ವ್ಯಕ್ತಿಯು ಗಟ್ಟಿ ನಿರ್ಧಾರ ಮಾಡಿದಲ್ಲಿ ವ್ಯಸನಮುಕ್ತನಾಗಲು ಸಾಧ್ಯ: ಪಿ.ರಾಜೀವ್
If a person makes a firm decision, it is possible to become free from addiction: P. Rajiv
ಪಾಲಬಾವಿ 15: ವ್ಯಕ್ತಿಯು ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ಮಾಡಿದರೆ ಮಾತ್ರ ಆತ ಸಾರಾಯಿ (ಮಧ್ಯ) ಕುಡಿಯುವುದನ್ನು ನಿಲ್ಲಿಸುತ್ತಾನೆ. ಸರ್ಕಾರಕ್ಕೆ ಬಡವರ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಕರುಣೆ, ಕಾಳಜಿ ಇದ್ದರೇ ಕಲ್ಯಾಣ ಕರ್ನಾಟಕವನ್ನು ಕಟ್ಟಬೇಕು ಎನ್ನುವ ಕನಸು, ಹಂಬಲವಿದ್ದರೆ, ಸರ್ಕಾರವು ಮಧ್ಯಪಾನವನ್ನು ಸಂಪೂರ್ಣ ನಿಷೇಧ ಮಾಡಬೇಕು. ಇಡಿ ಕರ್ನಾಟಕದಲ್ಲಿ ವೈನ್ ಶಾಪ್ ಗಳಲ್ಲಿ ಸಾರಾಯಿ ಸಿಗುತ್ತದಯೇ ಎನ್ನುವುದು ತಪ್ಪು, ಹೋಟೆಲ್, ದಿನಸಿ ಅಂಗಡಿ, ಪಾನ್ ಬೀಡಿ, ಅಂಗಡಿಗಳಲ್ಲಿ ಮುಕ್ತವಾಗಿ ಸಾರಾಯಿ ಸಿಗುತ್ತದೆ.
ಕರ್ನಾಟಕದಲ್ಲಿ ಮಧ್ಯಪಾನ ಮಾರಾಟ ಮಾಡುವುದನ್ನು ನಿಷೇಧ ಮಾಡಬೇಕು ಎನ್ನುವ ಬಹುತೇಕ ಶಾಸಕರಲ್ಲಿ ನಾನು ಕೂಡ ಒಬ್ಬನು. ಸಮಾಜದ ಸೇವೆ ಹೇಗೆ ಮಾಡಬೇಕು ಎಂದು ತೋರಿಸಿ ಕೊಟ್ಟಿದ್ದಾರೆ ಅವರೇ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ರವರು ನನಗೆ ಅವರು “ಭಗವಂತ” ನಂತೆ ಕಾಣಿಸುತ್ತಾರೆ. ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿದರು.
ಅವರು ಹಂದಿಗುಂದ ಗ್ರಾಮದ ಸಿದ್ದೇಶ್ವರ ವಿರಕ್ತ ಮಠದ ಸಭಾಭವನದಲ್ಲಿ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹಂದಿಗುಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಡಿಸಿ ಟ್ರಸ್ಟ್ ಹಾರೂಗೇರಿ ಇವರ ಸಯುಕ್ತ ಆಶ್ರಯದಲ್ಲಿ, ಏಪ್ರಿಲ್ 15ರಿಂದ 22ರ ವರೆಗೆ 8 ದಿನಗಳ ವರೆಗೆ ಜರಗುವ 2048ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಡಾ.ಸಿಬಿ ಕುಲಿಗೋಡ, ಧಾರವಾಡ ಜನ ಜಾಗೃತಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಭಾಸ್ಕರ್.ಎನ್, ಜಿಪಂ ಮಾಜಿ ಸದಸ್ಯ ರಾಮನಗೌಡ ಪಾಟೀಲ ಮಾತನಾಡಿದರು. ಗುರುಮಠದ ಗುರುಲಿಂಗಯ್ಯ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಅಥಣಿ ಜಿಲ್ಲಾ ಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಅಮರ ದುರ್ಗಣ್ಣವರ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಿದ್ದೇಶ್ವರ ಮಠದ ಅರ್ಚಕರು ಗುರುಲಿಂಗಯ್ಯ ಮಠದ ಸನ್ನಿದಾನ ಸಹಿಸಿದ್ದರು.
ವೇದಿಕೆಯ ಮೇಲೆ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಹೆಗ್ಗಾಣಿ, ಮಾಜಿ ಜಿಪಂ ಸದಸ್ಯ ಡಾ: ಸಿ.ಬಿ.ಕುಲಿಗೋಡ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆ ಜಿಲ್ಲಾ ನಿರ್ದೇಶಕಿ ಶ್ರೀಮತಿ ನಾಗರತ್ನ ಹೆಗಡೆ, ಷಣ್ಮುಖ ತೇರದಾಳ, ಜಿಪಂ ಮಾಜಿ ಸದಸ್ಯ ರಾಮನಗೌಡ ಪಾಟೀಲ, ಯಕ್ಸಂಬಾ ಶ್ರೀ ಬೀರೇಶ್ವರ ಸೊಸೈಟಿ ನಿರ್ದೇಶಕ ಮಲ್ಲಿಕಾರ್ಜುನ ತೇಲಿ, ಪ್ರಗತಿಪರ ಕೃಷಿಕರು ಪರ್ಪ ಬಂಗಿ, ಸಂಗಪ್ಪ ಮಿರ್ಜಿ, ಮುಗಳಖೋಡ ಪುರಸಭೆಯ ಸದಸ್ಯ ಶ್ರೀಮತಿ ಮಂಗಲ ಪನದಿ, ಅನ್ನಪೂರ್ಣ ಯರಡತ್ತಿ, ಹನುಮಂತ ಸಣ್ಣಕಿನವರ, ಬಿಜೆಪಿ ಕುಡಚಿ ಮಂಡಲ ಅಧ್ಯಕ್ಷ ಸಿದ್ದು ಮೂಡಲಗಿ, ಗ್ರಾಪಂ ಸದಸ್ಯ ಶೋಭಾ ಘಂಟಿ, ಉಪಸ್ಥಿತರಿದ್ದರು
ಮಹಾದೇವ ಹೆಗ್ಗಾಣಿ, ರುದ್ರ್ಪ ಬದ್ರಶೆಟ್ಟಿ, ರಮೇಶ ಪಾಟೀಲ, ಮುರುಗಪ್ಪ ಅಂದಾನಿ, ಮಲ್ಲಪ್ಪ ಮುದುಕಣ್ಣವರ, ಮಲ್ಲಪ್ಪ ಪರಮಶೆಟ್ಟಿ, ಮಹಾದೇವ ಬಳಗಾರ ಇದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ತಾಲೂಕು ನಿರ್ದೇಶಕರು ನಾರಾಯಣ.ಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಮುಗಳಖೋಡ ವಲಯ ಮೇಲ್ವಿಚಾರಕಿ ಸುರೇಖಾ ಕೋಳಿ ಸ್ವಾಗತಿ ಗೀತೆಯನ್ನು ಹಾಡಿದರು. ಗುರುನಾಥ ಉಳ್ಳಾಗಡ್ಡಿ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಪಾರ್ವತಿ ಕಳ್ಳಿಮನಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 