ಪರಿಸರ ಮಾಲಿನ್ಯ ನಿಯಂತ್ರಿಸದಿದ್ದರೆ ಜೀವಸಂಕುಲಕ್ಕೆ ಉಳಿಗಾಲವಿಲ್ಲ: ಈಶಪ್ಪ

ಧಾರವಾಡ 5: ಮನುಷ್ಯನನ್ನೂ ಸೇರಿಕೊಂಡು  ಪ್ರಾಣಿ, ಪಕ್ಷಿ ಎಲ್ಲ ಜೀವಿಸಂಕುಲಕ್ಕೆ ಉಸಿರು ನೀಡುವ ಮಹಾತಾಯಿ ಪರಿಸರ.ಜಗತ್ತಿನಾದ್ಯಂತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ದಿನನಿತ್ಯ ಪರಿಸರ ನಾಶಗೊಳಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಜಾಗತಿಕ ತಾಪಮಾನ ಏರುತ್ತಾ ವಾತಾವರಣದಲ್ಲಿ ಅಸಮತೋಲನ ಉಂಟಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಈಶಪ್ಪ ಕೆ.ಭೂತೆ  ಕಳವಳ ವ್ಯಕ್ತಪಡಿಸಿದರು.

      ನಗರದ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಇಲಾಖೆಗಳು,ಸಂಘ ಸಂಸ್ಥೆಗಳ ಆಶ್ರಯದಲ್ಲಿಂದು  ಬೇಲೂರು ಕೈಗಾರಿಕಾಭಿವೃದ್ಧಿ  ಪ್ರದೇಶದ ಕನರ್ಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ನಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ-2019 ರ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

     ಕೆಲವೇ ದಶಕಗಳ ಹಿಂದೆ ಧಾರವಾಡದಲ್ಲಿ ವರ್ಷಕ್ಕೆ ಕನಿಷ್ಟ ಐದರಿಂದ ಆರು ತಿಂಗಳು ಕಾಲ ಮಳೆಯಾಗುತ್ತಿತ್ತು, ಚಳಿಯ ವಾತಾವರಣವಿರುತ್ತಿತ್ತು. ಈಗ ಅದು ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇದಕ್ಕೆಲ್ಲ ನಮ್ಮೆಲ್ಲರ ದುರಾಸೆ, ಸ್ವಾರ್ಥ ಪ್ರವೃತ್ತಿಯೇ ಕಾರಣ ಎಂದು ಈಶಪ್ಪ ಕೆ.ಭೂತೆ ಹೇಳಿದರು.

        ಸಮಾರಂಭದ ಅಧ್ಯಕ್ಷತೆವಹಿಸಿದ್ದ  ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಪ್ರತಿ ಸೋಮವಾರ ಇನ್ನು ಸಕರ್ಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕರ್ಾರದ ಅಥವಾ ಸ್ವಂತ ವಾಹನ ಬಳಸದೇ, ಕಾಲ್ನಡಿಗೆಯಿಂದ ಇಲ್ಲವೇ ಸಾರ್ವಜನಿಕ ಬಸ್ ಗಳ ಮೂಲಕ ಕಚೇರಿಗಳಿಗೆ ಆಗಮಿಸಬೇಕು ಎಂಬ ನಿಧರ್ಾರ ಜಿಲ್ಲಾಡಳಿತ ತೆಗೆದುಕೊಂಡಿದೆ.

  ಜೂನ್ 11 ರಂದು ಸ್ವಚ್ಛ ಮೇವ ಜಯತೆ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಒಂದು ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಧಾರವಾಡದಂತಹ ಮಲೆನಾಡ ಸೆರಗಿನಲ್ಲಿಯೂ ಜಲಮೂಲಗಳು ಬತ್ತುತ್ತಿರುವುದು ಆತಂಕದ ಸಂಗತಿಯಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯು ಜಿಲ್ಲೆಯಲ್ಲಿ ಈ ವರ್ಷ 307 ಚೆಕ್ ಡ್ಯಾಮುಗಳನ್ನು ನಿಮರ್ಿಸುವ ಗುರಿ ಹೊಂದಿದೆ ಎಂದರು.

  ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ಡಿ.ಕಪರ್ೂರಮಠ, ಧಾರವಾಡ ಗ್ರೋಥ್ ಸೆಂಟರ್ ನ ಶಿರೀಷ್ ಉಪ್ಪಿನ, ವಕೀಲರ ಸಂಘದ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ ಮಾತನಾಡಿದರು.

           ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ,ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಇ.ಎಸ್.ಡಿಸೋಜ, ಸಿಡಾಕ್ ನಿದರ್ೇಶಕ ಬಸವರಾಜ ಗೋಟೂರ, ಬೇಲೂರು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶ್ರೀಕಾಂತ್ ಹುಲಮನಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.ಸುನಂದಾ ನಿಂಬನಗೌಡರ್, ಅನೀಲ ಮೇತ್ರಿ ಹಾಗೂ ಅನಾಥ ಮಕ್ಕಳ ಶಾಲೆಯ ವಿದ್ಯಾಥರ್ಿಗಳು ,ಸಂಗಡಿಗರು ಪ್ರಾಥರ್ಿಸಿದರು.ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು, ಹಿರಿಯ ಪರಿಸರ ಅಧಿಕಾರಿ ವಿಜಯಕುಮಾರ್ ಕಡಕ್ ಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕೆ.ಎಚ್.ನಾಯಕ ನಿರೂಪಿಸಿದರು.ಉಪ ಪರಿಸರ ಅಧಿಕಾರಿ ಶೋಭಾ ಪೋಳ ವಂದಿಸಿದರು. ಸಮಾರಂಭಕ್ಕೂ ಮುನ್ನ ಬೇಲೂರು ಕೈಗಾರಿಕಾ ಪ್ರದೇಶದ ಕೆರೆ ಆವರಣದಲ್ಲಿ ನೂರಾರು ಸಸಿಗಳನ್ನು ಗಣ್ಯರು ನೆಟ್ಟರು.