ನಾಸಾದಿಂದ ಐಕಾನ್ ಹವಾಮಾನ ಉಪಗ್ರಹ ಉಡಾವಣೆ

ವಾಷಿಂಗ್ಟನ್, ಅ 11:   ಅಮೆರಿಕ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾ ಐಯೋನೋಸ್ಪೆರಿಕ್ ಕನೆಕ್ಷನ್ ಎಕ್ಸ್ ಪ್ಲೋರರ್ (ಐಕಾನ್) ಎಂಬ ಹವಾಮಾನ ಉಪಗ್ರಹವನ್ನೊಳಗೊಂಡ  ಪೆಗಸಸ್ ಎಕ್ಸ್ ಎಲ್ ಕ್ಯಾರಿಯರ್ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿತು.       

ಈ ರಾಕೆಟ್ ಅನ್ನು ಹೊತ್ತ ಸ್ಟ್ರಾಗೇಜರ್ ಎಂಬ ಹೆಸರಿನ ಸುಧಾರಿತ ಎಲ್ 1011 ವಿಮಾನ ಮೊದಲು ಅಟ್ಲಾಂಟಿಕ್  ಸಾಗರದ ಮೇಲೆ 39 ಸಾವಿರ ಎತ್ತರಕ್ಕೆ ಹಾರಿ ನಂತರ  ಗುರುವಾರದಂದು ಭಾರತೀಯ ಕಾಲಮಾನದಲ್ಲಿ ರಾತ್ರಿ 10 ಗಂಟೆ ವೇಳೆಗೆ ಪೆಗಸಸ್ ಎಕ್ಸ್ ಎಲ್ ರಾಕೆಟ್ ಅನ್ನು ಉಡಾವಣೆ ಮಾಡಿತು.  

    ಅಮೆರಿಕದ ನಾರ್ತ್ ರೋಪ್ ಗ್ರುಮ್ಮಾನ್ ವಿಮಾನಯಾನ ಕಂಪನಿ ತಯಾರಿಸಿರುವ ಪೆಗಶ್ ಎಕ್ಸ್ ಎಲ್  ರಾಕೆಟ್ ಜಗತ್ತಿನ  ವಾಯುಪ್ರದೇಶದಲ್ಲಿ ಉಡಾವಣೆಯಾದ  ಏಕೈಕ ರಾಕೆಟ್ ಆಗಿದೆ.  

ಉಪಗ್ರಹ ಭೂಮಿಯ ಕೆಳಗಿನ ಕಕ್ಷೆಯನ್ನು ಪ್ರವೇಶಿಸಿದ್ದು, ಭೂಮಿಯಿಂದ 580  ಕಿಮೀ ಎತ್ತರದಲ್ಲಿ ಸುತ್ತುವರಿಯುತ್ತಿದೆ ಎಂದು ನಾಸಾ ದೃಢಪಡಿಸಿದೆ.       

ಐಕಾನ್ ಭೂಮಿ ಹಾಗೂ ಬಾಹ್ಯಾಕಾಶದ ವಾತಾವರಣ ಒಂದಾಗುವ ಪ್ರದೇಶದ ಹವಾಮಾನದ ತಪಾಸಣೆ ನಡೆಸಿ ವರದಿ ನೀಡಲಿದೆ.