ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ನಾಡಗೌಡ

ಕಾರವಾರ 9 : ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೋ ಮತ್ತು ಗೂಗಲ್ ನೆರವು ಕೋರಲಾಗಿದೆ ಎಂದು ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಮೀನುಗಾರಿಕಾ ದೋಣಿಯಲ್ಲಿದ್ದ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಮಾದನಗೆರೆ ಗ್ರಾಮದ ಸತೀಶ್ ಈಶ್ವರ ಹರಿಕಂತ್ರ ಮನೆಗೆ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಡಿಸೆಂಬರ್ 13ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿರುವ ಏಳು ಮೀನುಗಾರರಿದ್ದ ಯಾಂತ್ರಿಕ ದೋಣಿ ಡಿಸೆಂಬರ್ 15ರ ರಾತ್ರಿ ಒಂದು ಗಂಟೆವರೆಗೆ ಸಂಪರ್ಕಕ್ಕೆ ಸಿಗುತ್ತಿತ್ತು. ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಸಂಬಂಧ ಡಿಸೆಂಬರ್ 22ರಂದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಲಾಗಿದ್ದು ಅಂದಿನಿಂದ ದೋಣಿಯಲ್ಲಿದ್ದ ಮೀನುಗಾರರ ಪತ್ತೆಗೆ ನಿರಂತರ ಕಾಯರ್ಾಚರಣೆ ನಡೆದಿದೆ. ಈ ಹಂತದಲ್ಲಿ ರಾಜ್ಯ ಸಕರ್ಾರ ಸುಳಿವು ಸಿಗದ ಮೀನುಗಾರರ ಪತ್ತೆಗಾಗಿ ಇಸ್ರೋ ಮತ್ತು ಗೂಗಲ್ ಸೇರಿದಂತೆ ವಿವಿಧ ಉಪಗ್ರಹ ಸಂಸ್ಥೆಗಳು ಹಾಗೂ ಬಾಹ್ಯಾಕಾಶ ಸಂಸ್ಥೆಗಳ ನೆರವು ಕೋರಿದೆ ಎಂದು ಅವರು ಹೇಳಿದರು.

ರಾಜ್ಯ ಸಕರ್ಾರ ವಿವಿಧ ಹಂತದಲ್ಲಿ ನಾಪತ್ತೆಯಾಗಿರುವ ಮೀನುಗಾರರನ್ನು ಹುಡುಕುವ ಪ್ರಯತ್ನದಲ್ಲಿದ್ದು ನೆರೆಯ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮೀನುಗಾರರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ. ಅಲ್ಲದೆ ಕೇಂದ್ರ ಸಕರ್ಾರಕ್ಕೂ ಮಾನ್ಯ ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರ ಬರೆಯಲಾಗಿದ್ದು ಮೀನುಗಾರರ ಪತ್ತೆಕಾರ್ಯದಲ್ಲಿ ಸಹಕರಿಸುವಂತೆ ಹಾಗೂ ನೌಕಾಪಡೆಯ ನೆರವಿನೊಂದಿಗೆ ಕಾಯರ್ಾಚರಣೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ಸಕರ್ಾರ ಈಗಾಗಲೇ ಹೆಲಿಕಾಪ್ಟರ್, ತಟ ರಕ್ಷಣಾ ಪಡೆ ಹಾಗೂ ಕರಾವಳಿ ಭದ್ರತಾ ಪೊಲೀಸ್ ಪಡೆಯನ್ನು ಬಳಸಿ ಹಾಗೂ ವಿವಿಧ ತಂತ್ರಜ್ಞಾನವನ್ನು ಬಳಸಿ ಸಮುದ್ರದಲ್ಲಿ ಪತ್ತೆಕಾರ್ಯ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಲದೆ ಸ್ಥಳೀಯ ಮೀನುಗಾರರೊಂದಿಗೆ ಸಂಶಯಾಸ್ಪದ ಪ್ರದೇಶಗಳಿಗೂ ಕರಾವಳಿ ಪೊಲೀಸರೊಂದಿಗೆ ಭೇಟಿ ನೀಡಿ ಪತ್ತೆಗಾಗಿ ಕಾಯರ್ಾಚರಣೆ ನಡೆಸಲಾಗಿದೆ. ಆದರೆ ಈವೆರೆಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ ಎಂದು ಅವರು ತಿಳಿಸಿದರು.

ಪಾಕಿಸ್ತಾನದ ಗಡಿ ಉಲ್ಲಂಘಿಸಿರುವ ಸಾಧ್ಯತೆ ತೀರ ವಿರಳ ಎಂದ ಸಚಿವರು, ಮೀನುಗಾರರಿದ್ದ ದೋಣಿಯಲ್ಲಿ ಅಷ್ಟು ದೂರ ಕ್ರಮಿಸಲು ಅಗತ್ಯವಿರುವ ಇಂಧನ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಹೀಗಾಗಿದ್ದರೆ ಈಗಾಗಲೇ ವಿಷಯ ತಿಳಿಯಬೇಕಿತ್ತು. ಆದರೆ ಪಾಕಿಸ್ತಾನ ಗಡಿ ಉಲ್ಲಂಘಿಸಿದ ಸಾಧ್ಯತೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದಾಗ್ಯೂ ಕೇಂದ್ರ ಸಕರ್ಾರಕ್ಕೆ ಬರೆದಿರುವ ಪತ್ರದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ ಎಂದರು.

ಮೀನುಗಾರರು ಜೀವಂತವಾಗಿರುವ ಬಗ್ಗೆ ಅಚಲ ವಿಶ್ವಾಸ ನಮ್ಮದು. ಅತೀ ಶೀಘ್ರವೇ ಅವರ ಪತ್ತೆಯಾಗಬೇಕು ಎಂಬ ಅತೀವ ಆಶಯದೊಂದಿಗೆ ನಮ್ಮೆಲ್ಲ ಪ್ರಯತ್ನಗಳನ್ನು ಮುಂದುವರಿಸಿದ್ದೇವೆ ಹಾಗೂ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳಿಗೆ ವಿಶ್ವಾಸ ತುಂಬಲಾಗಿದೆ ಎಂದು ಸಚಿವರು ಹೇಳಿದರು.

ನಂತರ ಅವರು ನಾಪತ್ತೆಯಾಗಿರುವ ಜಿಲ್ಲೆಯ ಇತರ ಮೀನುಗಾರರಾದ ಕುಮಟಾ ತಾಲೂಕು ಹೊಲನಗದ್ದೆ ಲಕ್ಷ್ಮಣ ನಾರಾಯಣ, ಹೊನ್ನಾವರ ತಾಲೂಕಿನ ರವಿ ಮಂಕಿ, ಭಟ್ಕಳ ತಾಲೂಕಿನ ರಮೇಶ್, ಹರೀಶ್ ಮೊಗೇರ ಕುಟುಂಬಗಳಿಗೆ ಭೇಟಿ ನೀಡಿ ನಂತರ ಉಡುಪಿ ಜಿಲ್ಲೆಯ ಇಬ್ಬರು ಮೀನುಗಾರರ ಮನೆಗಳಿಗೆ ಭೇಟಿ ನೀಡಿ ಅವರ ಕುಟುಂಬಸ್ಥರೊಂದಿಗೆ ಚಚರ್ಿಸಲಾಗುವುದು ಎಂದು ಹೇಳಿ ತೆರಳಿದರು.

ಅವರೊಂದಿಗೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಇನ್ನಿತರರು ಇದ್ದರು.