ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

 ಬೆಂಗಳೂರು, ನ 6:   ಅಕ್ರಮ ವ್ಯವಹಾರಗಳನ್ನು ನಡೆಸಿರುವ ಪ್ರಕರಣದಲ್ಲಿ ನಗರದ ಹಲವು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರೆಸಿದೆ. ತೆರಿಗೆ ವಂಚನೆ, ಸರ್ಕಾರಕ್ಕೆ ಸೂಕ್ತ ದಾಖಲೆ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಸುಮಾರು 11  ಉದ್ಯಮಿಗಳ ಮನೆ ಮೇಲೆ ಐಟಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ 7 ಗಂಟೆಗೆ ಐಟಿ ದಾಳಿ ಆರಂಭವಾಯಿತು ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ. ನಗರದ ವತರ್ೂರು, ಎಲೆಕ್ಟ್ರಾನಿಕ್ ಸಿಟಿಗಳಲ್ಲಿರುವ ಕೆಲ ಕಂಪನಿಗಳ ಮೇಲೂ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿರುವ ಉದ್ಯಮಿಗಳು ಚೆನ್ನೈ ನಲ್ಲಿಯೂ ಉದ್ಯಮ ನಡೆಸುತ್ತಿರುವ ಹಿನ್ನೆಲೆಯಲ್ಲಿ  ಚೆನ್ನೈ ಐಟಿ ಅಧಿಕಾರಿಗಳಿಂದ ಅಲ್ಲಿಯೂ  ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.  ಬೆಂಗಳೂರು ಹಾಗೂ ಚೆನ್ನೈ ಐಟಿ ತಂಡ ಜಂಟಿಯಾಗಿ ಏಕಕಾಲಕ್ಕೆ ಐಟಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.