮ ಕ್ಷೇತ್ರದ ಗುರಿ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಯಬೇಕು ಎಂಬ ಉದ್ದೇಶದಿಂದ ಈಗಿನಿಂದಲೇ ಅಭಿಯಾನ ಪ್ರಾರಂಭಿಸಿದ್ದೇವೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಲಾ, ವಿಜ್ಞಾನ, ವಾಣಿಜ್ಯ ಕಲಿಯುವ ಪುಸ್ತಕಗಳನ್ನು ನೀಡಲಾಗುವದು ಎಂದು ಬಾಬಾಸಾಹೇಬ ಪಾಟೀಲ ಹೇಳಿದರು.    

ಕೆ ಪಿ ಸಿ ಸಿ ಸದಸ್ಯ ರೋಹಿಣಿ ಪಾಟೀಲ ಮಾತನಾಡಿ ಶಾಸಕರು ಶಿಕ್ಷಣ ಪ್ರೇಮಿಯಾಗಿದ್ದು ಅವರ ಶಿಕ್ಷಣ ಕ್ಷೇತ್ರಕ್ಕೆ ಮಾಡಿದ ಪರಿಶ್ರಮ ಸಾರ್ಥಕವಾಗಿದೆ ಎಂದರು.   ಹಿರಿಯ ಪತ್ರಕರ್ತ ಈಶ್ವರ ಹೂಟಿ ಮಾತನಾಡಿ ರಾಜ್ಯದಲ್ಲಿ ಅನೇಕ ಬಿ ಓ ಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಪ್ರಯತ್ನ ಮಾಡುತ್ತಾರೆ, ಚನ್ನಮ್ಮನ ನಾಡಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬರಲು ಶಿಕ್ಷಕರ ಶ್ರಮ ಸಾರ್ಥಕವಾಗಿದೆ ಎಂದರು.   ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಬಸಪ್ಪ ತುಬಾಕಿ ಮಾತನಾಡಿ ಕ್ಷೇತ್ರದ ಸಮಗ್ರ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಗೆ ಮಿಷನ್ 25 ಎಂಬ ಹೆಸರಿನಲ್ಲಿ ಬೆನ್ನೆಲುಬಾಗಿ ನಮ್ಮ ಶಾಸಕರಾದ ಬಾಬಾಸಾಹೇಬ ಪಾಟೀಲ ನಿಂತು ತನು ಮನ ಧನವನ್ನು ಒದಗಿಸಿ ಅವಿರತ ಶ್ರಮ ವಹಿಸಿ ಇಂದು ಈ ಮಟ್ಟಕ್ಕೆ ಬರಲು ಕಾರಣಿಭುತರಾಗಿದ್ದು,  ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ಪರಿಶ್ರಮದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 70 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕ ಪದೇ ಕೀರ್ತಿ ತಂದಿದ್ದಾರೆ ಎಂದರು.     

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ ನಿರ್ದೇಶಕ ನಾನಾಸಾಹೇಬ ಪಾಟೀಲ, ತಹಶೀಲ್ದಾರರಾದ ಕೆ ಅರ್ ಪಾಟೀಲ, ಹಣಮಂತ ಶಿರಹಟ್ಟಿ, ಡಯಟ್ ಪ್ರಾಚಾರ್ಯ ಅಶೋಕಕುಮಾರ ಶಿಂದಗಿ, ಕಿತ್ತೂರು ತಾ ಪಂ ಇ ಓ ನಿಂಗಪ್ಪ ಮಸಳಿ, ಬೈಲಹೊಂಗಲ ತಾ ಪಂ ಇ ಓ ಸಂಜಯ ಚುನ್ನುರ, ಸಿಪಿಐ ಶಿವಾನಂದ ಗುಡಗನಟ್ಟಿ, ಪ್ರಾಚಾರ್ಯ ಎಮ್ ಐ ಪೂಜಾರ, ಶಂಕರ ಹೊಳಿ, ಸುನೀಲ ಘೇವಾರಿ, ಸಿ ಬಿ ಪಾಟೀಲ, ಜೈಸಿದ್ದರಾಮ ಮಾರಿಹಾಳ, ಎಮ್ ಎಫ್ ಜಕಾತಿ, ಸಂಗನಗೌಡ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ ಎಮ್ ಪಿ ಕದಂ, ಶಿಕ್ಷಕಿ ಸ್ನೇಹಲ ಪೂಜಾರ ನಿರೂಪಿಸಿದರು.   ಇದೆ ಸಂದರ್ಭದಲ್ಲಿ 100 ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪಿ ಯು ಪುಸ್ತಕಗಳನ್ನು ಮತ್ತು 400 ಮುಖ್ಯ ಶಿಕ್ಷಕರಿಗೆ, ಶಿಕ್ಷಕರಿಗೆ ಬ್ಯಾಗ್ ವಿತರಿಸಲಾಯಿತು.