ಭಕ್ತನಾದರೆ ಸೇವಾಭಾವದ ಅರಿವು ಇರಬೇಕು: ಶಿವಶರಣೆ ನೀಲಮ್ಮತಾಯಿ
If you are a devotee, you must be aware of the spirit of service: Shivasharane Neelammatai
ಗದಗ 22: ಸೇವಾ ಭಾವವಿಲ್ಲದ ಸತ್ಯ ಸದಾಚಾರಕ್ಕೆ ಸಲ್ಲದ ಹೆಸರು ಭಕ್ತರು ವೇಶಭೂಷಣಗಳಿಂದ ಹತ್ತಿ ಹಣ್ಣಿನ ಭಕ್ತಿ ಒಳಗೆ ಹುಳು ಮೇಲೆ ಸಾತ್ವಿಕ ಬಣ್ಣದ ಕವಚ ಇಂತಿರುವವರು ಭಕ್ತರಾಗಬಲ್ಲರೇ? ಹೀಗೆಂದು ಶರಣೆ ನೀಲಮ್ಮ ತಾಯಿಯವರು ಶರಣ ಚರಿತಾಮೃತ ಪ್ರವಚನದಲ್ಲಿ ಬಸವಣ್ಣನವರ ಹಾಗೂ ಅಲ್ಲಮ ಪ್ರಭುಗಳ ಮಧ್ಯದಲ್ಲಿ ನಡೆದಿವರ ಸಂವಾದವನ್ನು ಶಿವಶರಣೆ ನೀಲಮ್ಮ ತಾಯಿಯವರು ಅರ್ಥ ಪೂರ್ಣವಾಗಿ ವಿವರಿಸಿದರು.
ಶ್ರಾವಣ ಮಾಸದಲ್ಲಿ ಒಂದು ತಿಂಗಳು ನಡೆಯುವ ಜ್ಞಾನ ದಾಸೋಹದಲ್ಲಿ ಭಾಗವಹಿಸಿ ಮಾತನಡುತ್ತಾ ಭಕ್ತನಾದರೆ ಕಾಯದಲ್ಲಿ ಭಕ್ತಿ ಇರಬೇಕು. ಗೋಸಂಬಿಯಂತೆ ಭಕ್ತಿ ಒಂದು ರೀತಿ ವರ್ತಿಸುವುದಲ್ಲ. ಭಕ್ತಿಗೆ ಬಣ್ಣವಿಲ್ಲ. ಸತ್ಯಕ್ಕೆ ಯಾವುದೇ ಲೇಪನವಿಲ್ಲ. ಸತ್ಯ ಯಾವಾಗಲೂ ಒಂದೇ. ಸುಳ್ಳಿಗೆ ಸಾವಿರಾರು ಸುಳ್ಳು ಜೋಡಿಸಿ ಹೇಳಲು ಬರುತ್ತೇ. ಆದರೆ ಸತ್ಯಕ್ಕೆ ಹೇಳಲು ಬರುವುದಿಲ್ಲಾ. ಅಹಂ ನ ಬಕ್ತಿಯ ಸಂಭ್ರಮಕ್ಕೆ ಸತ್ಯ ಸ್ಥಿತಿ ಸಮನ್ವಿಸುವುದಿಲ್ಲಾ. ಭಕ್ತಿಯನ್ನು ಮಾತಿನಲ್ಲಿ ನುಡಿದು ಮಲಗಿಸಿದರೆ ಹೇಗೆ ? ಬೆಳೆಯುವ ಭೂಮಿಯಲ್ಲಿ ಪ್ರಳಯದ ಕಸ ಹುಟ್ಟಿದಂತೆ ಭಕ್ತಿಯೊಂದಿಗೆ ಅಹಂ ನ ಕಸ ಬೆಳೆಯಬಾರದು. ವಿಷ ಗುಂಬಳ ಕಾಯಿ ಹಣ್ಣಾದಂತೆ ಭಕ್ತಿಯಾಗಬಾರದು.
ಸುಧಾ ಹುಚ್ಚಣ್ಣವರ ಮಾತನಾಡುತ್ತಾ ಮಹಿಳೆಯರು ಸನ್ಯಾಸಿಯಾಗುವುದು ಬಹಳ ಕಷ್ಟದ ಕೆಲಸ. ಅಂಥದರಲ್ಲಿ ನೀಲಮ್ಮ ತಾಯಿಯವರು ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿರುವರು. ಇದೇ ತಾರೀಖು 24 ರವಿವಾರದಂದು ಗದಗ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಶರಣ ಮೇಳ ನಡೆಯಲಿದ್ದು, ಬೆಳಿಗ್ಗೆ 8:30 ರಿಂದ ಸಾಯಂಕಾಲ 6:00ಗಂಟೆ ವರೆಗೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಒಕ್ಕಲಗೇರಿ ಓಣಿಯ ಸರ್ವ ಸದಸ್ಯರು ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕೊಟ್ರ್ಪ ಕಮತರ, ಎಂ.ಎಂ. ಹಿರೇಮಠ, ಶಿವಣ್ಣ ಕತ್ತಿ, ಮುರಿಗೆಪ್ಪ ನಾಲವಾಡ, ಹಿರಿಯರಾದ ವಿರುಪಾಕ್ಷಪ್ಪ ಅಕ್ಕಿ, ಬಸವರಾಜ ಜಂತ್ಲಿ, ಬಸವರಾಜ ಮಡಿವಾಳರ, ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿ ಕೋಲಮಠ, ಶ್ರಿಶೈಲಪ್ಪ ಪಟ್ಟಣಶೆಟ್ಟಿ, ಸುರೇಶ ಮಾಳವಾಡ, ಪ್ರಭು ಶೆಟ್ಟರ, ಸುಭಾಸ ಹವಳೆ, ವಿರುಪಾಕ್ಷಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಸುರೇಶ ನಿಲುಗಲ್ಲ, ಅಶೋಕ ತಮೃಳ್ಳಿ, ಬಸವರಾಜ ಮೊರಬದ, ಪಂಚಾಕ್ಷರಅಂಗಡಿ, ನವೀನ ನಾಲ್ವಾಡ, ಬಸವರಾಜ ಜ್ಞಾಂಪೂರ, ಪ್ರಕಾಶ ಜಂತ್ಲಿ, ಸತ್ಸಂಗದ ಸದಸ್ಯರಾದ ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ನಗಪ್ಪ ಕಟಿಗೆರೆ.ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ, ಅನಸಕ್ಕ ಮೇಲಗಿರಿ, ಶೈಲಾ ಮಾನ್ವಿ, ಸರಸ್ವತಿ ನಂದಿ ಕೋಲಮಠ ಮುತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 