ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಯಬೇಕು : ನಿಲಕಂಠ ಮಲಕನ್ನವರ

ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ  ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಯಬೇಕು  :  ನಿಲಕಂಠ ಮಲಕನ್ನವರ If Kannada language and literature are to survive, the habit of reading Kannada books must be develo

ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ  ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಯಬೇಕು  :  ನಿಲಕಂಠ ಮಲಕನ್ನವರ

ಯರಗಟ್ಟಿ  18: : ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಯಬೇಕು, ಜತೆಗೆ ಕನ್ನಡ ಓದಲು ಪ್ರೋತ್ಸಾಹಿಸಬೇಕು ಎಂದು ಸರ್ವಾಧ್ಯಕ್ಷ ಸಾಹಿತಿ ನಿಲಕಂಠ ಮಲಕನ್ನವರ ಹೇಳಿದರು.ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕಿನ 3ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯರಗಟ್ಟಿ ತಾಲೂಕು ಗಾತ್ರದಲ್ಲಿ ಕಿರಿದಾದರೂ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಮಹತ್ವದ ಇತಿಹಾಸ, ಪರಂಪರೆಯನ್ನು ಹೊಂದಿದೆ. ಈ ನಾಡಿನ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ತಾಲೂಕಿನ ಯುವಕ ಯುವತಿಯರು ಮಾಡಬೇಕು ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ  ಅವರು ಕಾರ್ಯಕ್ರಮದ ಆಶಯ ನುಡಿಗಳನ್ನು ಆಡುತ್ತ ಕನ್ನಡ ನಾಡು ನುಡಿಗೆ ಅನೇಕರು ಶ್ರಮಿಸಿದ್ದಾರೆ. ಕನ್ನಡ ಭಾಷೆಯ, ನಾಡು ನುಡಿಯ ಬಗ್ಗೆ ಎಲ್ಲರೂ ಅಭಿಮಾನ ಹೊಂದಬೇಕು, ಕನ್ನಡವನ್ನು ಬಳಸಿ, ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.ಸಮ್ಮೇಳನವನ್ನು ಉದ್ಘಾಟಿಸಿದ ಖ್ಯಾತ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿಯವರು ತಲ್ಲೂರು ಗ್ರಾಮವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಇಲ್ಲಿನ ದೇಸಗತಿ ಮನೆತನದ ರುದ್ರಮ್ಮ ತಾಯಿಯು ಕಿತ್ತೂರು ಸಂಸ್ಥಾನದ ರಾಣಿಯಾಗಿ ಸಂಸ್ಥಾನದ ಹೆಸರುಳಿಸಲು ಕತ್ತಿ, ಕವಚವನ್ನುಟ್ಟು ಹೋರಾಡಿದ ಧೀರ ಮಹಿಳೆಯಾಗಿದ್ದಾಳೆ. ದುರಂತವೆಂದರೆ ಇಂತಹ ವೀರರಾಣಿಯ ಕುರಿತ ಐತಿಹಾಸಿಕ ದಾಖಲೆಗಳು ಅಲಭ್ಯವಾಗಿದ್ದು, ವಿದ್ವಾಂಸರು ಈ ಕುರಿತು ಹೆಚ್ಚಿನ ಸಂಶೋಧನೆಗೆ ತೊಡಗಬೇಕು ಎಂದು ಹೇಳಿದರು.ಶಾಸಕ ವಿಶ್ವಾಸ ವೈದ್ಯ ಮಾತನಾಡಿದ ಅವರು ಕನ್ನಡ ಸಾಹಿತ್ಯ ಜಗತ್ತನ್ನು ಹೊಸ ತಲೆಮಾರಿಗೆ ಪರಿಚಯಿಸುವ ಅನಿವಾರ್ಯತೆ ಇದೆ. ಕನ್ನಡ, ನಾಡು ನುಡಿಯ ವಿಚಾರದ ಜಾಗೃತಿಯನ್ನು ಹೊಸ ತಲೆಮಾರಿಗೆ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.ಇದೆ ಸಂದರ್ಭದಲ್ಲಿ ದೇಸಗತಿ ಮನೆತನದ ಧಣಿಗಳಾದ ವಿಕ್ರಮಕುಮಾರ ದೇಸಾಯಿಯವರು ಡಾ. ರಾಜಶೇಖರ ಬಿರಾದಾರ ಅವರ ಯರಗಟ್ಟಿ ಕಾವ್ಯ ಕುಸುಮ ಹಾಗೂ ಆರ್‌.ಎಸ್‌.ಕಲ್ಲಣ್ಣವರ ಅವರ ಮಕರಂದ ಕೃತಿಗಳನ್ನು ಲೋಕಾರೆ​‍್ಣಗೊಳಿಸಿದರು.ಇದಕ್ಕೂ ಮುಂಚೆ ದೇಸಾಯಿ ಕೋಟೆ ಆವರಣದಿಂದ ಸಮ್ಮೇಳನದ ಸರ್ವಾಧ್ಯಕ್ಷರ ದಂಪತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಕಸಪಾ ತಾಲೂಕಾಧ್ಯಕ್ಷ ತಮ್ಮಣ್ಣ ಕಾಮಣ್ಣವರ, ತಹಶೀಲ್ದಾರ ಎಮ್‌.ವಿ.?? ಗುಂಡಪ್ಪಗೋಳ, ಬಿಇಓ ಎ.ಎ. ಖಾಜಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಬಿ..ಎನ್‌.ಬ್ಯಾಳಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಪಿಡಿಓ ರಾಘವೇಂದ್ರ ಎಸ್‌.ಪಿ, ಕಸಾಪ ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ವಾಲಿ, ಮಾಜಿ ಸೈನಿಕ ಬಸಪ್ಪ ಅಂಗಡಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮುಖಂಡ ಶಂಕರಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರ ಉಪ್ಪಿನ, ಗ್ರಾಪಂ ಮಾಜಿ ಸದಸ್ಯ ಬಸವರಾಜ ಪೂಜೇರ, ಎಂ.ವಿ.ಉಪ್ಪಿನ, ಮೋಹನ ಹಾದಿಮನಿ, ಆರ್‌.ಎಲ್‌. ಜೂಗನವರ, ಈರಣ್ಣಾ ಹುದ್ದಾರ, ಎಸ್‌.ಎಸ್ ಕುರುಬಗಟ್ಟಿಮಠ, ಭಾಸ್ಕರ ಹಿರೇಮೆತ್ರಿ, ಎ.ವ್ಹಿ.ಇಂಗಳೆ, ಬಂಗಾರೆಪ್ಪ ಹರಳಿ, ಮುದ್ದಕಪ್ಪ ದಳವಾಯಿ, ಮಹಾಂತೇಶ ಗೋಡಿ, ಪರ್ವತಗೌಡ ಪಾಟೀಲ ಮತ್ತಿತರಿದ್ದರು. ಬಸನಗೌಡ ಅಣ್ಣಿಗೇರಿ ಸ್ವಾಗತಿಸಿದರು, ವಿಜಯಲಕ್ಷಿ ನಿಂಗದಳ್ಳಿ ನಿರೂಪಿಸಿದರು.