ಮಹಾ ಸಾಧ್ವಿ ಮಲ್ಲಮ್ಮನ ಆದರ್ಶ ಪಾಲಿಸಿ : ಎಸ್.ಎನ್.ಬಸವರಡ್ಡಿ
Ideal policy of Maha Sadhvi Mallamma: S.N. Basavaraddi
ದೇವರಹಿಪ್ಪರಗಿ 10 : ಮಹಾ ಸಾಧ್ವಿ ಮಲ್ಲಮ್ಮನ ಜೀವನದ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ ಎಂದು ಶಸಾಪ ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಎನ್.ಬಸವರಡ್ಡಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ಸಮುದಾಯದ ವತಿಯಿಂದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡಿದರು. ನಂತರ ತಾಲೂಕಿನ ಮಾಜಿ ಕಸಾಪ ಅಧ್ಯಕ್ಷ ಜಿ.ಪಿ. ಬಿರಾದಾರ ಅವರು ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಸೇರಿದಂತೆ ಅನೇಕ ಮಹನೀಯರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗುತ್ತಿದೆ. ಆದರೆ ಅವರ ಆದರ್ಶಗಳನ್ನು ಪಾಲಿಸುವ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು.
ಮಲ್ಲಮ್ಮನವರು ಕಷ್ಟಗಳನ್ನು ಎದುರಿಸಿದ ರೀತಿ, ಹೆಣ್ಣು ಸೊಸೆಯಾಗಿ ಗಂಡನ ಮನೆಯಲ್ಲಿ ಇರಬೇಕಾದ ರೀತಿ , ದಾನ ಧರ್ಮಗಳನ್ನು ಮಾಡುವ ಬಗ್ಗೆ, ದೈವಭಕ್ತಿಯ ಎಲ್ಲರೂ ತಿಳಿದುಕೊಂಡು ನಡೆದಾಗ ಮಾತ್ರ ಜಯಂತಿ ಆಚರಣೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.ರೈತಸಂಘದ ರಾಜ್ಯ ಯುವ ಸಂಚಾಲಕರಾದ ಸಿದ್ದನಗೌಡ ಪಾಟೀಲ ಹಾಗೂ ರೆಡ್ಡಿ ಸಮಾಜದ ತಾಲ್ಲೂಕು ಅಧ್ಯಕ್ಷ ಶಿವಶರಣರಡ್ಡಿ ಅವರಾಧಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಸಂಗಾರೆಡ್ಡಿ ತೆಗ್ಗಿನಮನಿ, ಭೀಮನಗೌಡ ಬಿರಾದಾರ, ಮಹೇಶ ಸ್ಥಾವರಮಠ, ಸುರೇಶ ಕೊಣ್ಣೂರ, ಸಂಗಣ್ಣ ದೇವೂರ, ಶಿವು ಮಲ್ಲಾಬಾದಿ, ಜಗದೀಶ ನೀರಲಗಿ, ಗ್ರಾಮ ಆಡಳಿತ ಅಧಿಕಾರಿಗಳಾದ ರಮಾನಾಥ ಚಕ್ಕಡಿ, ಚನ್ನಬಸು ಹೊಸಮನಿ, ಸಂತೋಷ ತಳವಾರ, ಶ್ರೀಶೈಲ ಜಮಾದಾರ, ಸುರೇಶ ಮಣ್ಣೂರ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಂದಾಯ ಇಲಾಖೆ ಶಿರಸ್ತೇದಾರ ಸುರೇಶ ಮ್ಯಾಗೇರಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ವಂದಿಸಿದರು.
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ 